ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಕಳೆದ 45 ದಿನಗಳಿಂದ ರಕ್ಷಿಸಿಡಲಾಗಿದ್ದ ಎರಡು ಅಪರಿಚಿತ ಶವಗಳ ವಾರಸುದಾರರು ಪತ್ತೆಯಾಗದ ಹಿನ್ನೆಲೆಯಲ್ಲಿ, ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಬೀಡಿನಗುಡ್ಡೆ ದಫನಭೂಮಿಯಲ್ಲಿ ಗೌರವಯುತವಾಗಿ ದಫನ ಕಾರ್ಯ ನೆರವೇರಿಸಲಾಯಿತು.
ಅಜ್ಜರಕಾಡು ಜಿಲ್ಲಾಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನೇಪಾಳದ ಪ್ರಜೆಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಇದಲ್ಲದೆ, ಸಾರ್ವಜನಿಕ ಸ್ಥಳವೊಂದರಲ್ಲಿ ಗಂಡಸಿನ ಅಸ್ಥಿಪಂಜರವೊಂದು ಪತ್ತೆಯಾಗಿತ್ತು. ಈ ಎರಡೂ ಶವಗಳನ್ನು ಗುರುತಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಾಗೂ ಆಸ್ಪತ್ರೆ ವತಿಯಿಂದ ಕ್ರಮಗಳು ಕೈಗೊಳ್ಳಲಾಗಿದ್ದರೂ ವಾರಸುದಾರರು ಪತ್ತೆಯಾಗಲಿಲ್ಲ.
ಮರಣೋತ್ತರ ಪರೀಕ್ಷೆಯನ್ನು ಡಾ. ರಮೇಶ್ ಕುಂದರ್ ನಡೆಸಿದರು. ನಗರ ಪೊಲೀಸ್ ಠಾಣೆಯ ಎಎಸ್‌ಐ ತಾರಾನಾಥ್ ಹಾಗೂ ತನಿಖಾ ಸಹಾಯಕಿ ಜಾಸ್ವ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು.
ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರ ನೇತೃತ್ವದಲ್ಲಿ ರವಿವಾರ ದಫನ ಕಾರ್ಯ ನಡೆಯಿತು. ವಿಕಾಸ್ ಶೆಟ್ಟಿ, ಪ್ಲವರ್ ವಿಷ್ಣು, ಸಾಜಿ ಕುಮಾರ್, ಹರೀಶ್ ಪೂಜಾರಿ ಹಾಗೂ ಸಚಿನ್ ಮಲ್ಪೆ ದಫನ ಕಾರ್ಯದಲ್ಲಿ ಸಹಕರಿಸಿದರು.
ಅಪರಿಚಿತ ಶವಗಳಿಗೂ ಮಾನವೀಯತೆ ಹಾಗೂ ಗೌರವದೊಂದಿಗೆ ಅಂತಿಮ ವಿಧಿ ನೆರವೇರಿಸುವುದು ಸಮಾಜದ ಕರ್ತವ್ಯ ಎಂಬ ಸಂದೇಶ ಈ ಘಟನೆಯ ಮೂಲಕ ವ್ಯಕ್ತವಾಗಿದೆ.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions