ದೇಶದಲ್ಲಿ ಸಮಾನತೆಯನ್ನು ಬಯಸಿದ್ದೇ ಗಾಂಧೀಜಿಯವರ ಹತ್ಯೆಗೆ ಕಾರಣವಾಯಿತು, ಶೂದ್ರ ಮತ್ತು ಅತ್ಯಂತ ತಳ ಸಮುದಾಯದ ಜನರಿಗೆ ದೇವಸ್ಥಾನ ಪ್ರವೇಶ ನೀಡಬೇಕು, ಯಾವ ದೇವಸ್ಥಾನದಲ್ಲಿ ತಳ ಸಮುದಾಯದ ಜನರಿಗೆ ಪ್ರವೇಶವಿಲ್ಲವೋ ಅಂತಹ ದೇವಸ್ಥಾನಕ್ಕೆ ನಾನು ಹೋಗುವುದಿಲ್ಲ ಎನ್ನುವ ಜಾತಿ ವ್ಯವಸ್ಥೆಯ ವಿರುದ್ದದ ಸಮಾನತೆಯ ಪರವಾದ ಹೋರಾಟವೇ ಗಾಂಧಿ ವಿರೋದಿಗಳ ಹುಟ್ಟಿಗೆ ಕಾರಣವಾಯಿತು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಅಭಿಪ್ರಾಯಪಟ್ಟರು ಅವರು ಇಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಬಹುದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಿ ಮಾತನಾಡಿದರು.
ಹಿರಿಯ ಕಾಂಗ್ರೆಸ್ ಮುಖಂಡ ಶೇಖರ್ ಮಡಿವಾಳ ಮಾತನಾಡಿ ಗಾಂಧಿ ಪ್ರತಿಪಾದಿಸಿ ತತ್ವ ಸಿದ್ದಾಂತಗಳು ಸರ್ವ ಕಾಲಕ್ಕೂ ಪ್ರಸ್ತುತ ಮತ್ತು ಆ ತತ್ವ ಸಿದ್ದಾಂತಗಳು ದೇಶದ ಅಭಿವೃದ್ಧಿಗೆ ಪೂರಕವಾಗಿವೆ ಈ ಸಿದ್ದಾಂತಗಳನ್ನು ಅನುಸರಿಸಿದರೆ ಮಾತ್ರವೇ ದೇಶ ಪ್ರಗತಿ ಕಾಣಲು ಸಾದ್ಯ ಎಂದು ದೇಶದ ಚುಕ್ಕಾಗಿ ಹಿಡಿದವರು ಮನಗಾಣಬೇಕು ಆ ಮೂಲಕವೆ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಿರಲು ಸಾದ್ಯ ಎಂದರು.
ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ನಾಗಪ್ಪ ಮೇರ ಮಹನೀಯರ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಿ ದೀಪ ಬೆಳಗಿ ಉದ್ಗಾಟಿಸಿ ಸಂಧರ್ಬೋಜಿತ ಮಾತನಾಡಿದರು.
ಈ ಸಂದರ್ಭದಲ್ಲಿ ಪುರಸಭೆಯ ಮಾಜಿ ಅಧ್ಯಕ್ಷರಾದ ಸುಬಿತ್ ಕುಮಾರ್, ಪ್ರತಿಮಾ ರಾಣೆ, ಸೀತಾರಾಮ್ , ರೆಹಮತ್ ಶೇಖ್, ಜಿಲ್ಲಾ ಕಾಂಗ್ರೇಸ್ ಉಪಾದ್ಯಕ್ಷ ಸುಧಾಕರ್ ಕೋಟ್ಯಾನ್, ಬ್ಲಾಕ್ ಮಹಿಳಾ ಅಧ್ಯಕ್ಷೆ ಬಾನು ಭಾಸ್ಕರ್ ಪೂಜಾರಿ, ಪುರಸಭಾ ಸದಸ್ಯ ವಿವೇಕ್ ಶೆಣೈ, ಸೇವಾದಳ ಅದ್ಯಕ್ಷ ಅಬ್ದುಲ್ಲಾ ಸಾಣೂರು, ಅಲ್ಪಸಂಖ್ಯಾತ ಘಟಕದ ತನ್ವೀರ್ ತೆಳ್ಳಾರ್ ,ಭೂನ್ಯಾಯ ಮಂಡಲಿ ಸದಸ್ಯ ಸುನೀಲ್ ಭಂಡಾರಿ, ಗ್ಯಾರಂಟಿ ಸದಸ್ಯರಾದ ಹೇಮಂತ್, ಪಿಲಿಫ್ಸ್,, ಯುವ ಕಾಂಗ್ರೆಸ್ ಮಂಜುನಾಥ್ ಜೋಗಿ, ಪ್ರಕಾಶ್ ಆಚಾರ್ಯ, ಬ್ಲಾಕ್ ಪಧಾದಿಕಾರಿಗಳು ಉಪಸ್ಥಿತರಿದ್ದರು, ಜಾರ್ಜ್ ಕ್ಯಾಸ್ಟಲೀನೋ ಸ್ವಾಗತಿಸಿ, ರಮೇಶ್ ಪತೊಂಜಿಕಟ್ಟೆ ಧನ್ಯವಾದವಿತ್ತರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions