Advertisement

ಯುವ ಜನಾಂಗದ ಭವಿಷ್ಯ ರೂಪಿಸಲು ಪೋಷಕರು ಮಾದರಿಯಾಗಲಿ — ವಲಿ ರಹ್ಮಾನಿ

ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಉಡುಪಿ ತಾಲೂಕು ಘಟಕದ ವತಿಯಿಂದ ಭಾನುವಾರದಂದು ಉಡುಪಿ ಮಣಿಪಾಲ್ ಇನ್ ಹೋಟೆಲ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ, ಭಾರತದ ಭವಿಷ್ಯದ ಯುವ ನಾಯಕ ಹಾಗೂ ಸಮಾಜಸೇವಕ ವಲಿ ರಹ್ಮಾನಿ ಅವರು ಯುವಕರಿಗೂ, ಪೋಷಕರಿಗೂ ಪ್ರೇರಣಾದಾಯಕ ಸಂದೇಶ ನೀಡಿದರು.

ಈ ಕಾರ್ಯಕ್ರಮದಲ್ಲಿ ಸುಮಾರು 350 ವಿದ್ಯಾರ್ಥಿಗಳು ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿದರು. ವಲಿ ರಹ್ಮಾನಿ ತಮ್ಮ ಭಾಷಣವನ್ನು ಉತ್ಸಾಹಭರಿತ ಶೈಲಿಯಲ್ಲಿ, ಪ್ರಶ್ನೋತ್ತರ, ಪಿಪಿಟಿ ಪ್ರದರ್ಶನ ಹಾಗೂ ವಿವಿಧ ಚಟುವಟಿಕೆಗಳ ಮೂಲಕ ನಿರ್ವಹಿಸಿ, ಶ್ರೋತೃಗಳ ಮನಗೆದ್ದರು.

ಅವರು ಯುವಕರಿಗೆ ತಮ್ಮ ಮಾನಸಿಕ, ಬೌದ್ಧಿಕ, ನೈತಿಕ ಮತ್ತು ಶೈಕ್ಷಣಿಕ ಸಾಮರ್ಥ್ಯವನ್ನು ಬೆಳೆಸಿ, ಶಿಸ್ತಿನ, ಕೌಶಲ್ಯಸಂಪನ್ನ ಹಾಗೂ ಜವಾಬ್ದಾರಿಯುತ ವ್ಯಕ್ತಿಗಳಾಗಿ ರೂಪುಗೊಳ್ಳುವಂತೆ ಕರೆ ನೀಡಿದರು. “ಸಮಯವನ್ನು ವ್ಯರ್ಥ ಮಾಡಬೇಡಿ, ಕಿಶೋರ ವಯಸ್ಸನ್ನು ಸುರಕ್ಷಿತ ಮತ್ತು ಫಲಪ್ರದವಾಗಿ ಬಳಸಿ” ಎಂದು ಅವರು ಒತ್ತಿ ಹೇಳಿದರು.

ಸಂಜೆಯ ನಡೆದ ಕಾರ್ಯಕ್ರಮದಲ್ಲಿ ಪೋಷಕರನ್ನು ಉದ್ದೇಶಿಸಿ ಮಾತನಾಡಿದ ವಲಿ ರಹ್ಮಾನಿ “ಮಕ್ಕಳು ಪೋಷಕರಿಗೆ ಅಮಾನತ್‌. ಅವರ ದೈಹಿಕ, ಬೌದ್ಧಿಕ, ನೈತಿಕ ಮತ್ತು ಧಾರ್ಮಿಕ ಹಿತವನ್ನು ಪ್ರಾಮುಖ್ಯತೆಯಿಂದ ನೋಡಿಕೊಳ್ಳಬೇಕು. ಮನೆ ಒಂದು ಶಾಲೆಯಾಗಲಿ, ಪೋಷಕರು ಗುರುಗಳಾಗಲಿ, ಮಕ್ಕಳ ಮೊದಲ ಪಾಠ ಮನೆಯಲ್ಲಿಯೇ ಪ್ರಾರಂಭವಾಗಲಿ” ಎಂದು ಹೇಳಿದರು.

ಈ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ (ರಿ) ಉಡುಪಿ ತಾಲೂಕು ಘಟಕದ ಅಧ್ಯಕ್ಷರಾದ ಇರ್ಷಾದ್ ನೇಜಾರವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.

ಜಿಲ್ಲಾಧ್ಯಕ್ಷ ಮೊಹಮ್ಮದ್ ಮೌಲಾ ಸ್ವಾಗತಿಸಿದರು, ಕಾರ್ಯಕ್ರಮದ ಸಂಚಾಲಕರಾದ ಶೇಖ್ ಅಬ್ದುಲ್ ಲತೀಫ್ ಮದನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಕಟಪೂರ್ವ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹುಸೈನ್, ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಒಕ್ಕೂಟದ ಉಡುಪಿ ತಾಲೂಕು ಅಧ್ಯಕ್ಷರಾದ ಇರ್ಷಾದ್ ನೇಜಾರ್ ಧನ್ಯವಾದ ಸಲ್ಲಿಸಿದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions