Advertisement

ಮೌಲಾನಾ ಝಮೀರ್ ಅಹ್ಮದ್ ರಶಾದಿ ಜಮೀಯತ್ ಉಲಮಾ‑ಇ‑ಹಿಂದ್ ಉಡುಪಿ ಜಿಲ್ಲಾಧ್ಯಕ್ಷರಾಗಿ ಮತ್ತು ಮೊಹಮ್ಮದ್ ಖಾಲಿದ್ ಮಣಿಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

ಭಾರತದ ಸ್ವಾತಂತ್ರ್ಯಕ್ಕೂ ಮೊದಲು 1919ರಲ್ಲಿ ವಿದ್ವಾಂಸರ ಗುಂಪೊಂದು ಜಮಿಯತ್ ಉಲೇಮಾ-ಎ-ಹಿಂದ್ ಅನ್ನು ಸ್ಥಾಪಿಸಿತು. ಈ ಸಂಘಟನೆಯು ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿತು. ನೂರಕ್ಕೂ ಹೆಚ್ಚು ವರ್ಷಗಳಿಂದ, ಈ ಸಂಸ್ಥೆ ದೇಶಾದ್ಯಂತ ಸಮಾಜ ಸುಧಾರಣೆ, ಸಮಾಜ ಕಲ್ಯಾಣ ಮತ್ತು ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಬಂದಿದೆ. ದೇಶದಲ್ಲಿ ಪರಸ್ಪರ ಸಹಿಷ್ಣುತೆ ಮತ್ತು ಒಗ್ಗಟ್ಟಿನ ಹಳೆಯ ಪರಂಪರೆಯನ್ನು ಕಾಪಾಡಿಕೊಳ್ಳಲು ಜಮೀಯತ್ ಯಾವಾಗಲೂ ಒತ್ತು ನೀಡಿದೆ. ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ವಾತಾವರಣವನ್ನು ಕಾಪಾಡಿಕೊಳ್ಳುವುದು ಜಮೀಯತ್‌ನ ಪ್ರಯತ್ನವಾಗಿದೆ. ಜಮೀಯತ್ ಉಲಮಾ‑ಇ‑ಹಿಂದ್, ಉಡುಪಿ ಜಿಲ್ಲಾ ಘಟಕದ ಚುನಾವಣಾ ಸಭೆ ಜಮೀಯತ್ ಉಲಮಾ‑ಇ‑ಹಿಂದ್, ಕರ್ನಾಟಕದ ಕಾರ್ಯದರ್ಶಿ ಹಾಫಿಝ್ ಸಯ್ಯದ್ ಆಸಿಮ್ ಅಬ್ದುಲ್ಲಾಹ್ ರವರ ನೇತೃತ್ವದಲ್ಲಿ ಉಡುಪಿಯ ಜಾಮಿಯಾ ಮಸೀದಿಯಲ್ಲಿ ಜರುಗಿತು.

ಖಾರಿ ಝಫ್ರುಲ್ಲಾ ಖಾನ್ ರವರ ಕುರ್ ಆನ್ ಪಠಣದೊಂದಿಗೆ ಸಭೆ ಆರಂಭವಾಯಿತು. ನಂತರ, ಮೌಲಾನಾ ಮಸೀಹುಲ್ಲಾ ಖಾನ್ ಖಾಸ್ಮಿ ಸ್ವಾಗತಿಸಿದರು. ನಂತರ, ಹಾಫಿಝ್ ಸಯ್ಯದ್ ಆಸಿಮ್ ಅಬ್ದುಲ್ಲಾಹ್ ರವರು ದೇಶದ ಇತ್ತೀಚಿನ ಪರಿಸ್ಥಿತಿ ಮತ್ತು ನಮ್ಮ ಜವಾಬ್ದಾರಿಗಳ ಕುರಿತು ಮಾತಾಡಿದರು. ತದನಂತರ ಜಮೀಯತ್ ಉಲಮಾ‑ಇ‑ಹಿಂದ್, ಮಂಡ್ಯ ಜಿಲ್ಲೆಯ ಅಧ್ಯಕ್ಷರಾದ ಮೌಲಾನಾ ರಿಜ್ವಾನ್ ಖಾಸ್ಮಿಯವರು ಸಂಸ್ಥೆಯ ಸಂಘಟನಾ ಸ್ವರೂಪದ ಬಗ್ಗೆ ವಿವರಿಸಿದರು. ತದನಂತರ ಚುನಾವಣಾ ಪ್ರಕ್ರಿಯೆ ಆರಂಭವಾಯಿತು. ಮೌಲಾನಾ ಝಮೀರ್ ಅಹ್ಮದ್ ರಶಾದಿಯವರನ್ನು ಜಿಲ್ಲಾಧ್ಯಕ್ಷರಾಗಿ ಮತ್ತು ಮೊಹಮ್ಮದ್ ಖಾಲಿದ್ ಮಣಿಪುರ ಅವರನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಮೌಲಾನಾ ಮಸೀಹುಲ್ಲಾ ಖಾನ್ ಖಾಸ್ಮಿ ಇಂದ್ರಾಳಿ ಮತ್ತು ಮೌಲಾನಾ ಅಬ್ದುಲ್ ಹಫೀಜ್ ಖಾಸ್ಮಿ ಕಾರ್ಕಳ ರವರನ್ನು ಉಪಾಧ್ಯಕ್ಷರುಗಳಾಗಿ, ಮೌಲಾನಾ ಜಾವೇದ್ ಖಾಸ್ಮಿ ಮತ್ತು ಮೌಲಾನಾ ಪರ್ವೇಜ್ ಆಲಮ್ ನದ್ವೀ ಕಾಪು ಅವರನ್ನು ಜಂಟಿ ಕಾರ್ಯದರ್ಶಿಗಳಾಗಿ, ಅಸಿಫ್ ಅಜೇಕಾರ್ ರವರನ್ನು ಕೋಶಾಧಿಕಾರಿ ಮತ್ತು ಮೌಲಾನಾ ಉಬೇದುರ್ರಹ್ಮಾನ್ ಅವರನ್ನು ಸಹ ಕೋಶಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು.

ತದನಂತರ ಸಂಘಟನೆಯ ವಿವಿಧ ವಿಭಾಗಗಳಿಗೆ ಸಂಚಾಲಕರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಮೀಯತ್ ಉಲಮಾ‑ಇ‑ಹಿಂದ್, ಕೊರ್ಗ್ ಜಿಲ್ಲೆಯ ಸಹ ಕಾರ್ಯದರ್ಶಿ ಮೊಹಮ್ಮದ್ ಸಲೀಮ್, ಜಿಲ್ಲೆಯ ವಿವಿಧ ಮಸೀದಿಗಳ ಇಮಾಮರು, ಖತೀಬರು ಮತ್ತು ಇತರರು ಉಪಸ್ಥಿತರಿದ್ದರು. ದುಆ ದೊಂದಿಗೆ ಸಭೆ ಮುಕ್ತಾಯ ಗೊಂಡಿತು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions