ಉಡುಪಿ: ಪ್ರವಾದಿ ಮುಹಮ್ಮದ್ ಪೈಗಂಬರ್(ಸ) ಅವರ 1500ನೇ ಜನ್ಮದಿನಾಚರಣೆ ಪ್ರಯುಕ್ತ ನೇಜಾರು ಜುಮಾ ಮಸೀದಿ ಮತ್ತು ಅಧೀನ ಸಂಸ್ಥೆಗಳ ವತಿಯಿಂದ ಶನಿವಾರ ಬೃಹತ್ ಮೀಲಾದ್ ಜಾಥ ನಡೆಯಿತು.
ಮಸೀದಿಯಿಂದ ಹೊರಟ ಜಾಥವು ಸಂತೆಕಟ್ಟೆ ಮಾರ್ಗವಾಗಿ ಕಲ್ಯಾಣಪುರ ತಲುಪಿ, ನೇಜಾರು ನಿಡಂಬಳ್ಳಿ ಮಾರ್ಗವಾಗಿ ವಾಪಾಸ್ಸು ನೇಜಾರು ಮಸೀದಿಯಲ್ಲಿ ಸಮಾಪ್ತಿಗೊಂಡಿತು. ಪಿ.ಪಿ.ಬಶೀರ್ ಮುಸ್ಲಿಯಾರ್ ನೇತೃತ್ವದಲ್ಲಿ ಕುಂದಾಪುರ ಮತ್ತು ಗೋಳಿಕಟ್ಟೆಯ ದಪ್ ತಂಡಗಳು ಆಕರ್ಷಣೀಯವಾಗಿತ್ತು.
ದಾರಿಯುದ್ದಕ್ಕೂ ಕೆಳಾರ್ಕಳಬೆಟ್ಟು ಬಬ್ಬುಸ್ವಾಮಿ ದೇವಸ್ಥಾನ, ನೇಜಾರು ಜಗದ್ಗುರು ಭಜನಾ ಮಂದಿರ, ನೇಜಾರು ಶಾರದಾ ಭಜನಾ ಮಂದಿರ ಹಾಗೂ ನೇಜಾರು ಕ್ರೀಡಾಂಗಣ ರಿಕ್ಷಾ ಚಾಲಕರ ಮಾಲಕರ ಸಂಘ, ಗುರು ಗಣೇಶ್ ಟ್ರಾವೆಲ್ಸ್ ಆ್ಯಂಡ್ ಕನ್ಟçಕ್ಷನ್ ಮಾಲಕರಾದ ಪ್ರಕಾಶ್ ಆಚಾರಿ ಹಾಗೂ ಚಂದ್ರಶೇಖರ್ ಆಚಾರಿ ಮೆರವಣಿಗೆಯಲ್ಲಿ ಸಾಗಿ ಬಂದವರಿಗೆ ಪಾನಕ ನೀಡಿ ಕೋಮು ಸೌಹಾರ್ದ ಮೆರೆದರು. ಅದಕ್ಕೆ ಪ್ರತಿಯಾಗಿ ಎಲ್ಲ ಸಂಸ್ಥೆಗಳಿಗೆ ಮಸೀದಿ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಬಳಿಕ ಮಸೀದಿಯಲ್ಲಿ ನಡೆದ ಅನ್ನ ಸಂತರ್ಪಣೆ ಎಲ್ಲ ಧರ್ಮೀಯರು ಪಾಲ್ಗೊಂಡರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಅಬೂಬಕ್ಕರ್ ನೇಜಾರ್, ಮಸೀದಿ ಅಧ್ಯಕ್ಷ ಕೆ.ಆರ್.ಕಾಸಿಂ, ಸ್ಥಳೀಯ ಖತೀಬ್ ಉಸ್ಮಾನ್ ಮದನಿ, ಸುನ್ನಿ ಸಂಘಟನೆಯ ನಾಯಕ ಅಶ್ರಫ್ ಅಂಜದಿ ಪಕ್ಷಿಕೆರೆ, ಮಸ್ ನವೀ ಸಂಸ್ಥೆಗಳ ಮ್ಯಾನೇಜರ್ ನೌಫಲ್ ಮದನಿ ನೇಜಾರ್, ಮಸೀದಿಯ ಕಾರ್ಯದರ್ಶಿ ಶಾಹಿದ್, ಅಯ್ಯೂಬ್ ನೇಜಾರ್ ಮುಂತಾದವರು ಉಪಸ್ಥಿತರಿದ್ದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions