ದೇಶದಲ್ಲಿ 450ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿದೆ ಅದಕ್ಕೆಲ್ಲ ತನ್ನದೆ ಆದ ಚೌಕಟ್ಟುಗಳಿವೆ ಅದರಾಚೆಗೆ ಏನನ್ನು ಸಹ ಮತನಾಡುವುದಲ್ಲಿ. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಅಂತ ಸಹ ಕರಿಯುತ್ತೇವೆ ಆದರೆ ಪ್ರಭುತ್ವವನ್ನು ಪ್ರಶ್ನಿಸುವ ಕೆಲಸ ಮಾಡದೇ ಇರುವಾಗ ಇಂತಹ ಡಿಜಿಟಲ್ ಮಾಧ್ಯಮಗಳು ಯೂಟ್ಯೂಬ್ ಜಾನಲ್ ಗಳು ಹುಟ್ಟಿಕೊಳ್ಳುತ್ತವೆ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಮುನೀರ್ ಜನ್ಸಾಲೆ ಹೇಳಿದರು.
ಅವರು ಇಂದು ಉಡುಪಿಯ ಮಣಿಪಾಲ್ ಇನ್ ನಲ್ಲಿ ನಡೆದ ನೂತನ ಕನ್ನಡ ಎಕ್ಸ್ ಪ್ರೆಸ್ 24*7 ಡಿಜಿಟಲ್ ಮಾಧ್ಯಮ ಮತ್ತು ಯೂಟ್ಯೂಬ್ ಚಾನಲ್ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿ ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದ ಅವರು ಪ್ರಸ್ತುತ ಸಮಾಜದಲ್ಲಿ ಡಿಜಿಟಲ್ ಮಾಧ್ಯಮಗಳೇ ಸಮಾಜವನ್ನು ತಿದ್ದುವ ಮತ್ತು ಸಮಾಜಕ್ಕೆ ಸತ್ಯ ಸುದ್ದಿಯನ್ನು ತಲುಪಿಸು ಕೆಲಸ ಮಾಡುತ್ತಿವೆ ಆ ಒಂದು ಗುಂಪಿಗೆ ಕನ್ನಡ ಎಕ್ಸ್ ಪ್ರೆಸ್ ಡಿಜಿಟಲ್ ಮಾಧ್ಯಮ ಸೇರಿಕೊಂಡಿರುವುದು ನಿಜಕ್ಕೂ ಇನ್ನಷ್ಟು ಮಹತ್ವನ್ನು ಪಡೆದುಕೊಂಡಿದೆ. ಕನ್ನಡ ಎಕ್ಸ್‌ಪ್ರೆಸ್ ಯಾರ ಪರವೂ ಅಲ್ಲ ಯಾರ ವಿರುದ್ದವೂ ಅಲ್ಲ ಇದು ವಸ್ತುನಿಷ್ಠ ವಾಗಿರುವಂತಹದು ಅದರ ಅವಶ್ಯಕತೆ ಇಂದು ಇದೆ. ಮೊದಲ್ಲೆಲ್ಲ ಮಾಧ್ಯಮಗಳಿಗೆ ಬದ್ದತೆ ಎನ್ನುವಂತಹದು ಇತ್ತು ಆದರೆ ಇಂದು ಅಂತಹ ಬದ್ದತೆಗಳನ್ನು ಕಳೆದುಕೊಂಡಿದೆ. ಇಂದು ವ್ಯಕ್ತಿ ಮಾಡಿದ ತಪ್ಪನ್ನು ಆತನ ಧರ್ಮಕ್ಕೆ ಲೇಪಿಸಿ ಧರ್ಮವನ್ನು ಕಟಕಟೆಯಲ್ಲಿ ನಿಲ್ಲಿಸುವಂತಹ ಷಡ್ಯಂತ್ರಗಳು ಮಾಧ್ಯಮಗಳಿಂದ ನಡೆಯುತ್ತಿವೆ ಎಂದು ಹೇಳಿದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions