Advertisement

‘ಉಡುಪಿ-ಉಚ್ಚಿಲ ದಸರಾ | ವೀಕ್ಷಕರಿಗೆ ರಸದೌತಣ ನೀಡಿದ ‘ನೃತ್ಯ

ದ. ಕ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ‘ಉಡುಪಿ-ಉಚ್ಚಿಲ ದಸರಾ 2025’ ರಲ್ಲಿ ರಾಜ್ಯ ಮಟ್ಟದ ಆಹ್ವಾನಿತ ತಂಡಗಳ ನೃತ್ಯ ಸ್ಪರ್ಧೆ ‘ವೀಕ್ಷಕರಿಗೆ ರಸದೌತಣ ನೀಡಿದೆ.

ಬಲಿಷ್ಠ ತಂಡಗಳ ಪೈಪೋಟಿ ತಮ್ಮ ನೃತ್ಯದ ಮೂಲಕ ನೆರೆದವರನ್ನು ಮನರಂಜಿಸಿದರು. ರಾಜ್ಯ ಮಟ್ಟದ 17 ನೃತ್ಯ ತಂಡಗಳು ಈ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದೆ.

ಪ್ರಥಮ ಸ್ಥಾನವನ್ನು ‘ಎಕ್ಷ್ಮೀಮ್‌ ಡ್ಯಾನ್ಸ್ ಅಕಾಡೆಮಿ ಉಡುಪಿ’, ಎರಡನೇ ಸ್ಥಾನವನ್ನು ‘ನಾಟ್ಯ ಸ್ಕೂಲ್ ಆಫ್‌ ಡ್ಯಾನ್ಸ್ ಕೋಟೇಶ್ವರ, ಮೂರನೇ ಸ್ಥಾನವನ್ನು ‘ಲಾನ್ ಮಂಗಳೂರು’, ನಾಲ್ಕನೇ ಸ್ಥಾನವನ್ನು ‘ಟೀಮ್ ಜ್ಯುನಿಯರ್ ಎಕ್ಸ್ ಉಡುಪಿ’ ಪಡೆದುಕೊಂಡಿತು. ಭಾಗವಹಿಸಿದ 14 ತಂಡಗಳಿಗೂ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ತಲಾ 10000 ರೂ. ಪ್ರೋತ್ಸಾಹಕರ ಬಹುಮಾನ ನೀಡಿದರು.

ಸಮಾರೋಪ ಸಮಾರಂಭದಲ್ಲಿ ದಸರಾ ರೂವಾರಿ, ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಜಿ. ಶಂಕರ್, ಕಾಂಗ್ರೆಸ್‌ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಅಧ್ಯಕ್ಷ ಜಯ ಸಿ. ಕೋಟ್ಯಾನ್‌ ಬೆಳ್ಳಂಪಳ್ಳಿ, ಉಚ್ಚಿಲ ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಅಜಿತ್ ಸುವರ್ಣ ಮುಂಬೈ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಕಾರ್ಯದರ್ಶಿ ಶರಣ್‌ ಕುಮಾರ್ ಮಟ್ಟು, ಕ್ಷೇತ್ರಾಡಳಿಯ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಶಾಲಿನಿ ಜಿ. ಶಂಕರ್, ಶ್ಯಾಮಿಲಿ ಶಂಕ‌ರ್, ಶಿಲ್ಪಿ ಶಮಿತ್ ಕುಂದ‌ರ್, ಉಷಾರಾಣಿ, ಸಂಧ್ಯಾ ಸುನಿಲ್, ಸುಗುಣ, ಮನೋಜ್ ಉಚ್ಚಿಲ, ದಿನೇಶ್ ಎರ್ಮಾಳ್, ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿಜೇತ ಶೆಟ್ಟಿ ಹಾಗು ಸಾಹಿಲ್ ರೈ ನಡೆಸಿಕೊಟ್ಟರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions