‘ಪಾದೂರು ಉಳಿಸಿ – ಪರಿಸರ ರಕ್ಷಿಸಿ’ ಹೋರಾಟ ಸಮಿತಿ, ಕಾಪು ಇವರ ವತಿಯಿಂದ ಇಂದು ಕಾಪು ತಾಲೂಕಿನ ಪಾದೂರಿನಲ್ಲಿರುವ Indian Strategic Petroleum Reserves Limited (ISPRL) ಕಚ್ಚಾತೈಲ ಸಂಗ್ರಹ ಘಟಕದ ಎದುರು ಖಾಸಗಿ ಕಂಪನಿ Megha Engineering and Infrastructures Limited (MEIL) ವಿರುದ್ಧ ನೂರಾರು ಜನರು ಸೇರಿ ಬೃಹತ್ ಪ್ರತಿಭಟನೆ ನಡೆಸಿದರು.
ಸುಮಾರು 15 ವರ್ಷಗಳ ಹಿಂದೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಾದೂರಿನಲ್ಲಿ ಕೇಂದ್ರ ಸರ್ಕಾರದ ಯೋಜನೆಯಾಗಿ ಪ್ರಾರಂಭಗೊಂಡ ISPRL ಕಚ್ಚಾತೈಲ ಸಂಗ್ರಹ ಘಟಕ ಕಾರ್ಯನಿರ್ವಹಿಸುತ್ತಿದೆ. ಇದೀಗ ಅದರ ದ್ವಿತೀಯ ಹಂತದ ಕಾಮಗಾರಿಯನ್ನು 60 ವರ್ಷಗಳ ಗುತ್ತಿಗೆ ಆಧಾರದಲ್ಲಿ ಮೇಘಾ ಇಂಜಿನಿಯರಿಂಗ್ ಕಂಪನಿಗೆ ಹಸ್ತಾಂತರಿಸಿರುವುದಕ್ಕೆ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾಕಾರರ ಆರೋಪದಂತೆ, ಮೇಘಾ ಇಂಜಿನಿಯರಿಂಗ್ ಸಂಸ್ಥೆಯು ಕಾಮಗಾರಿ ಪ್ರಾರಂಭಿಸುವ ಮೊದಲು ಸಂಬಂಧಪಟ್ಟ ವಿವಿಧ ಇಲಾಖೆಗಳ ಸಮರ್ಪಕ ಅನುಮತಿಗಳನ್ನು ಪಡೆಯದೆ ಕಾರ್ಯಾಚರಣೆ ಕೈಗೊಂಡಿದೆ. ಅಲ್ಲದೆ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡದೆ ಅವರನ್ನು ನಿರ್ಲಕ್ಷಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೋರಾಟ ಸಮಿತಿ ಸದಸ್ಯರು ತಿಳಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಶ್ರೀ ವಿನಯ್ ಕುಮಾರ್ ಸೊರಕೆಯವರು, “ಕಂಪನಿ ತಕ್ಷಣವೇ ಎಲ್ಲಾ ಕಾನೂನುಬದ್ಧ ಅನುಮತಿಗಳನ್ನು ಪಡೆಯಬೇಕು. ಸ್ಥಳೀಯರಿಗೆ ಉದ್ಯೋಗಾವಕಾಶ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ದಿವಾಕರ್ ಶೆಟ್ಟಿ, ಜಿತೇಂದ್ರ ಫರ್ಟಾಡೋ, ಹನೀಫ್ ಮೂಳೂರು, ಸಂತೋಫ್ ಬೈರಂಪಳ್ಳಿ, ಅನ್ಸಾರ್ ಅಹಮ್ಮದ್, ಸುರೇಂದ್ರ ಜೈನ್ ಸೇರಿದಂತೆ ಹಲವು ನಾಯಕರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಹೋರಾಟ ಸಮಿತಿಯ ಕಾರ್ಯದರ್ಶಿ ಶರ್ಫುದ್ದೀನ್ ಶೇಖ್ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಮಿತಿಯ ಅಧ್ಯಕ್ಷ ಸದಾನಂದ ಪೂಜಾರಿ ಹೇರೂರು, ವಿಲ್ಸನ್ ರೋಡ್ರಿಗ್ಸ್, ಶಾಂತಲತಾ ಶೆಟ್ಟಿ, ಹಸನಬ್ಬ ಶೇಖ್, ರತನ್ ಶೆಟ್ಟಿ, ಮಹಮ್ಮದ್ ಫಾರೂಕ್, ಅಝೀಝ್ ಹೆಜಮಾಡಿ ಸೇರಿದಂತೆ ಅನೇಕ ಮುಖಂಡರು ಹಾಗೂ ನೂರಾರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.
ಸ್ಥಳೀಯ ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳು ಹಾಗೂ ಕನ್ನಡ ಚಳುವಳಿ ಹೋರಾಟಗಾರರು ಪ್ರತಿಭಟನೆಗೆ ಸಾಥ್ ನೀಡಿದ್ದು, ಪಾದೂರಿನ ಪರಿಸರ ಹಾಗೂ ಜನರ ಹಿತಾಸಕ್ತಿಯನ್ನು ಕಾಪಾಡುವಂತೆ ಸರ್ಕಾರ ಮತ್ತು ಕಂಪನಿಗೆ ಒತ್ತಾಯಿಸಿದರು.

ಈ ಸಂಧರ್ಭದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷರಾದ ಸದಾನಂದ ಪೂಜಾರಿ ಹೇರೂರ್, ವಿಲ್ಸನ್ ರೋಡ್ರಗೀಸ್, ಶಾಂತಲತಾ ಶೆಟ್ಟಿ, ಹಸನಬ್ಬ ಶೇಖ್, ರತನ್ ಶೆಟ್ಟಿ, ಮಹಮ್ಮದ್ ಫಾರೂಕ್ ಚಂದ್ರನಗರ, ದಿವಾಕರ್ ಬಿ ಶೆಟ್ಟಿ, ಅಝೀಝ್ ಹೆಜಮಾಡಿ, ಅಶೋಕ್ ನಾಯಿರಿ ಪ್ರಬೋದ್ ಚಂದ್ರ ಹೆಜಮಾಡಿ, ನವೀನ್ ಎನ್ ಶೆಟ್ಟಿ, ರಮೀಝ್ ಹುಸೈನ್, ರಿಯಾಜ್ ಮುದರಂಗಡಿ, ನಿಯಾಜ್ ಪಡುಬಿದ್ರಿ, ಅಮೀರ್ ಮಹಮ್ಮದ್, ಸೈಯ್ಯದ್ ನಿಝಾಮುದ್ದೀನ್ ಇಮ್ರಾನ್ ಮಜೂರು, ಸಾದಿಕ್ ಕೆ ಪಿ,ಅನ್ವರ್ ಅಲಿ, ಬಾಸ್ಕರ್ ಕುಮಾರ್ ವಿಜಯ್ ಧೀರಜ್, ನಾಗಭೂಷಣ್ ರಾವ್, ಸುಮನ್ ಬೊಲಾರ್, ಅಬ್ದುಲ್ಲಾ ಸುಪರ್ ಸ್ಟಾರ್, ಸುಚರಿತಾ, ಐರಿನ್ ತಾವ್ರೊ, ಸವಿತಾ ಕುಂದರ್, ರಾಜೇಶ್ ಕುಲಾಲ್, ಜೋನ್ಸನ್ ಕರ್ಕೆರ, ದೇವರಾಜ್ ಕೋಟ್ಯಾನ್, ಪರ್ಜಾನಾ, ಮೆಲ್ವಿನ್ ಡಿಸೋಜ, ಸುಧೀರ್ ಕರ್ಕೆರ, ಶಾಬಾನ್ ಕರಂದಾಡಿ, ಶಂಶುದ್ದೀನ್ ಕರಂದಾಡಿ, ನಸೀರ್ 51, ಸಮೀರ್ ಮಜೂರ್, ಬಾಬನ್ನ ನಾಯಕ್, ಜ್ಯೋತಿ ಮೆನನ್, ಆಶಾ ಅಂಚನ್, ರಾಜೇಶ್ ರಾವ್ ನಿರಂಜನ್ ಶೆಟ್ಚಿ, ರಾಜೇಶ್ಆಚಾರ್ಯ, ನೂರುದ್ದೀನ್, ವಿದ್ಯಾಲಥಾ, ಸೋಭಾ, ರಾಧೀಕಾ, ಅಬುಬಕ್ಕರ್ ಎ ರ್, ಅಬ್ದಲ್ ರೆಹಮಾನ್, ಜುಬೈರ್ ಅಹಮ್ಮದ್ ಲತೀಫ್, ಕೀರ್ತನ್, ಮತ್ತು ನೂರಾರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions