Advertisement

ಉಡುಪಿ ; ಸಾಲಿಹಾತ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ

ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ತೋನ್ಸೆಯ ಸಾಲಿಹಾತ ಶಿಕ್ಷಣ ಸಂಸ್ಥೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಾಲಿಹಾತ ಶಿಕ್ಷಣ ಸಂಸ್ಥೆಯ ಸಲಹಾ ಸಮಿತಿಯ ಅಧ್ಯಕ್ಷರಾದ ಡಾ. ಶಹನ್ವಾಜ್ ಇವರು ಶಿಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಾ "ವಿದ್ಯಾರ್ಥಿಗಳಿಗೆ ಕೇವಲ ಪಾಠ ವಿಷಯವನ್ನು ವರ್ಗಾಯಿಸುವರು ಆಗದೇ, ಅವರನ್ನು ಜೀವನದಲ್ಲಿ ಎದುರಾಗುವ ಸಮಸ್ಯೆಗಳ ಪರಿಹಾರೋಪಾಯದ ಮಾರ್ಗದರ್ಶನದ ಜೊತೆ ಸಮಾಜದಲ್ಲಿ ಕೂಡಿ ಬಾಳುವ ವ್ಯವಸ್ಥೆಯ ಕುರಿತಾಗಿ ತಿಳಿಸಬೇಕು" ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿವೃತ ಸರ್ಕಾರಿ ಶಾಲಾ ಶಿಕ್ಷಕಿ ಶ್ರೀಮತಿ ದಯಾವತಿ, ಅರೆಬಿಕ್ ಶಿಕ್ಷಕಿ ರಹಮತುನ್ನಿಸಾ ಹಾಗೂ ಸಾಲಿಹಾತ್ ಶಾಲಾ ಹಿರಿಯ ಸಹ ಶಿಕ್ಷಕಿ ಶ್ರೀಮತಿ ಲವೀನಾ ಕ್ಲಾರಾ ಇವರುಗಳನ್ನು ಸನ್ಮಾನ ಮಾಡಲಾಯಿತು.

ಟ್ರಸ್ಟ್ ನ ಖಜಾಂಚಿ ಜನಾಬ್ ಅಬ್ದುಲ್ ಖಾದರ್ ಇವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ಟ್ರಸ್ಟಿ ಹುಸೇನ್ ಮಾಸ್ಟರ್, ಶಾಲಾ ವಿಭಾಗದ ಆಕಾಡೆಮಿ ಮುಖ್ಯಸ್ಥ ಹಸೀಬ್ ತರಫದಾರ್ , ಕಾಲೇಜು ಪ್ರಾಂಶುಪಾಲರಾದ ಡಾ/ ಸಬೀನಾ ,ದಿವ್ಯಾ ಪೈ, ಮುಖ್ಯ ಶಿಕ್ಷಕಿ ಶ್ರೀಮತಿ ಸುನಂದಾ, ಶಹದಾತ್ ಬೆಂಗ್ರೆ, ಯಾಸ್ಮಿನ್ ಭಾನು, ಅರೆಬಿಕ್ ವಿಭಾಗದ ಮುಖ್ಯಸ್ಥರಾದ ಕುಲಸುಂ ಅಬೂಬಕರ್, ಶಾಹಿದ್ ಮೌಲಾನಾ ಉಪಸ್ತಿತರಿದ್ದರು.

ಆಡಳಿತಾಧಿಕಾರಿ ಅಸ್ಲಾಂ ಹೈಕಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಥಮಿಕ ವಿಭಾಗದ ಶಾಹದಾತ್ ಸ್ವಾಗತಿಸಿದರು, ಶಿಕ್ಷಕಿ ತಾಜುನೀಸಾ ಧನ್ಯವಾದ ಹೇಳಿದರು. ಶಿಕ್ಷಕಿ ಮೇರಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions