ಉಡುಪಿ ನಗರದ ಕೆ.ಎಂ. ಮಾರ್ಗದಲ್ಲಿರುವ ಅಂದ್ರಾದೆ ಆರ್ಕೇಡ್‌ನಲ್ಲಿ ‘ಮೆಡಿಕ್ವೆಸ್ಟ್ ಹೆಲ್ತ್‌ಕೇರ್’ ಕ್ಲಿನಿಕಲ್ ಲ್ಯಾಬೋರೇಟರಿಯನ್ನು ವಿಶ್ವಪ್ರಸನ್ನತೀರ್ಥ ಶ್ರೀಪಾದರು ಉದ್ಘಾಟಿಸಿದರು.
ಬಳಿಕ ಆಶೀರ್ವಚನ ನೀಡಿದ ಅವರು, ಒಂದು ಕಾಲದಲ್ಲಿ ವಿವಿಧ ಕಾಯಿಲೆಗಳ ಚಿಕಿತ್ಸೆಗೆ ಹೈದರಾಬಾದ್, ಮುಂಬೈ, ಚೆನ್ನೈ ಮೊದಲಾದ ನಗರಗಳಿಗೆ ತೆರಳಬೇಕಾಗಿದ್ದ ಪರಿಸ್ಥಿತಿ ಇತ್ತು. ಆದರೆ ಇದೀಗ ಅತ್ಯಾಧುನಿಕ ಆರೋಗ್ಯ ಸೇವೆಗಳು ಉಡುಪಿಯಲ್ಲೇ ಲಭ್ಯವಾಗುತ್ತಿರುವುದು ಸಂತಸದ ಸಂಗತಿ ಎಂದರು.
ಉಡುಪಿಯು ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಬ್ಯಾಂಕಿಂಗ್ ಹಾಗೂ ಯಕ್ಷಗಾನ ಕ್ಷೇತ್ರಗಳಲ್ಲಿ ದೇಶದ ಗಮನ ಸೆಳೆದಿದ್ದು, ಇದೀಗ ಆರೋಗ್ಯ ಸೇವೆಯಲ್ಲಿಯೂ ಮಹತ್ವದ ಮೈಲುಗಲ್ಲು ಸಾಧಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಯಶ್ ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಜ್ಯೋತಿಷ ವಿದ್ವಾನ್ ಕಬಿಯಾಡಿ ಜಯರಾಮ್ ಆಚಾರ್ಯ ಹಾಗೂ ನಗರಸಭೆಯ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ ಶುಭ ಹಾರೈಸಿದರು.
#### ವಿಶೇಷತೆಗಳು
ಮೆಡಿಕ್ವೆಸ್ಟ್ ಹೆಲ್ತ್‌ಕೇರ್ 2020ರ ನವೆಂಬರ್ 20ರಂದು ಆರಂಭಗೊಂಡಿದ್ದು, ಪ್ರಸ್ತುತ 9 ಸಣ್ಣ ಪ್ರಯೋಗಾಲಯಗಳು ಹಾಗೂ 16 ಸಂಗ್ರಹಣಾ ಕೇಂದ್ರಗಳನ್ನು ಒಳಗೊಂಡಂತೆ ಒಟ್ಟು 25 ಶಾಖೆಗಳನ್ನು ಹೊಂದಿದೆ. ಮಂಗಳೂರಿನ NABL ಪ್ರಮಾಣೀಕೃತ ಪ್ರಯೋಗಾಲಯವಾಗಿರುವ ಸಂಸ್ಥೆ ಪ್ಯಾನ್-ಇಂಡಿಯಾ ವಿಸ್ತರಣೆಯ ಯೋಜನೆಯನ್ನು ಹೊಂದಿದೆ.
ಪ್ರಯೋಗಾಲಯದಲ್ಲಿ ರೋಚೆ, ಮೆರಿಲ್ ಹಾಗೂ ಮೈಂಡ್ರೇ ಕಂಪನಿಗಳ ವಿಶ್ವದರ್ಜೆಯ ವಿಶ್ಲೇಷಕ ಯಂತ್ರಗಳನ್ನು ಅಳವಡಿಸಲಾಗಿದೆ. ಸ್ವಯಂ-ರಚಿತ ವರದಿ ಸಾಫ್ಟ್‌ವೇರ್ ಮೂಲಕ ಕಡಿಮೆ ಮಾನವ ಹಸ್ತಕ್ಷೇಪ ಮತ್ತು ದೋಷ ಸಾಧ್ಯತೆಯನ್ನು ತಗ್ಗಿಸಲಾಗಿದೆ. ಜೊತೆಗೆ MD ರೋಗಶಾಸ್ತ್ರ, ಜೀವರಾಸಾಯನಿಕ ಹಾಗೂ ಸೂಕ್ಷ್ಮಜೀವ ವಿಜ್ಞಾನ ತಜ್ಞ ವೈದ್ಯರು ವರದಿಗಳ ವಿಶ್ಲೇಷಣೆ ನಡೆಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಕೃಷ್ಣಪ್ರಸಾದ್ ಕೂಡ್ಲು ವಹಿಸಿದ್ದರು.
ಸಂಸ್ಥೆಯ ನಿರ್ದೇಶಕ ರಾಘವೇಂದ್ರ ಗಂಗೊಳ್ಳಿ, ನ್ಯಾಯವಾದಿ ಉಮೇಶ್ ಶೆಟ್ಟಿ ಕಳತ್ತೂರು, ನಗರಸಭೆಯ ಮಾಜಿ ಸದಸ್ಯ ಪ್ರಕಾಶ್ ಅಂದ್ರಾದೆ, ಅಂದ್ರಾದೆ ಸಂಕೀರ್ಣದ ಮಾಲಕ ಡೊಮಿನಿಕ್ ಮಸ್ಕರನೆಸ್ ಹಾಗೂ ನಿವೃತ್ತ ಡಿಎಫ್‌ಒ ರಘುರಾಮ್ ರಾವ್ ಉಪಸ್ಥಿತರಿದ್ದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ರೀನಾ ಟಿ.ಬಿ. ಸ್ವಾಗತಿಸಿದರು. ಮಧ್ವವಲ್ಲಭ ಆಚಾರ್ಯ ವಂದಿಸಿದರು. ಎಂಐಟಿ ಪ್ರಾಧ್ಯಾಪಕ ಡಾ. ಬಾಲಕೃಷ್ಣ ಮದ್ದೋಡಿ ಕಾರ್ಯಕ್ರಮ ನಿರೂಪಿಸಿದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions