Advertisement

ಕಟ್ಟಕಡೆಯ ವ್ಯಕ್ತಿಗೂ ಜೀವನದ ಹಕ್ಕು ಲಭಿಸಿದರೆ ಮಾತ್ರ ಅರ್ಥ ಪೂರ್ಣ ಸ್ವಾತಂತ್ರ್ಯ ವಾಗುವುದು.

ಭಾರತದ ಕಟ್ಟಕಡೆಯ ವ್ಯಕ್ತಿಗೆ ಜೀವನದ ಹಕ್ಕು ಲಭಿಸಿದರೆ ಮಾತ್ರ ಸ್ವಾತಂತ್ರ್ಯೋತ್ಸವದ ಆಚರಣೆಯ ಅರ್ಥಪೂರ್ಣವಾಗುವುದು ಭಾರತ ಸ್ವಾತಂತ್ರ್ಯಗೊಂಡು 78 ವರ್ಷಗಳು ಪೂರ್ಣಗೊಂಡು 79ನೇ ಸಾಲಿನ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದೇವೆ.

ಆದರೂ ಭಾರತದ ಕಟ್ಟ ಕಡೆಯ ಪ್ರಜೆಗೆ ಸಿಗಬೇಕಾದಂತಹ ಸಾಮಾಜಿಕ ನ್ಯಾಯ ಹಾಗೂ ಸ್ವಾತಂತ್ರ್ಯದ ಸಿಹಿ ಇನ್ನೂ ಸಿಕ್ಕಿಲ್ಲದಿರುವುದು ಖೇದಕರ ಅದೇ ರೀತಿ ಭಾರತದ ಹಲವು ಪ್ರದೇಶಗಳಲ್ಲಿ ಅಲ್ಪಸಂಖ್ಯಾತರು ದಲಿತರು ಹಿಂದುಳಿದವರು ಇನ್ನೂ ಭಯದ ನೆರಳಿನಲ್ಲಿ ಬದುಕುತ್ತಿರುವುದು ಹಾಗೂ ಅವರಿಗೆ ಸಾಮಾಜಿಕ ನ್ಯಾಯ ಸಿಕ್ಕದೆ ಇರುವುದು ಸ್ವಾತಂತ್ರ್ಯದ ಅರ್ಥವನ್ನು ಕಳೆದುಕೊಳ್ಳುತ್ತದೆ. ಅಧಿಕಾರ ಗದ್ದುಗೆಯಲ್ಲಿ ಇರುವವರು ಭಾರತದ ಎಲ್ಲರನ್ನೂ ಒಂದೇ ದ್ರಷ್ಟಿಯಲ್ಲಿ ನೋಡುವುದರ ಮೂಲಕ ಸರ್ವರಿಗೂ ಸಮಾನ ಹಕ್ಕನ್ನು ಕಲ್ಪಿಸುವುದು ಮತ್ತು ಸರ್ವರಿಗೆ ತಮ್ಮ ಧರ್ಮ ಅನುಸಾರ ಬಾಳಲು ಅನುವು ಮಾಡಿ ಕೊಟ್ಟಾಗ ಮಾತ್ರ ಸ್ವಾತಂತ್ರೋತ್ಸವಕ್ಕೆ ಅರ್ಥ ಬರುತ್ತದೆ ಇದನ್ನು ಅರಿತು ಆಳುವ ವರ್ಗ ಇದರ ಬಗ್ಗೆ ಗಮನಹರಿಸಬೇಕೆಂದು ಸುನ್ನಿ ಕೋ ಆರ್ಡಿನೇಷನ್ ಉಡುಪಿ ಜಿಲ್ಲಾ ಸಮಿತಿ ಕೇಳಿಕೊಳ್ಳುತ್ತಿದೆ ಸರ್ವರಿಗೂ 79ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಸಲ್ಲಿಸುತ್ತಿದೆ.

ಸ್ವಾತಂತ್ರ್ಯದ ಹೋರಾಟದಲ್ಲಿ ಭಾರತದ ಸರ್ವಧರ್ಮೀಯರು ಪಾಲ್ಗೊಂಡಿದ್ದು ಅದರಲ್ಲೂ ಪ್ರತ್ಯೇಕವಾಗಿ ಮುಸ್ಲಿಮರು ಅತಿ ಹೆಚ್ಚಾಗಿ ತಮ್ಮ ಪ್ರಾಣ ಹಾಗೂ ಸಂಪತ್ತನ್ನು ನೀಡಿರುತ್ತಾರೆ. ಆದರೆ ಒಂದು ವಿಭಾಗವು ಭಾರತದಲ್ಲಿ ಮುಸ್ಲಿಮರನ್ನು ಪರಕೀಯರಂತೆ ನೋಡುತ್ತಿರುವುದು ಖೇದಕರ. ಸರ್ವರಿಗೂ ಸಮಾನವಾದ ಹಕ್ಕುಗಳನ್ನು ನೀಡುವುದರ ಮೂಲಕ ಪ್ರತಿಯೊಬ್ಬರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದಾಗ ಮಾತ್ರ ನಮ್ಮ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಈ 79ನೇ ಸ್ವಾತಂತ್ರ್ಯ ಸಂಭ್ರಮವು ಇದಕ್ಕೊಂದು ಕಾರಣವಾಗಲಿ ಎಂದು ಸುನ್ನೀ ಕೋ ಆರ್ಡಿನೇಷನ್ ಉಡುಪಿ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಪ್ರಧಾನ ಕಾರ್ಯದರ್ಶಿ ಸುಭಾನ್ ಅಹ್ಮದ್ ಹೊನ್ನಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions