ಕರೂರಿ ಕಾಲ್ತುಳಿತದಿಂದ ಎಚ್ಚೆತ್ತ ಡಿಎಂಕೆ ನೇತೃತ್ವದ ಸರ್ಕಾರ ಮಹತ್ತರ ನಿರ್ಧಾರವನ್ನು ತೆಗೆದುಕೊಂಡಿದ್ದು, ಹೊಸ ಸ್ಟ್ಯಾಂಡರ್ಡ್ ಓಪರೇಟಿಂಗ್ ಪ್ರೊಸೀಜರ್ಸ್ (SOP) ರೂಪುಗೊಳ್ಳುವವರೆಗೂ ಯಾವುದೇ ರಾಜಕೀಯ ಪಕ್ಷಕ್ಕೆ ಸಾರ್ವಜನಿಕ ಸಭೆಗಳನ್ನು ಆಯೋಜಿಸಲು ಪೊಲೀಸ್ ಅನುಮತಿ ನೀಡುವುದಿಲ್ಲ ಎಂದು ಮದುರೈ ಮದ್ರಾಸ್ ಹೈಕೋರ್ಟ್ ಬೆಂಚಿಗೆ ತಿಳಿಸಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಕಟುವಾಗಿ ಟೀಕಿಸಿದ ನಂತರ ಎಚ್ಚೆತ್ತ ರಾಜ್ಯ ಸರ್ಕಾರ ನ್ಯಾಯಾಲಯದ ನಿರ್ದೇಶನದ ಮೇರೆ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಘಟನೆಗೆ ಸಂಬಂಧಿಸಿದಂತೆ ಸಾಕಷ್ಟು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (PIL)ಗಳು ದಾಖಲಾಗಿದ್ದು, ಇಂತಹ ಬೃಹತ್ ಸಮಾವೇಶ ಹಾಗೂ ಸಾರ್ವಜನಿಕ ಸಭೆಗಳನ್ನು ಆಯೋಜಿಸುವಾಗ SOP ಅಗತ್ಯವಿದ್ದು, ನಿರ್ದಿಷ್ಟ ಕ್ರಮ ಹಾಗೂ ನಿಯಮಗಳನ್ನು ಪಾಲಿಸಬೇಕಾದ ಅಗತ್ಯವಿರುತ್ತದೆ ಎಂಬ ನಿಲುವು ವ್ಯಕ್ತವಾಗಿತ್ತು. ಈ ಹಿನ್ನಲೆ ಪಿಐಎಲ್ ಗಳ ಬೇಡಿಕೆಯನ್ನು ಪುರಸ್ಕಾರಿಸಿದ್ದು, SOPಗಳು ಜಾರಿ ಆಗುವವರೆಗೆ ಯಾವುದೇ ರಾಜಕೀಯ ಸಭೆಗಳಿಗೆ ಅನುಮತಿ ನೀಡಲಾಗುವುದಿಲ್ಲ ಮದ್ರಾಸ್ ಹೈ ಕೋರ್ಟ್ ನ ಮದುರೈ ಬೆಂಚಿನ ಎಎಜಿ (AAG) ತಿಳಿಸಿದೆ.
ಇನ್ನು ನ್ಯಾಯಾಲಯವು ರಾಷ್ಟ್ರೀಯ ಹಾಗೂ ರಾಜ್ಯ ಹೈವೇಗಳ ಹತ್ತಿರ ಯಾವುದೇ ಸಾರ್ವಜನಿಕ ಸಭೆಗಳನ್ನು ಆಯೋಜಿಸದಂತೆ ಆದೇಶಿಸಿದ್ದು, ಸಾರ್ವಜನಿಕ ಸಭೆಗಳನ್ನು ಆಯೋಜಿಸುವ ಸ್ಥಳದಲ್ಲಿ ಕುಡಿಯುವ ನೀರು, ವೈದ್ಯಕೀಯ ಹಾಗೂ ಆಂಬುಲೆನ್ಸ್ ಸೇವೆಗಳು, ಶೌಚಾಲಯ ಮತ್ತು ನಿರ್ಗಮನ ಮಾರ್ಗಗಳಂತಹ ಮೂಲಸೌಕರ್ಯಗಳನ್ನು ಒದಗಿಸುವುದು ಕಡ್ಡಾಯವೆಂದು ಹೇಳಿದೆ.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions