ಉಡುಪಿ : ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ, ಉಡುಪಿ ಜಿಲ್ಲೆಯ ಇದರ 2026ನೇ ಅವಧಿಗೆ ಶೇಖ್ ಆಯಾನ್ ಅಯ್ಯುಬ್ ಅವರು ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎಸ್‌ಐಒ ಕರ್ನಾಟಕ ರಾಜ್ಯ ಕಾರ್ಯದರ್ಶಿ ಆಸೀಫ್ ಡಿ.ಕೆ ಅವರ ನೇತೃತ್ವದಲ್ಲಿ ನಡೆದ ಆಂತರಿಕ ಸಾಂಸ್ಥಿಕ ಪ್ರಕ್ರಿಯೆಯ ಮೂಲಕ ಈ ಚುನಾವಣೆ ನಡೆಸಲಾಯಿತು.
ಆಯಾನ್ ಅಯ್ಯುಬ್ ಅವರು ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲದಲ್ಲಿ ಅಂತಿಮ ವರ್ಷದ ಕಾನೂನು ಪದವಿಯನ್ನು ಪಡೆಯುತ್ತಿದ್ದು , ಮಲ್ಪೆಯ ನಿವಾಸಿಯಾಗಿದ್ದಾರೆ.
ಈ ಹಿಂದೆ ಅವರು ಎಸ್‌ಐಒ ಮಲ್ಪೆಯ ಸ್ಥಾನೀಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.ಉಡುಪಿ ಜಿಲ್ಲೆಯಾದ್ಯಂತ ಹಲವು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions