Advertisement

ಮೋದಿ ಸರ್ಕಾರದ ವೈಫಲ್ಯವನ್ನು RSS ಸ್ವತಃ ಒಪ್ಪಿಕೊಂಡಿದೆ: ಸಚಿವ ಪ್ರಿಯಾಂಕ್ ಖರ್ಗೆ

ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಜನಸಾಮಾನ್ಯರ ಕೈಗೆಟುಕುತ್ತಿಲ್ಲ ಎಂಬ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವೈಫಲ್ಯವನ್ನು ಸಂಘ ಬಹಿರಂಗವಾಗಿ ಒಪ್ಪಿಕೊಂಡಿದೆ ಎಂದು ಶುಕ್ರವಾರ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ X ನಲ್ಲಿ ಪೋಸ್ಟ್‌ ಮಾಡಿರುವ ಅವರು, ಮೋದಿ ಸರ್ಕಾರವು ಸಾರ್ವಜನಿಕ ಸಂಪರ್ಕ ಮತ್ತು ಫೋಟೊ ತೆಗೆಸಿಕೊಳ್ಳುವುದರಲ್ಲಿಯೇ 11 ವರ್ಷಗಳನ್ನು ವ್ಯರ್ಥ ಮಾಡಿದೆ. ಮೋದಿ ಸಂಪುಟದ ಸಚಿವರು ಭಾಗವತ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸುವಂತೆ ಸವಾಲು ಎಸೆದಿದ್ದಾರೆ.

'ಶಿಕ್ಷಣ ಮತ್ತು ಉತ್ತಮ ಆರೋಗ್ಯ ಸೇವೆ ಈಗ ಕೈಗೆಟುಕುವಂತಿಲ್ಲ ಮತ್ತು ನಾಗರಿಕರಿಗೆ ಲಭ್ಯವಾಗುತ್ತಿಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಈ ವಿಚಾರದಲ್ಲಿ ಮೋದಿ ವಿಫಲವಾಗಿದ್ದು, ಆರೋಗ್ಯ ಮತ್ತು ಶಿಕ್ಷಣದಂತಹ ಮೂಲಭೂತ ಅವಶ್ಯಕತೆಗಳನ್ನು ನಿರ್ಲಕ್ಷಿಸಿ ಪಿಆರ್ ಮತ್ತು ಫೋಟೋ-ಆಪ್‌ಗಳಲ್ಲಿ 11 ವರ್ಷಗಳನ್ನು ವ್ಯರ್ಥ ಮಾಡಿದ್ದಾರೆ ಎಂದು ಭಾಗವತ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಮೋದಿ ಸಂಪುಟದ ಯಾವುದೇ ಸಚಿವರು ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿಲಿ ಎಂದು ನಾನು ಸವಾಲೆಸೆಯುತ್ತೇನೆ' ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.

ಮುಂದುವರಿದು, 'ಮೋದಿ ಸರ್ಕಾರದ ವೈಫಲ್ಯಗಳನ್ನು ಬಹಿರಂಗವಾಗಿ ಹೇಳಿದ್ದಕ್ಕಾಗಿ 2 ರೂ. ಐಟಿ ಸೆಲ್ ಮುಖ್ಯಸ್ಥ ಮತ್ತು ಟ್ರೋಲ್‌ಗಳ ಮೂಲಕ ಅವರನ್ನು ಎದುರಿಸಲು ಧೈರ್ಯ ಮಾಡುವಿರಾ? ತಮ್ಮದೇ ಸರ್ಕಾರದ ಸಮಸ್ಯೆಯನ್ನು ಪರಿಹರಿಸಲು ವಿಶ್ವದ ಅತಿದೊಡ್ಡ 'ಎನ್‌ಜಿಒ' ಏನು ಮಾಡುತ್ತದೆ?' ಎಂದು ಪ್ರಶ್ನಿಸಿದ್ದಾರೆ.

ಭಾರತದ ಪ್ರತಿಯೊಂದು ಕುಟುಂಬವೂ ಮೂವರು ಮಕ್ಕಳನ್ನು ಹೊಂದುವುದು ಅಗತ್ಯವಾಗಿದೆ. ದೇಶದಲ್ಲಿ 2.1ರ ಫಲವತ್ತತೆ ಹೊಂದಿರುವ ಸಮುದಾಯಗಳು ನಿಧಾನವಾಗಿ ನಶಿಸುತ್ತಿವೆ. ಜನಸಂಖ್ಯಾ ಕುಸಿತ ತಡೆಯಲು ಹಾಗೂ ಸ್ಥಿರತೆ ತರಲು ಪ್ರತಿ ಕುಟುಂಬವು ಮೂರು ಮಕ್ಕಳನ್ನು ಹೊಂದುವುದನ್ನು ಪರಿಗಣಿಸಬೇಕು ಎಂದು ಮೋಹನ್ ಭಾಗವತ್ ಗುರುವಾರ (ಆಗಸ್ಟ್ 28) ಎಂದು ನವದೆಹಲಿಯಲ್ಲಿ ನಡೆದ ಆರ್‌ಎಸ್‌ಎಸ್‌ನ ಶತಮಾನೋತ್ಸವ ಸಮಾರಂಭದಲ್ಲಿ ಹೇಳಿದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions