Advertisement

ಸೆ 14 ರಂದು ಕೇರಳ ಸಮಾಜಂ (ರಿ)ಉಡುಪಿ ವತಿಯಿಂದ ಒಣಂ ಸಂಭ್ರಮಾಚರಣೆ

ಕೇರಳ ಸಮಾಜಂ (ರಿ) ಉಡುಪಿ ಸಂಘಟನೆ ಉಡುಪಿಯಲ್ಲಿ ಕೆಲವೇ ತಿಂಗಳ ಹಿಂದೆ ಆರಂಭಗೊಂಡ ಸಂಘಟನೆಯಾಗಿದೆ. ಉಡುಪಿಯಲ್ಲಿ ನೆಲೆಸಿರುವ ಕೇರಳ ರಾಜ್ಯದ ಮಾಲಯಾಳಿಗರನ್ನು ಒಟ್ಟುಗೂಡಿಸಿ ಎಲ್ಲರನ್ನು ಸಂಘಟಿಸಿ ಕೇರಳ ಸಮಾಜಂನ ಒಂದೇ ವೇದಿಕೆಯಡಿಕೆಯಲ್ಲಿ ಓಗ್ಗೂಡಿಸುವುದರ ಮೂಲಕ ಉಡುಪಿಯಲ್ಲಿ ನೆಲೆ ನಿಂತಿರುವ ಕೇರಳಿಗರ ಧ್ವನಿಯಾಬೇಕು ಎನ್ನುವುದು ಸಂಘಟನೆಯ ಮೂಲ ಉದ್ದೇಶ.

ಇತ್ತೀಚೆಗೆ ಉಡುಪಿಯ ಕುಂಜಿಬೆಟ್ಟುವಿನ ಐವೈಸಿ ಸಭಾಭವನದಲ್ಲಿ ಸಂಘಟನೆಯ ಉದ್ಘಾಟನೆಯೂ ಅದ್ದೂರಿಯಾಗಿ ನಡೆದಿದೆ. ಸಂಘಟನೆಯ ಪ್ರಥಮ ಓಣಂ ಸಂಭ್ರಮಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಇದೇ ಸೆಪ್ಟೆಂಬರ್‌ 14ರ ಭಾನುವಾರದಂದು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಓಣಂ ಸಂಭ್ರಮಾಚರಣೆಯನ್ನು ಆಚರಿಸಲಾಗುವುದು.

ಕಾರ್ಯಕ್ರಮವನ್ನು ಗೋವಾ ರಾಜ್ಯ ರಾಜ್ಯಪಾಲರಾದ ಶ್ರೀ ಶ್ರೀಧರನ್‌ ಪಿಳ್ಳೈ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜನಪ್ರಿಯ ಶಾಸಕರಾದ ಶ್ರೀ ಯಶ್‌ಪಾಲ್‌ ಸುವರ್ಣ, ಉಡುಪಿ ಜಿಲ್ಲಾಧಿಕಾರಿಗಳಾದ ಸ್ವರೂಪ ಟಿ.ಕೆ ( ಐಎಎಸ್‌ ), ಉಡುಪಿ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಶ್ರೀ ಹರಿರಾಮ್‌ ಶಂಕರ್‌ (ಐಪಿಎಸ್), ಮಾಹೆ ಸಂಸ್ಥೆಯ ‌ಪ್ರೋಫೆಸರ್‌ ಡಾ. ಸಾಬೂ ಕೆ.ಎಂ., ಸುವರ್ಣ ಕರ್ನಾಟಕ ಕೇರಳ ಸಮಾಜಂ ಅಧ್ಯಕ್ಷರಾದ ಶ್ರೀ ರಾಜನ್‌ ಜಾಕೋಬ್‌, ಖ್ಯಾತ ಸಿನಿಮಾ ತಾರೆಯರಾದ ಶ್ರೀ ಹರೀಶ್‌ ಕನರನ್‌ ,ಶ್ರೀ ವಿವೇಕ್‌ ಗೋಪನ್‌, ಸೀಮಾ ಜಿ ನಾಯರ್‌ ಭಾಗವಹಿಸಲಿದ್ದಾರೆ.

ಇನ್ನೂ ಓಣಂ ಸಂಭ್ರಮಾಚರಣೆಯ ಉದ್ಘಾಟನೆ ಬೆಳಿಗ್ಗೆ 10.30ಕ್ಕೆ ಸರಿಯಾಗಿ ನಡೆಯಲಿದೆ .ಇದಕ್ಕೂ ಮೊದಲು ಅಂದರೆ 8.30ಕ್ಕೆ ಸರಿಯಾಗಿ "ಪೂಕಳಂ ಸ್ಪರ್ಧೆ" ನಡೆಯಲಿದೆ. ಆ ಬಳಿಕ ಕೇರಳ ಸಮಾಜಂ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಓಣಂ ಹಬ್ಬದ ಪ್ರಮುಖ ಭಾಗವಾಗಿರುವ 'ಒಣಂ ಸಧ್ಯ' ಅಂದರೆ ಓಣಂ ವಿಶೇಷ ಭೋಜನವನ್ನು ಕೇರಳದ ಕ್ಯಾಲಿಕಟ್‌ ನ ವಿನೋದ್ ಕುಮಾರ್‌ ತಂಡದವರಿಂದ ಏರ್ಪಡಿಸಲಾಗಿದೆ. ಭೋಜನದ ಬಳಿಕ ಕೇರಳದ ಸಿನಿಮಾ ಕಲಾವಿದರ ತಂಡದಿಂದ ವೈವಿಧ್ಯಮಯ ಸಂಗೀತ, ನೃತ್ಯ, ಮಿಮಿಕ್ರಿ, ಹಾಸ್ಯಭರಿತ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ.

ಸಂಜೆ ಜಯಕೇರಳ ಕಳರಿ ಸಂಘಮ್‌ ತಂಡದಿಂದ ಕಳರಿ ಪ್ರದರ್ಶನ ನಡೆಯಲಿದೆ. ಇಷ್ಟು ಮಾತ್ರವಲ್ಲದೇ ಸೆಪ್ಟೆಂಬರ್‌ 14 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಆಗಿರುವುದರಿಂದ ದಿನದ ವಿಶೇಷವಾಗಿ ಹುಲಿ ವೇಷ ತಂಡದಿಂದ ಹುಲಿ ವೇಷ ಕುಣಿತ, ಕೇರಳ ಶೈಲಿಯ ಚಂಡೆ ಮೇಳ, ಓಣಂ ಹಬ್ಬಕ್ಕೆ ಬರುವ ಸಾಂಪ್ರದಾಯಿಕ ಮಾವೇಲಿ ಕಾರ್ಯಕ್ರಮ ವಿಶೇಷ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಪತ್ರಿಕಾಗೋಷ್ಟಿಯಲ್ಲಿ ಕೇರಳ ಸಮಾಜಂ (ರಿ) ಉಡುಪಿ ಇದರ ಅಧ್ಯಕ್ಷರಾದ ಶ್ರೀ ಅರುಣ್‌ ಕುಮಾರ್‌ ,ಉಪಾಧ್ಯಕ್ಷರಾದ ಎಸ್‌ ವಸಂತ್‌ ಕುಮಾರ್‌ ,ಶ್ರೀ ಕುಮಾರ್‌ ,ಕಾರ್ಯದರ್ಶಿ ಪ್ರಶಾಂತ್‌ ಕುಮಾರ್‌ ,ಖಜಾಂಚಿ ರಮೇಶ್‌ ಈಪಿ ,ಜೊತೆ ಕಾರ್ಯದರ್ಶಿ ಪ್ರದೀಪ್‌ ಜಿ ,ಓಣಂ ಕಮಿಟಿ ಚೇರ್‌ ಮ್ಯಾನ್‌ ಪ್ರೋ ಡಾ ಬಿನ್ಸಿ ಎಂ ಜಾರ್ಜ್ ಉಪಸ್ಥಿತರಿದ್ದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions