ನಿಖಿಲ್ ಕುಮಾರ ಸ್ವಾಮಿಯವರೇ ನೀವು ನಿಜವಾಗಿಯೂ ನೖತಿಕ ಬೆಂಬಲ ಸೂಚಿಸಬೇಕಾಗಿರುವುದು ಪ್ರಜ್ವಲ್ ರೇವಣ್ಣರಿಂದ ಅನ್ಯಾಯಕ್ಕೊಳಗಾದ ಮಹಿಳಾ ಸಂತ್ರಸ್ತ್ರರಿಗೆ , ಯಾಕಂದ್ರೆ ಅಲ್ಲಿ ಅವರನ್ನು ಕಾಪಾಡಲು ಅಣ್ಣಪ್ಪ ಸ್ವಾಮಿಯೂ ಇಲ್ಲಾ ಹಾಗೇ ಮಂಜುನಾಥ ಸ್ವಾಮಿಯೂ ಇಲ್ಲಾ , ಇಲ್ಲಿ ನೀವು ಹೇಳಿದ ಧರ್ಮಾಧಿಕಾರಿಯವರನ್ನು ಕಾಪಾಡಲು ಪಕ್ಕದಲ್ಲೇ ಅಣ್ಣಪ್ಪ ಸ್ವಾಮಿಯೂ ಇದ್ದಾನೆ ಮತ್ತೆ ಮಂಜುನಾಥ ಸ್ವಾಮಿಯೂ ಇದ್ದಾನೆ. ಹಾಗಾಗಿ ಸಧಾ ಅವರನ್ನು ಕಾಪಾಡುತ್ತಾರೆ. ನಿಮ್ಮ ಸತ್ಯ ಯಾತ್ರೆ ಹೊಳೆನರಸೀಪುರಕ್ಕೆ ಯಾಕೆ ಹೋಗಿಲ್ಲಾ ?
ಅನ್ಯಾಯವಾಗಿ ಬಡವರ , ದುರ್ಬಲರ ಹೆಣ್ಣು ಮಕ್ಕಳ ಮೇಲೆ ಲೖಂಗಿಕ ಧೌರ್ಜನ್ಯ ತಮ್ಮ ಕಾಲ ಬುಡದಲ್ಲೇ ಆಯಿತಲ್ಲಾ ಅದು ತಮಗೆ ಕಾಣಿಸಲಿಲ್ಲವೇ ?
ಆ ಅಮಾಯಕ ಹೆಣ್ಣು ಮಕ್ಕಳಿಗೆ ಧೖರ್ಯ ತುಂಬಲು, ಸಾಂತ್ವಾನ ಹೇಳಲು ತಾವು ಯಾವ ಯಾತ್ರೆ ಕೖಗೊಂಡಿರಿ ?
ಹಾಗೆಯೇ ಧರ್ಮಾಧಿಕಾರಿಗಳು ನೊಂದಿದ್ದಾರೆ ಅವರಿಗೆ ನೖತಿಕ ಬೆಂಬಲ ಸೂಚಿಸಲು ಬಂದಿದ್ದೇವೆ ಎಂದಿರಲ್ಲಾ.
ಅಲ್ಲಿ ನಿಮ್ಮ ದೊಡ್ಡಪ್ಪ ಮಗನಿಂದಾಗಿ ತುಂಬಾ ನೊಂದಿದ್ದಾರೆ , ನೋವಿನ ಕೊರಗಿನಲ್ಲೇ ಕಾಲ ಕಳೆಯುತ್ತಿದ್ದಾರೆ ಅವರಿಗೇಕೆ ನೖತಿಕ ಬೆಂಬಲ ತುಂಬಲು ತಮ್ಮ ಸತ್ಯ ಯಾತ್ರೆ ಹೋಗಿಲ್ಲಾ ?
ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಇದರ ಮೖಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಪ್ರಶ್ನಿಸಿದ್ದಾರೆ.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions