Advertisement

ಕಾರ್ಕಳದಲ್ಲಿ ವಿಶ್ವ ರೇಡಿಯೋ ದಿನಾಚರಣೆ: ಹಳೆಯ ರೇಡಿಯೋ ಗೋಪುರ ನವೀಕರಣಕ್ಕೆ ರೇಡಿಯೋ ಮಣಿಪಾಲ್ ಬೆಂಬಲ

ರೇಡಿಯೋ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರವು ಕ.ಸಾ.ಪ. ಉಡುಪಿ ತಾಲ್ಲೂಕು ಘಟಕದ ಸಹಯೋಗದಲ್ಲಿ, ಕಾರ್ಕಳ ಗಾಂಧಿಮೈದಾನ ಬಳಿ ಇರುವ ರೇಡಿಯೋ ಗೋಪುರವನ್ನು ನವೀಕರಿಸಲು ಹೊರಟಿರುವ ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡದ ಕನಸಿಗೆ ಬೆಂಬಲವಾಗಿ ಒಂದು ರೇಡಿಯೋ ಸೆಟ್‌ ಅನ್ನು ಕೊಡುಗೆಯಾಗಿ ನೀಡಿತು.

ರೇಡಿಯೋ ಕೇಳುವ ಸಂಸ್ಕೃತಿಯನ್ನು ಬೆಳೆಸುವ ಹಾಗೂ ಹಳೆಯ ರೇಡಿಯೋ ಗೋಪುರದ ನೆನಪನ್ನು ಉಳಿಸುವ ಉದ್ದೇಶದಿಂದ, ರೇಡಿಯೋ ಮಣಿಪಾಲ್ ಕಾರ್ಕಳದಲ್ಲಿ ಸ್ವಚ್ಛ ಕಾರ್ಕಳ ಬ್ರಿಗೇಡ್ ಜೊತೆಗೂಡಿ ವಿಶ್ವ ರೇಡಿಯೋ ದಿನವನ್ನು ಆಚರಿಸಿತು. ಈ ಸಂದರ್ಭ ರೇಡಿಯೊ ಜೊತೆಗಿನ ನಂಟನ್ನು ಸ್ವಚ್ಛ ಕಾರ್ಕಳ ಬ್ರಿಗೇಡ್ ಸದಸ್ಯರು ಮೆಲುಕು ಹಾಕಿದರು. ಈ ಹಳೆಯ ರೇಡಿಯೋ ಗೋಪುರವನ್ನು ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಶ್ರೀ ಲಾಲ್ ಬಹಾದೂರ್ ಶಾಸ್ತ್ರಿ ಅವರು ಉದ್ಘಾಟಿಸಿದ್ದರು.ಈ ಸಂದರ್ಭ ರೇಡಿಯೊ ಮಣಿಪಾಲ್ ನ ಡಾ.ರಶ್ಮಿ ಅಮ್ಮೆಂಬಳ ಹಾಗೂ ಸ್ವಚ್ಛ ಕಾರ್ಕಳ ಬ್ರಿಗೇಡ್ ಸದಸ್ಯರು ಉಪಸ್ಥಿತರಿದ್ದರು. ಕ.ಸಾ.ಪ ಉಡುಪಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಜನಾರ್ದನ ಕೊಡವೂರು ಸಹಕರಿಸಿದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions