Advertisement

ಹಾವಂಜೆ MHRCಗೆ ವೈಕುಂಠ ಬಾಳಿಗ ಕಾನೂನು ಕಾಲೇಜು NSS ವಿದ್ಯಾರ್ಥಿಗಳ ಸೇವಾ-ಅಧ್ಯಯನ ಭೇಟಿ

ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯ ಎನ್‌ಎಸ್‌ಎಸ್ ಘಟಕ 1 & 2 ವತಿಯಿಂದ ಹಾವಂಜೆಯಲ್ಲಿರುವ ಮಣಿಪಾಲ ಹೋಸ್ಪಿಸ್ ಅಂಡ್ ರೆಸ್ಪೈಟ್ ಸೆಂಟರ್ ( MHRC) ಗೆ ಅಧ್ಯಯನ ಹಾಗೂ ಸೇವಾ ಭೇಟಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಕೇಂದ್ರದ ಸಿಬ್ಬಂದಿಯಾದ ಅನುಜಾ ಅವರು ಸಂಸ್ಥೆಯ ಉದ್ದೇಶಗಳು, ಕಾರ್ಯವಿಧಾನಗಳು ಹಾಗೂ ಪ್ಯಾಲಿಯೇಟಿವ್ ಮತ್ತು ಹಾಸ್ಪಿಸ್ ಆರೈಕೆಯ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಪರಿಚಯ ನೀಡಿದರು. ಜೀವಿತಾವಧಿ ಸೀಮಿತವಾಗಿರುವ ರೋಗಿಗಳಿಗೆ ಉಚಿತವಾಗಿ ಮಾನವೀಯತೆ, ಗೌರವ ಮತ್ತು ಕರುಣೆಯ ಆಧಾರದ ಮೇಲೆ ಆರೈಕೆ ನೀಡುವಲ್ಲಿ ಸಂಸ್ಥೆಯ ಪಾತ್ರವನ್ನು ಅವರು ವಿವರಿಸಿದರು.

ನಂತರ ಪಲ್ಲವಿ ಹಾಗೂ ಗಿರಿಧರ್ ಸುಭಾಶ್ ಪ್ರಭು ಅವರು ವಿದ್ಯಾರ್ಥಿಗಳಿಗೆ ಕೇಂದ್ರದ ವಿವಿಧ ವಿಭಾಗಗಳನ್ನು ತೋರಿಸಿ, ಅಲ್ಲಿನ ಸೌಲಭ್ಯಗಳು, ಚಿಕಿತ್ಸಾ ವಿಧಾನಗಳು ಮತ್ತು ರೋಗಿಗಳ ಆರೈಕೆಯ ವಿವಿಧ ಆಯಾಮಗಳ ಕುರಿತು ವಿವರವಾಗಿ ಮಾರ್ಗದರ್ಶನ ನೀಡಿದರು. ಇದೇ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳನ್ನು ತಮ್ಮ ಸೇವೆಯನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಲು ಪ್ರೋತ್ಸಾಹಿಸಿದರು.

ಈ ಭೇಟಿಯ ಮೂಲಕ ವಿದ್ಯಾರ್ಥಿಗಳು ಪ್ಯಾಲಿಯೇಟಿವ್ ಕೇರ್‌ನ ಮಹತ್ವವನ್ನು ಅರಿತುಕೊಂಡು, ಜೀವನದ ಅಂತಿಮ ಹಂತದಲ್ಲಿಯೂ ಮಾನವ ಗೌರವವನ್ನು ಕಾಪಾಡುವುದು ಎಷ್ಟು ಅಗತ್ಯ ಎಂಬುದನ್ನು ಅನುಭವಿಸಿದರು. ಈ ಅನುಭವವು ವಿದ್ಯಾರ್ಥಿಗಳಲ್ಲಿ ಸಹಾನುಭೂತಿ, ಸಾಮಾಜಿಕ ಜವಾಬ್ದಾರಿ ಹಾಗೂ ಸೇವಾ ಮನೋಭಾವವನ್ನು ಮತ್ತಷ್ಟು ಬಲಪಡಿಸಿತು.

ಈ ಸಂದರ್ಭದಲ್ಲಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿಗಳಾದ ಡಾ. ನವೀನ್ ಚಂದ್ರ ಸಿ.ಬಿ., ಯುವ ರೆಡ್ ಕ್ರಾಸ್ ಘಟಕ ಸಂಯೋಜನಾಧಿಕಾರಿ ಈರಪ್ಪ ಮೇಧಾರ್, ಎನ್‌ಎಸ್‌ಎಸ್ ಕಾರ್ಯದರ್ಶಿಗಳಾದ ಸಮೀರ್, ಅಂಕಿತ ಮತ್ತು ರಕ್ಷಿತಾ ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions