Advertisement

ಉಡುಪಿ | ಹುಟ್ಟೂರಿನಲ್ಲಿ ಜಯನ್ ಮಲ್ಪೆಗೆ ಅದ್ದೂರಿ ಸನ್ಮಾನ

ದಲಿತರಲ್ಲಿ ಸಂಘಟನೆಯನ್ನು,ಪ್ರಜ್ಞಾವAತಿಕೆಯನ್ನು ಬೆಳೆಸಿ,ಅಂಜುವ ಜನರಲ್ಲಿ ಗರ್ಜಿಸುವ ಧೈರ್ಯ ತುಂಬಿದ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆಗೆ ಹುಟ್ಟೂರಿನಲ್ಲಿ ಅದ್ದೂರಿಯಾಗಿ ಸನ್ಮಾನ ಮಾಡಲಾಯಿತು.

ಮಲ್ಪೆಯ ಸರಸ್ವತಿ ಮಹಿಳಾ ಸಾಂಸ್ಕೃತಿಕ ಕಲಾತಂಡ ಹಾಗೂ ಸರಸ್ವತಿ ಜಾನಪದ ಕಲಾತಂಡದವರು ಕರ್ನಾಟಕ ಸರಕಾರ ಇತ್ತಿಚ್ಚೆಗೆ ಡಾ.ಬಾಬು ಜಗಜೀವನ ರಾಂ ಪ್ರಶಸ್ತಿನೀಡಿ ಗೌರವಿಸಿದ ಹಿನ್ನಲೆಯಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ನಿವೃತ ಮುಖ್ಯೋಪಾಧ್ಯಾಯ ವಾಸುದೇವ ಮಾಸ್ತರ್ ಮಾತನಾಡಿ ನಿಸ್ವಾರ್ಥವಾಗಿ ಯಾರು ತಮ್ಮನ್ನು ದಲಿತ ಚಳುವಳಿಗೆ ಸಮರ್ಪಿಸಿಕೊಳ್ಳುತ್ತಾರೋ ಅಂತಹವರನ್ನು ಪ್ರಶಸ್ತಿ ಕೀರ್ತಿ ಹುಡುಕಿಕೊಂಡು ಬರುತ್ತದೆ.ಆದರೆ ದಲಿತ ಸಂಘಟನೆಯ ಹೆಸರಿನಲ್ಲಿ ಯಾರು ಸಂಪತ್ತು ಮತ್ತು ಪ್ರಚಾರದ ಬೆನ್ನು ಹತ್ತುತ್ತಾರೋ ಅವರು ದಲಿತ ಸಮಾಜದಲ್ಲಿ ಪತನಗೊಳ್ಳುತ್ತಾರೆ ಎಂದರು.

ಅಂಬೇಡ್ಕರ್ ಯುವಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಮಾತನಾಡಿ,ಹಲವು ದಶಕಗಳಿಂದ ಜಯನ್ ಮಲ್ಪೆ ತಮ್ಮ ರಕ್ತ ಸುರಿಸಿ ಕಟ್ಟಿದ ದಲಿತ ಚಳುವಳಿ ಕೆಲವರ ಸ್ವಾರ್ಥಕ್ಕಾಗಿ ಬಲಿಯಾದರೂ ಎಂದೂ ಹತಾಶೆಗೊಳ್ಳದೆ ಈ ನೆಲದಲ್ಲಿ ಸಂಘಟನೆಯನ್ನು ಕಟ್ಟಿ ಯುವಜನಾಂಗದಲ್ಲಿ ಸ್ವಾಭಿಮಾನ,ಸ್ವಾವಲಂಬನೆಯನ್ನು ತುಂಬಿಸಿ ಹೋರಾಟದ ಬದುಕು ತಂದಿದ್ದಾರೆ ಎಂದರು.

ಗ್ರಂಥಪಾಲಕಿ ಯಶೋದ ರಮೇಶ್ ಪಾಲ್ ಮಾತನಾಡಿ ಯಾವುದೇ ಅರ್ಜಿ ನೀಡದೆ ಸರಕಾರವೇ ಗುರುತಿಸಿ ಪ್ರಶಸ್ತಿ ನೀಡಿರುವುದು ಉಡುಪಿ ಜಿಲ್ಲೆಯ ಇತಿಹಾಸದಲ್ಲೇ ಜಯನ್ ಮಲ್ಪೆಗೆ ಪ್ರಪ್ರಥಮವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೇಜಶ್ವಿನಿ ರಾಜೇಶ್‌ವಹಿಸಿದ್ದರು. ವೇದಿಕೆಯಲ್ಲಿ ಸರಸ್ವತಿ ಜಾನಪದ ಕಲಾತಂಡದ ಅಧ್ಯಕ್ಷ ಸದಾನಂದ ಬಲರಾಮನಗರ, ಹರೀಶ್ ಸಲ್ಯಾನ್, ರಾಜೇಶ್, ದಯಾಕರ್ ಮಲ್ಪೆ,ಪ್ರಸಾದ್, ಪ್ರಮೀಳ ಎಚ್, ವನಿತಾ, ದೀಪಿಕ, ಪೂರ್ಣಿಮ, ಸುಜಾತ, ವಿನೋದ, ಅಶ್ವಿನಿ, ಲೀಲಾವತಿ,ಮುಂತಾದವರು ಉಪಸ್ಥಿತರಿದ್ದರು.

ಗೀತಾ ಬಲರಾಮನಗರ ಸ್ವಾಗತಿಸಿ,ಕುಮಾರಿ ಧರಿತ್ರಿ ವಂದಿಸಿದರು. ಶ್ರೀಮತಿ ದೀಪಿಕ ಮೋಹನ್ ಕಾರ್ಯಕ್ರಮ ನಿರೂಪಿಸಿದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions