ಅಕ್ಟೊಬರ್ 19 ರಂದು , ಎಸ್ ಐ ಓ ವಿದ್ಯಾರ್ಥಿ ಸಂಘಟನೆ, ಆದಿ ಉಡುಪಿ ಕಚೇರಿ ಆವರಣದಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (SIO) 43ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಸೀಬ್ ತರಾಫ್ದರ್ (ಮಾಜಿ ರಾಜ್ಯ ಕಾರ್ಯದರ್ಶಿ, SIO ಕರ್ನಾಟಕ) ಹಾಗೂ ಇದ್ರೀಸ್ ಹುಡೆ (ಮಾಜಿ ಜಿಲ್ಲಾ ಅಧ್ಯಕ್ಷರು, SIO ಉಡುಪಿ) ಉಪಸ್ಥಿತರಿದ್ದರು.
ಅತಿಥಿಗಳು ಮಾತನಾಡಿ, ಎಸ್ ಐ ಓ 43 ವರ್ಷಗಳ ಹೋರಾಟ, ಸಮಾಜಮುಖಿ ಚಟುವಟಿಕೆಗಳು, ಮತ್ತು ವಿದ್ಯಾರ್ಥಿ ಸಮುದಾಯದಲ್ಲಿ ಚಿಂತನೆ, ಕ್ರಿಯಾಶೀಲತೆ ಹಾಗೂ ಬದಲಾವಣೆಯ ಅಗತ್ಯದ ಕುರಿತು ಮನನ ಮಾಡಿಸಿದರು. ಜೊತೆಗೆ ವಿದ್ಯಾರ್ಥಿಗಳಲ್ಲಿ ಸಹೋದರತ್ವ, ಜವಾಬ್ದಾರಿತ್ವ ಮತ್ತು ಭವಿಷ್ಯ ನಿರ್ಮಾಣದ ಬದ್ಧತೆಯ ಮಹತ್ವವನ್ನೂ ಒತ್ತಿ ಹೇಳಿದರು.
ಯಾಸೀನ್ ಮನ್ನಾ ( ಜಿಲ್ಲಾ ಅಧ್ಯಕ್ಷರು, ಎಸ್ ಐ ಓ ಉಡುಪಿ ) ಧನ್ಯವಾದವಿತ್ತರು, ಸಫ್ವಾನ್ ಕಾರ್ಯಕ್ರಮವನ್ನು ನಿರೂಪಿಸಿದರು, ಎಸ್ ಐ ಓ ಉಡುಪಿ ಜಿಲ್ಲಾ ಕಾರ್ಯದರ್ಶಿಗಳಾದ ಅದ್ನಾನ್, ಸಮೀರ್ , ನಿಹಾಲ್, ನಿಫಾಲ್ ಮತ್ತು ಎಲ್ಲಾ ಘಟಕಾಧ್ಯಕ್ಷರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions