"ನ್ಯಾಯದ ಹರಿಕಾರ ಪ್ರವಾದಿ ಮುಹಮ್ಮದ್(ಸ)" ಎಂಬ ಶೀರ್ಷಿಕೆಯಲ್ಲಿ, ಜ.ಇ.ಹಿಂದ್ ಕರ್ನಾಟಕ ರಾಜ್ಯ ಘಟಕವು ಅಭಿಯಾನವನ್ನು ಹಮ್ಮಿಕೊಂಡಿತ್ತು. ಆ ಪ್ರಯುಕ್ತ ಜಮಾಅತೆ ಇಸ್ಲಾಮೀ ಹಿಂದ್, ಕಾರ್ಕಳ ವಿಭಾಗದ ವತಿಯಿಂದ ದೇಶ ಬಾಂಧವವರಿಗಾಗಿ ಸ್ನೇಹಕೂಟ ಕಾರ್ಯಕ್ರಮವನ್ನು ಕಾರ್ಕಳದ ಜಾಮಿಅ ಶಾದಿ ಮಹಲ್ ನಲ್ಲಿ ಇತ್ತೀಚಿಗೆ ಏರ್ಪಡಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಜಮಾತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಜನಾಬ್ ಅಕ್ಬರ್ ಅಲಿಯವರು ಭಾಗವಹಿಸಿ, ದೇವಾಸ್ಥಿತ್ವ,ಮಾನವೀಯತೆ, ಮಾನವ ಜೀವನದ ವಾಸ್ತವಿಕತೆ ಮತ್ತು ಇಂದಿನ ಯುವ ಪೀಳಿಗೆಯ ನೈತಿಕ ವರ್ತನೆಗಳ ಕುರಿತು ಎಚ್ಚರಿಸಿದರು.
ಕರಾವಳಿ ಭಜನಾ ಸಂಸ್ಕಾರ ವೇದಿಕೆ ಮಂಗಳೂರು ಇದರ ಕಾರ್ಕಳ ತಾಲೂಕು ಉಪಾಧ್ಯಕ್ಷರಾದ ತಾರಾನಾಥ ಶೆಟ್ಟಿಯವರು ಸೌಹಾರ್ದ ಸಂದೇಶವನ್ನು ನೀಡಿದರು.
ಇನ್ನೋರ್ವ ಅತಿಥಿ ಜೊಕಿಂ ಪಿಂಟೊ ಅಧ್ಯಕ್ಷರು ಸಹಬಾಳ್ವೆ ಕಾರ್ಕಳ-ಇವರು ಈ ಸ್ನೇಹಕೂಟದ ಬಗ್ಗೆ ತಮಗಿರುವ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.
ಕಾರ್ಕಳ ಮುಸ್ಲಿಂ ಜಮಾತಿನ ಅಧ್ಯಕ್ಷರಾದ ಜನಾಬ್ ಅಶ್ಫಾಕ್ ಅಹ್ಮದ್ ರವರು ಅತಿಥಿಗಳನ್ನು ಸ್ವಾಗತಿಸಿದರು. ಅನ್ವರ್ ಅಲಿ ಕಾಪು ಕಾರ್ಯಕ್ರಮವನ್ನು ನಿರೂಪಿಸಿದರು.
ದೇಶ ಬಾಂಧವರೆಲ್ಲರೂ ಕಾರ್ಯಕ್ರಮದಲ್ಲಿ ಬಹಳ ಹುರುಪಿನೊಂದಿಗೆ ಪಾಲ್ಗೊಂಡರು. ಸಹಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions