Advertisement

ಮಾರ್ಚ್ 13 ರಿಂದ 15: ಉಡುಪಿಯಲ್ಲಿ ಮುರಾರಿ- ಕೆದ್ಲಾಯ ರಂಗೋತ್ಸವ

ರಥಬೀದಿ ಗೆಳೆಯರು (ರಿ) ಉಡುಪಿ*

ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ವರ್ಷಂಪ್ರತಿ ಜರಗುವ ಪ್ರತಿಷ್ಠಿತ *ಮುರಾರಿ - ಕೆದ್ಲಾಯ ರಂಗೋತ್ಸವ* ಮಾರ್ಚ್ 13,14 ಮತ್ತು 15 ,2026 ಪ್ರತಿದಿನ ಸಂಜೆ ಗಂಟೆ 6.30ಕ್ಕೆ ಉಡುಪಿ ಎಂ.ಜಿ.ಎಂ.ಕಾಲೇಜು ಮುದ್ದಣ ಮಂಟಪದಲ್ಲಿ ಜರಗಲಿದೆ.

ಮಾರ್ಚ್ 13 ಶುಕ್ರವಾರ 2026,ಸಂಜೆ ಗಂಟೆ 5.45ಕ್ಕೆ ರಂಗೋತ್ಸವವನ್ನು ಮೈಸೂರು ರಂಗಾಯಣದ ನಿರ್ದೇಶಕರಾದ *ಶ್ರೀ_ಸತೀಶ್ ತಿಪಟೂರು* ಅವರು ಉದ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆಯ ಸಹಾಯಕ ನಿರ್ದೇಶಕರಾದ *ಶ್ರೀಮತಿ_ಪೂರ್ಣಿಮಾ* ಮತ್ತು ಉಡುಪಿ ಎಂ.ಜಿ.ಎಂ.ಕಾಲೇಜು ಪ್ರಾಂಶುಪಾಲರಾದ *ಪ್ರೊ.ವನಿತಾ ಮಯ್ಯ* ಭಾಗವಹಿಲಿದ್ದಾರೆ .

ಸಭಾಕಾರ್ಯಕ್ರಮದ ನಂತರ ರಂಗಾಯಣ ಮೈಸೂರು ರೆಪರ್ಟರಿ ಕಲಾವಿದರಿಂದ *ಅಂಬೇಡ್ಕರ್ ಕೊಲಾಜ್*(ರಚನೆ : ಕೋಟಿಗಾನ ಹಳ್ಳಿ ರಾಮಯ್ಯ,ನಿರ್ದೇಶನ :*ಚಿದಂಬರರಾವ್ ಜಂಬೆ*) ನಾಟಕ ಪ್ರದರ್ಶನಗೊಳ್ಳಲಿದೆ.

ಮಾರ್ಚ್ 14 ಶನಿವಾರ , ಸಮುದಾಯ ಶಿವಮೊಗ್ಗ ಕಲಾವಿದರಿಂದ *ನೀರೊಳಗಣ ಕಿಚ್ಚು*(ರಂಗರೂಪ : ಡಾ.ಸಾಸ್ವೇಹಳ್ಳಿ ಸತೀಶ್ , ಐಕೆ. ಬೊಳುವಾರು ನಿರ್ದೇಶನ : *ಡಾ.ಸಾಸ್ವೇಹಳ್ಳಿ ಸತೀಶ್*) ಮತ್ತು ಮಾರ್ಚ್ 15 ,ಭಾನುವಾರ ,ಸಮುದಾಯ ಬೆಂಗಳೂರು ಕಲಾವಿದರಿಂದ *ಭಗವಂತನ_ಮರಣ*(ಮಲಯಾಳಂ ಮೂಲ ಕತೆ : ಕೆ.ಆರ್ ಮೀರಾ .ಕನ್ನಡಕ್ಕೆ : ಕೆ. ಪ್ರಭಾಕರನ್ ರಂಗರೂಪ/ನಿರ್ದೇಶನ : *ಡಾ.ಸ್ಯಾಮ್ ಕುಟ್ಟಿ ಪಟ್ಟಂಕರಿ*)

ನಾಟಕಗಳು ಪ್ರದರ್ಶನಗೊಳ್ಳಲಿದೆ.

ವಿಭಿನ್ನ ಶೈಲಿಯ ವಿಭಿನ್ನ ಕಥಾವಸ್ತುವಿನ ಈ ಮೂರೂ ನಾಟಕಗಳು ಉಡುಪಿಯಲ್ಲಿ ಪ್ರಥಮ ಭಾರಿಗೆ ಪ್ರದರ್ಶನಗೊಳ್ಳಲಿದೆ. ರಂಗಾಸಕ್ತರು ಆಗಮಿಸಿ ರಂಗಾನುಭವವನ್ನು ಪಡೆದು ಕೊಳ್ಳ ಬೇಕು‌ ಎಂದು ಸಂಸ್ಥೆಯ ನಾಟಕ ವಿಭಾಗದ ಸಂಚಾಲಕರಾದ *ಸಂತೋಷ್ ಶೆಟ್ಟಿ ಹಿರಿಯಡ್ಕ* ಮತ್ತು *ಸಂತೋಷ್ ನಾಯಕ್ ಪಟ್ಲ* ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions