ಮಲ್ಲಾರು ಯುವಕ ಮಂಡಲ(ರಿ) ಮಲ್ಲಾರು ಇದರ ವತಿಯಿಂದ ಮಂಡಲದ ಹಿರಿಯ ಸದಸ್ಯರಾದ ಅನ್ವರ್ ಅಲಿ ಕಾಪು ರವರು 79 ನೇ ಸ್ವಾತಂತ್ರ್ಯತ್ಸವದ ಧ್ವಜಾರೋಹಣ ಮಾಡಿ, ಸಮಾಜದಲ್ಲಿ ಶಾಂತಿ, ಪ್ರೀತಿ, ಸೌಹಾರ್ದತೆಯನ್ನು ಕಾಪಾಡಿದರೆ, ನಾವು ಪಡೆದ ಸ್ವಾತಂತ್ರ್ಯವನ್ನು ಉಳಿಸಿಕೊಂಡ್ಡು ಮುನ್ನಡೆಯಲು ಸಾಧ್ಯವಾಗುತ್ತದೆ ಇದಕ್ಕೆ ನಾವೆಲ್ಲರೂ ಬದ್ಧರಾಗಿರಬೇಕೆನ್ನುವ ಸಂದೇಶವನ್ನು ನೀಡಿದರು.
ಈ ಸಂಭ್ರಮಾಚಾರಣೆಯಲ್ಲಿ ಉಪಾಧ್ಯಕ್ಷರು ಹಸನ್ ಅಬ್ದುಲ್ ಖಾದರ್, ಕಾರ್ಯದರ್ಶಿ ಸತೀಶ್ ಆಚಾರ್ಯ, ನಾರಾಯಣ, ವೇಲು ಸ್ವಾಮಿ, ನಸೀರ್ ಅಹಮದ್ ಶರ್ಫುದ್ದಿನ್, ಅಬ್ದುಲ್ ಸತ್ತಾರ್, ಕೃಷ್ಣ ಟೈಲರ್, ಗುರುಮೂರ್ತಿ, ಮೊಯಿದಿನ್, ಜಮಾಲ್, ಮಯ್ಯದಿ, ಅಣ್ಣಪ್ಪ, ಇಬ್ರಾಹಿಮ್, ಮುಹಮ್ಮದ್ ಸೈಫ್, ಅಂಗನವಾಡಿ ಕಾರ್ಯಕತೆಯರಾದ ರೇಖಾ, ವಿಧ್ಯಾ ಪ್ರಶಾಂತ್ ಹಾಗೂ ಇನ್ನಿತರ ಗ್ರಾಮಸ್ಥರು ಉಪಸ್ಥಿತರಿದ್ದರು.
ಸಿಹಿ ತಿಂಡಿ ಮತ್ತು ಪಾನಿಯದ ವ್ಯವಸ್ಥೆಯನ್ನು ವೇಲು ಸ್ವಾಮಿ ಮಾಡಿದ್ದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions