ಕಾಂ ದಾಸ ಭಂಡಾರಿ ವೇದಿಕೆ,ಕಾಂ ಸೂರ ದೇವಾಡಿಗ ಸಭಾಂಗಣದಲ್ಲಿ, ದುಡಿಯುವ ವರ್ಗದ ಹಕ್ಕುಗಳ ರಕ್ಷಣೆಗಾಗಿ, ಜಿಲ್ಲೆಯಲ್ಲಿ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳು ಸ್ಥಾಪನೆಗಾಗಿ,
ಸಿಐಟಿಯು 8 ನೇ ಉಡುಪಿ ಜಿಲ್ಲಾ ಸಮ್ಮೇಳನ ಇಂದು ಸೆ 14 ರಂದು ಕಾಂ ಕೆ ಶಂಕರ್ ಅವರು ಧ್ವಜಾರೋಹಣ ನೆರವೇರಿಸುವುದರ ಮೂಲಕ ಕುಂದಾಪುರ ಹಂಚು ಕಾರ್ಮಿಕರ ಭವನದಲ್ಲಿ ಚಾಲನೆಗೊಂಡಿತು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ ಮಹಾಂತೇಶ್ ಅವರು ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಾ; ಕಾರ್ಮಿಕರು ಮತದಾನದ ಹಕ್ಕು ಪಡೆದರೂ ಕಾರ್ಮಿಕರು ತಾವೇ ನೀತಿ ಮಾಡುವ ಹಕ್ಕು ಪಡೆದುಕೊಂಡಿಲ್ಲ ಆದುದರಿಂದ ಕಾರ್ಮಿಕ ವರ್ಗ ಕನಿಷ್ಠ ಕೂಲಿಗೆ,ಸೌಲಭ್ಯಗಳಿಗೆ ಹೋರಾಟ ಮಾಡಬೇಕಾಗಿದೆ.
ಈಗಿರುವ ಜನಪ್ರತಿನಿಧಿಗಳು ಹಾಗೂ ಮಾಜಿ ಜನಪ್ರತಿನಿಧಿಗಳು ಯಾವುದೇ ಹೋರಾಟ ಮಾಡದೇ ವೇತನ, ಭತ್ಯೆಗಳನ್ನು ಹೆಚ್ಚಳ ಮಾಡಿಸಿಕೊಳ್ಳುತ್ತಿದ್ದಾರೆ ಇದರ ವಿರುದ್ಧ ಕಾರ್ಮಿಕ ವರ್ಗ ರಾಜಕೀಯ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಅವರು ಕುಂದಾಪುರ ಹಂಚು ಕಾರ್ಮಿಕರ ಭವನದಲ್ಲಿ ನಡೆದ ಸಿಐಟಿಯು ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿದರು.
ಕಾರ್ಮಿಕರನ್ನು 12 ಗಂಟೆ ದುಡಿಸುವ ನೀತಿ ಹಿಂದಿನ ಬಿಜೆಪಿ ತಂದರೆ ಈಗಿನ ಕಾಂಗ್ರೆಸ್ 12 ಗಂಟೆ ಕೆಲಸವನ್ನು ಮುಂದುವರಿಸಿತು ಆದುದರಿಂದ ಬಿಜೆಪಿ ಸರ್ಕಾರ ಕಾಂಗ್ರೆಸ್ ಸರ್ಕಾರದ ಜನಪ್ರತಿನಿಧಿಗಳಾದ ಶತಕೋಟ್ಯಾಧಿಪತಿಗಳೇ ನೀತಿ ಮಾಡುವರಾಗಿರುವುದರಿಂದ ಜನವಿರೋಧಿ ನೀತಿಗಳು ಕಾರ್ಮಿಕ ವರ್ಗವನ್ನೂ ಹೈರಣಾಗಿಸಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕ್ರಷ್ಣ ಶೆಟ್ಟಿ ಮಾತನಾಡಿ; ಬಿಜೆಪಿ ನೇತೃತ್ವದ ಎನ್ ಡಿಎ ಅಧಿಕಾರ ಬಂದ ನಂತರ ಭಾರತೀಯ ಕಾರ್ಮಿಕ ಸಮ್ಮೇಳನ ನಡೆಸುವುದು ಕೈಬಿಟ್ಟಿದೆ. 1991 ರಲ್ಲಿ ಕೆಳ ಹಂತದ ಆದಾಯ ಇರುವ 50 ರಷ್ಟು ಜನರ ಒಟ್ಟು ಆದಾಯಕ್ಕಿಂತ ಶೇ 1 ರಷ್ಟು ಅತೀ ಶ್ರೀಮಂತರ ಆದಾಯ ಕಡಿಮೆ ಇತ್ತು 2004 ಕ್ಕೆ ಬರುವಾಗ ಶೇ 1 ಅತೀ ಶ್ರೀಮಂತರ ಆದಾಯ ಅತೀ ಕಡಿಮೆ ಆದಾಯವುಳ್ಳ ಶೇ 50 ರಷ್ಟು ಜನರ ಒಟ್ಟು ಆದಾಯಕ್ಕಿಂತ ಅತೀ ಹೆಚ್ಚು ಆಗಿದೆ. ಇನ್ನೊಂದೆಡೆ ಕಾರ್ಮಿಕರ ನಿಜ ಆದಾಯ 2017-18 ರಲ್ಲಿ ಮಾಸಿಕ 12665 ಇದ್ದದ್ದು 23-24 ರಲ್ಲಿ 11858 ಕ್ಕೆ ಇಳಿದಿದೆ ಎಂದರು.
ಅಧ್ಯಕ್ಷತೆ ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಕೆ ಶಂಕರ್ ವಹಿಸಿದ್ದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮೂರು ವರ್ಷಗಳ ವರದಿ ಮಂಡಿಸಿದರು.ಖಜಾಂಜಿ ಶಶಿಧರ ಗೊಲ್ಲ ಲೆಕ್ಕ ಪತ್ರ ಮಂಡಿಸಿದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions