Advertisement

ಉಡುಪಿ | ಧರ್ಮಸ್ಥಳದಲ್ಲಿ ಸ್ವತಂತ್ರ ಪತ್ರಕರ್ತರ ಮೇಲೆ ಗೂಂಡಾ ದಾಳಿ - ಸಿಪಿಎಂ ಖಂಡನೆ

ಧರ್ಮಸ್ಥಳದಲ್ಲಿ ನಡೆದಿರುವ ಅಸಹಜ ಸಾವುಗಳ ತನಿಖೆ ನಡೆಸುವಂತೆ ಪ್ರಸಾರ ನಡೆಸುತ್ತಿರುವ ನಾಲ್ವರು ಸ್ವತಂತ್ರ ಪತ್ರಕರ್ತರಾದ ಅಜಯ್ ಅಂಚನ್, ಅಭಿಜಿತ್ ಇತರರ ಮೇಲೆ ಬಹುಶಃ ಕೊಲೆ ನಡೆಸಿದವರ ಕಡೆಯ ಗೂಂಡಾಗಳು ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ಖಂಡಿಸುತ್ತದೆ.

ಹಲ್ಲೆ ನಡೆಸಿದವರ ವೀಡಿಯೋಗಳು ಅವರ ಚಹರೆಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದು ಪೋಲಿಸ್ ಇಲಾಖೆ ಯಾವ ಒತ್ತಡಕ್ಕೂ ಮಣಿಯದೇ ಇವರನ್ನು ಬಂಧಿಸಿ ತನಿಖೆಗೆ ಒಳಪಡಿಸಿದರೆ ಇನ್ನಷ್ಟು ಸತ್ಯಗಳು ಹೊರಬರುತ್ತದೆ.

ಅಸಹಜ ಸಾವುಗಳ ತನಿಖೆ ಆಗಬೇಕು ಎಂದು ಪ್ರಜ್ಞಾವಂತರು ಧ್ವನಿ ಎತ್ತಿದರೆ ಅದನ್ನು ಅದು ಕ್ಷೇತ್ರದ ನಂಬಿಕೆಗೆ ವಿರುದ್ಧವಾಗಿ ಅಪಪ್ರಚಾರ ಎಂದು ಪ್ರಕರಣದ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿ ಕೊಲೆಗಡುಕರನ್ನು ರಕ್ಷಿಸುತ್ತಿರುವುದು ಖಂಡನೀಯವಾಗಿದೆ. ಪದ್ಮಲತಾ ಕೊಲೆಯಿಂದ ಇಲ್ಲಿಯವರೆಗೂ ಪಕ್ಷ ಹೋರಾಟ ಮಾಡಿದ್ದು ದೇವರ ಅಥವ ನಂಬಿಕೆಗೆ ವಿರುದ್ಧವಲ್ಲ ಅನ್ಯಾಯುತವಾಗಿ ನೂರಾರು ಅತ್ಯಾಚಾರ ಕೊಲೆ ನಡೆದರೂ ಒಂದೂ ಪತ್ತೆಯಾಗದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ನಡೆಸಿದ ಹೋರಾಟ ಎಂದು ಮತ್ತೊಮ್ಮೆ ಸಿಪಿಎಂ ಸ್ಪಷ್ಟಪಡಿಸುತ್ತದೆ.

ಅನ್ಯಾಯ, ಕೊಲೆ, ಅತ್ಯಾಚಾರ ಮಾಡಿದವರನ್ನು ರಕ್ಷಿಸಲು ಈ ರೀತಿ ದೈಹಿಕ ಹಲ್ಲೆ ಗೂಂಡಾ ಪ್ರವೃತ್ತಿಯಿಂದ ಬೆದರಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂಬುದು ಸಾಭೀತಾಗಿರುವ ಹಿನ್ನೆಲೆಯಲ್ಲಿ ಇಂತಹ ಕ್ರತ್ಯಗಳನ್ನು ಪೋಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಎಂದು ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions