ಕರಾವಳಿಯ ಸಾಂಪ್ರದಾಯಿಕ ಆಹಾರ, ಸ್ಥಳೀಯ ಉತ್ಪನ್ನಗಳು ಹಾಗೂ ವಿವಿಧ ಬಗೆಯ ಸಸ್ಯಗಳ ಪರಿಚಯವನ್ನು ಒಂದೇ ವೇದಿಕೆಯಲ್ಲಿ ಒದಗಿಸುವ **‘ಮಾನ್ಸೂನ್ ಆಹಾರ ಮತ್ತು ಸಸ್ಯಮೇಳ’** ಶಿರ್ವದಲ್ಲಿ ಇಂದಿನಿಂದ ಆರಂಭಗೊಂಡಿದೆ




ಮೇಳದಲ್ಲಿ ವಿವಿಧ ಬಗೆಯ ಸಸ್ಯಗಳು, ಹೂವಿನ ಗಿಡಗಳು ಹಾಗೂ ಮನೆಯಂಗಳ ಅಲಂಕಾರಕ್ಕೆ ಬಳಸಬಹುದಾದ ಸಸ್ಯಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಕರಾವಳಿ ಭಾಗದ ಸಾಂಪ್ರದಾಯಿಕ ತಿಂಡಿ-ತಿನಿಸುಗಳು, ಸ್ಥಳೀಯ ಆಹಾರ ಪದಾರ್ಥಗಳು ಹಾಗೂ ವಿವಿಧ ಖಾದ್ಯಗಳ ಮಳಿಗೆಗಳು ಗಮನ ಸೆಳೆಯುತ್ತಿವೆ.
ಮೇಳದ ಅಂಗವಾಗಿ ಸ್ಥಳೀಯವಾಗಿ ತಯಾರಿಸಲಾದ ವಿವಿಧ ಆಹಾರ ಉತ್ಪನ್ನಗಳು, ಸಿಹಿ ತಿಂಡಿಗಳು ಮತ್ತು ಇತರ ಖಾದ್ಯಗಳ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ. ಮಳೆಗಾಲದ ವಿಶೇಷ ಆಹಾರ ಹಾಗೂ ಸಸ್ಯಗಳ ಖರೀದಿಗೆ ಸಾರ್ವಜನಿಕರಿಗೆ ಉತ್ತಮ ಅವಕಾಶ ದೊರೆಯಲಿದೆ.
ಶಿರ್ವದಲ್ಲಿ ನಡೆಯುತ್ತಿರುವ ಈ ಮೇಳವು ಆಹಾರ ಪ್ರಿಯರು, ಸಸ್ಯಾಸಕ್ತರು ಹಾಗೂ ಕುಟುಂಬ ಸಮೇತರಾಗಿ ಭೇಟಿ ನೀಡುವವರಿಗೆ ಆಕರ್ಷಣೆಯ ಕೇಂದ್ರವಾಗಿದೆ.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions