ಮಣಿಪಾಲ, ಆ.2: ಬಾಡಿಗೆ ಮನೆ ಹೆಸರಿನಲ್ಲಿ ಸಾವಿರಾರು ರೂ. ಆನ್‌ಲೈನ್ ವಂಚಿಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್.ಎಸ್.ನಾಯಕ್(71) ಎಂಬವರು ಮನೆ ಬಾಡಿಗೆ ನೀಡುವ ಬಗ್ಗೆ ಮಾಹಿತಿಯನ್ನು ಓಎಲ್‌ಎಕ್ಸ್‌ನಲ್ಲಿ ಹಾಕಿದ್ದು, ಜು.30ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ತಾನು ಆರ್ಮಿ ಆಫೀಸರ್ ಎಂಬುದಾಗಿ ನಂಬಿಸಿ ನನಗೆ ಉಡುಪಿ ಜಿಲ್ಲೆಗೆ ವರ್ಗಾವಣೆ ಆಗಿದ್ದು, ಮನೆ ಬಾಡಿಗೆಗೆ ಸಂಬಂಧಿಸಿದ ಮುಂಗಡ ಹಣವನ್ನು ನಿಮ್ಮ ಖಾತೆಗೆ ನಮ್ಮ ಮೇಲಾಧಿಕಾರಿ ಯವರು ಪಾವತಿಸುವುದಾಗಿ ತಿಳಿಸಿದ್ದನು.
ಅವರು ವಾಟ್ಸಾಪ್ ಮೂಲಕ ಕಳುಹಿಸಿದ ಆನ್‌ಲೈನ್ ಪಾರಂ ಭರ್ತಿ ಮಾಡುತ್ತಾ ಹೋಗುವಾಗ ಇಂಟರ್ ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್ ಹಾಗೂ ಯುಸರ್ ಐಡಿ ಕೇಳಿದ್ದು, ಆಗ ಎಸ್.ಎಸ್.ನಾಯಕ್ ಕೊಡುವುದಿಲ್ಲ ವೆಂದು ಕರೆ ಕಟ್ ಮಾಡಿದ್ದನು. ಮರುದಿನ ತನ್ನ ಇಂಟರ್‌ನೆಟ್ ಬ್ಯಾಂಕ್ ಖಾತೆಯನ್ನು ನೋಡಿದಾಗ ಅವರ ಖಾತೆಯಿಂದ 98,000ರೂ. ಹಣ ಸೈಬರ್ ವಂಚಕರು ವರ್ಗಾವಣೆ ಮಾಡಿ ಮೋಸ ಮಾಡಿರುವುದು ತಿಳಿದುಬಂತು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions