ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಕಟೌಟ್‌ಗೆ ರವಿವಾರ ಪರ್ಕಳ ಪೇಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಹಾಲಿನ ಅಭಿಷೇಕವನ್ನು ಮಾಡಲಾಯಿತು.
ಎಲ್‌ಐಸಿ ನಿವೃತ್ತ ಅಧಿಕಾರಿ ಉಡುಪಿಯ ಅನಂತ ಕೃಷ್ಣ ಕಾಮತ್ ಕಟೌಟ್‌ಗೆ ಹಾಲೆರುವುದರ ಮೂಲಕ ಆಚರಣೆಗೆ ಚಾಲನೆ ನೀಡಿದರು. 78ರ ಹರೆಯದಲ್ಲಿಯೂ ಕೂಡ ರಾಜ್ಯದ ಜನತೆಗೆ ಪಂಚ ಗ್ಯಾರಂಟಿ ನೀಡಿ ಯಶಸ್ವಿ ನಾಯಕರಾದ ಸಿದ್ದರಾಮಯ್ಯ ಅವರ ಗುಣಗಾನ ಮಾಡಿದರು.
ಈ ಸಂದರ್ಭದಲ್ಲಿ ಪರ್ಕಳ ಕಾಂಗ್ರೆಸ್ ಅಧ್ಯಕ್ಷ ಮೋಹನ್‌ದಾಸ್ ನಾಯಕ್ ಪರ್ಕಳ, ಪ್ರಮುಖರಾದ ಗಣೇಶ್‌ರಾಜ್ ಸರಳಬೆಟ್ಟು, ವೆಂಕಟೇಶ್ ಶೆಟ್ಟಿಗಾರ್, ಅಶೋಕ್ ಶೆಟ್ಟಿ ಬಡಗಬೆಟ್ಟು, ಸದಾನಂದ ಪೂಜಾರಿ ಪರ್ಕಳ, ಜಗನ್ನಾಥ ಹೆರ್ಗ, ದೇವೇಂದ್ರ ನಾಯ್ಕ ಪರ್ಕಳ, ಅಪ್ರಾಯ ನಾಯ್ಕ, ಸುಧೀರ್ ಶೆಟ್ಟಿ ಹಿರಿಯಡ್ಕ, ಸುರೇಂದ್ರ ಪ್ರಭು, ಪ್ರಕಾಶ್ ನಾಯ್ಕ್, ಸುರೇಶ್ ನಾಯಕ್ ಮೂಡುಬೆಳ್ಳೆ, ಉಷಾ ನಾಯಕ್ ಪರ್ಕಳ ಉಪಸ್ಥಿತರಿದ್ದರು.
ಸಿದ್ದರಾಮಯ್ಯ ಅವರ ಕಟೌಟಿಗೆ ಹಾಲಾಭಿಷೇಕ ನಂತರ ಕಾರ್ಯಕರ್ತರಿಗೆ ಪಾಯಸ ಮತ್ತು ಸಿಹಿ ತಿಂಡಿ ಹಂಚಲಾಯಿತು
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions