ಉಚ್ಚಿಲ ಶ್ರೀಮಹಾಲಕ್ಷ್ಮಿ ದೇವಸ್ಥಾನದ ಉಡುಪಿ-ಉಚ್ಚಿಲ ದಸರಾದಲ್ಲಿ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯು ಶನಿವಾರ ರಾತ್ರಿ ಶಾಲಿನಿ ಜಿ.ಶಂಕರ್ ವೇದಿಕೆಯಲ್ಲಿ ಜರಗಿತು.
ಸ್ಪರ್ಧೆಯಲ್ಲಿ ರಾಜ್ಯದ ಬೆಳಗಾವಿ, ಬೆಂಗಳೂರು, ದಾವಣಗೆರೆ, ಧಾರವಾಡ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಸ್ಪರ್ಧಿಗಳು ಭಾಗವಹಿಸಿದ್ದರು. 55 ಕೆ.ಜಿ.ಯಿಂದ 80 ಕೆಜಿಗೂ ಮೇಲ್ಪಟ್ಟ ಒಟ್ಟು 6 ವಿಭಾಗದಲ್ಲಿ ಸ್ಪರ್ಧೆಗಳು ನಡೆ ದವು. ದೇಹದಾರ್ಢ್ಯ ಸ್ಪರ್ಧೆಯ ಟೈಟಲ್ ಚಾಂಪಿಯನ್ ಪಟ್ಟವನ್ನು ಬೆಳಗಾವಿಯ ವಿ.ಬಿ.ಕಿರಣ್ ಗೆದ್ದುಕೊಂಡರು. ಬೆಸ್ಟ್ ಪೋಸರ್ ಪ್ರಶಸ್ತಿಯನ್ನು ಚಿರಾಗ್ ಪೂಜಾರಿ ಉಡುಪಿ, ರನ್ನ ಅಪ್ ಪ್ರಶಸ್ತಿಯನ್ನು ಸೂರಜ್ ಸಿಂಗ್ ಉಡುಪಿ ಪಡೆದುಕೊಂಡರು.
ಸ್ಪರ್ಧೆಯನ್ನು ಜಿ.ಶಂಕರ್ ಉದ್ಘಾಟಿಸಿದರು. ಈ ವೇಳೆ ಕರ್ನಾಟಕ ರಾಜ್ಯ ದೇಹದಾರ್ಢ್ಯ ಅಸೋಸಿಯೇಷನ್‌ನ ಅಧ್ಯಕ್ಷ ನೀಲ್‌ಕಾಂತ್, ಕಾರ್ಯಾಧ್ಯಕ್ಷ ಬೆಂಗಳೂರಿನ ರಜತ್ ಸಿದ್ದಣ್ಣ, ಜೇಸನ್ ಡಯಾಸ್, ಗಿರೀಶ್ ಕೊಟ್ಟಾರಿ, ವಿಜಯ್ ಸುವರ್ಣ ಬೆಂಗ್ರೆ, ಜಿ.ಡಿ.ಭಟ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ಮೋಹನ್ ಬೆಂಗ್ರೆ, ಶರಣ್ ಕುಮಾರ್ ಮಟ್ಟು, ಕರ್ನಾಟಕ ರಾಜ್ಯ ದೇಹದಾರ್ಢ್ಯ ಅಸೋಸಿಯೇಷನ್‌ನ ಅಧ್ಯಕ್ಷ ನೀಲ್ ಕಾಂತ್, ಅಜಿತ್ ಸಿದ್ದಣ್ಣ, ಜೇಸನ್ ಡಯಾಸ್, ಮುಖೇಶ್, ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ಉಪಸ್ಥಿತರಿದ್ದರು.
ವಿಜೇತರಿಗೆ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಮೋಹನ್ ಬೆಂಗ್ರೆ, ಉಡುಪಿ ಜಿಲ್ಲಾ ದೇಹದಾರ್ಢ್ಯ ಅಸೋಸಿಯೇಷನ್‌ನ ಅಧ್ಯಕ್ಷ ಜೇಸನ್ ಡಯಾಸ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಪಡುಬಿದ್ರಿ ಪೊಲೀಸ್ ಠಾಣಾಧಿಕಾರಿ ಸತ್ಯವೇಲು, ಶಿರ್ವ ಪೊಲೀಸ್ ಠಾಣಾಧಿಕಾರಿ ಲೋಹಿತ್, ಪುಂಡಲೀಕ ಹೊಸಬೆಟ್ಟು, ರತ್ನಾಕರ ಸಾಲ್ಯಾನ್ ಮಲ್ಪೆ ಬಹುಮಾನ ವಿತರಿಸಿದರು.
ದಸರಾ ಸಮಿತಿಯ ಸತೀಶ್ ಕುಂರ್ದ, ಬಹರೈನ್ ಮೊಗವೀರಸ್ ಅಧ್ಯಕ್ಷೆ ಶಿಲ್ಪಿ ಸಮಿತ್ ಕುಂದರ್, ಚೇತನ್ ಬೆಂಗ್ರೆ, ಸಂದ್ಯಾ ದೀಪ ಸುನಿಲ್, ಗೌತಮ್ ಕೋಡಿಕಲ್, ವಿಜಯ್ ಸುವರ್ಣ, ದಿನೇಶ್ ಎರ್ಮಾಳ್, ಶಿವರಾಂ ಕೋಟ, ಉಷಾರಾಣಿ, ಶರಣ್ ಕುರ್ಮಾ ಮಟ್ಟು, ದಾಮೋದರ ಸುವರ್ಣ ಉಚ್ಚಿಲ, ಮೋಹನ್ ಬೆಂಗ್ರೆ ಮೊದಲಾದವರು ಉಪಸ್ಥಿತರಿದ್ದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions