ಮಹಿಳಾ ಕ್ರೀಡಾಪಟುಗಳನ್ನು ಉತ್ತೇಜಿಸುವ ಸಲುವಾಗಿ ಎಚ್.ಸಿ.ಎಲ್. ಫೌಂಡೇಶನ್, ಚೆನ್ನೈನಲ್ಲಿ ಆಯೋಜಿಸಿದ್ದ ಏಳನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಉಡುಪಿಯ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ ಪೂರ್ಣಿಮಾ ಉದ್ದ ಜಿಗಿತದಲ್ಲಿ ಚಿನ್ನದ ಪದಕ ಪಡೆದರೆ, ಪ್ರೌಢ ಶಾಲಾ ವಿಭಾಗದ ಒಂಭತ್ತನೆಯ ತರಗತಿಯ ಮಾನ್ಯ ಹರ್ಡಲ್ಸ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.
ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರೀಯ ಮಟ್ಟದಲ್ಲಿ ಪದಕ ವಿಜೇತರಾದ ವಿದ್ಯಾರ್ಥಿನಿಯರಿಗೆ ಸಂಸ್ಥೆಯ ಪರವಾಗಿ ಸಂಭ್ರಮದ ಸ್ವಾಗತ ಕೋರಲಾಯಿತು. ಪ್ರಾಂಶುಪಾಲರಾದ ಜಗದೀಶ ಕುಮಾರ ಮತ್ತು ಮುಖ್ಯೋಪಾಧ್ಯಾಯಿನಿ ಇಂದಿರಾ ಪದಕ ವಿಜೇತರನ್ನು ಸನ್ಮಾನಿಸಿದರು.
ದೈಹಿಕ ಶಿಕ್ಷಕರಾದ ವಸಂತ ಜೋಗಿ ಕ್ರೀಡಾಪಟುಗಳ ಸಾಧನೆಯ ಕುರಿತು ಮಾತನಾಡಿದರು. ಶಿಕ್ಷಣ ಸೇವಾ ಸಮಿತಿಯ ಶೇಖರ ಕೋಟ್ಯಾನ್, ಉಪನ್ಯಾಸಕ ಮತ್ತು ಅಧ್ಯಾಪಕ ವೃಂದದವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions