ಬದ್ರಿಯಾ ಜುಮ್ಮಾ ಮಸೀದಿ ಮಲ್ಲಾರು ಮಜೂರು ಕಾಪು, ಇಲ್ಲಿ ನಡೆಯುವ -ಮರ್ಹಾಬಾ ಯಾ ಶಹರ್ ರಬೀಲ್ - ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತ್ ನ ಶಾಸಕರಾದ ಬನಾಬ್ ಕೆ ಅಬ್ದುಲ್ ಜಬ್ಬಾರ್ ರವರು ಭಾಗವಹಿಸಲಿದ್ದಾರೆ. ಇತರ ಮುಖ್ಯ ಅತಿಥಿಗಳಾಗಿ ಯು ಟಿ ಖಾದರ್ ಮತ್ತು ಅಲ್ಪಸಂಖ್ಯಾತ ಇಲಾಖೆ ಹಾಗೂ ವಕ್ಫ್ ಮತ್ತು ವಸತಿ ಸಚಿವರಾದ ಜಮೀರ್ ಅಹಮ್ಮದ್ ರವರೂ ಬರುವ ನಿರೀಕ್ಷೆ ಇದೆ. ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಶಾಸಕರಾದ ಐವನ್ ಡಿಸೋಜ, ಇತರ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪ್ರಮುಖ ಧಾರ್ಮಿಕ ಭಾಷಣಕಾರರಾದ ದಕ್ಷಿಣ ಭಾರತದ ಅಂತರ್ ರಾಷ್ಟ್ರೀಯ ಮೆಚ್ಟಿದ ಖ್ಯಾತ ವಾಗ್ಮಿ ಹಾಫೀಳ್ ಸಿರಾಜುದ್ದೀನ್ ಖಾಸಿಮಿ ಹಾಗೂ ಅಸಯ್ಯದ್ ಅಬ್ದರ್ರಹಮಾನ್ ಬಾಖವಿ ಸಾದತ್ತ್ ತಂಞಲ್ ಗುರುವಾಯನಕೆರೆಯವರ ನೇತೃತ್ವದಲ್ಲಿ ಸ್ವಲಾತ್ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಅಬ್ದುರ್ರಶೀದ್ ಸಖಾಪಿ ಅಲ್ ಖಾಮಿಲ್ ರವರ ನೆರವೇರಿಸಲಿದ್ದಾರೆ. ಜಮಾತಿನ ಅಧ್ಯಕ್ಷರಾದ ಡಾ .ಫಾರೂಕ್ ಚಂದ್ರನಗರ ಇವರ ಅಧ್ಯಕ್ಷತೆ ಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions