Advertisement

ಕನ್ನಡ ಎಕ್ಸ್‌ ಪ್ರೆಸ್‌ 24*7 ನೂತನ ಡಿಜಿಟಲ್‌ ಮಾಧ್ಯಮ ಲೋಕಾರ್ಪಣೆ

ಕರಾವಳಿ ಜಿಲ್ಲೆಗಳ ಕ್ಷಣಕ್ಷಣದ ರೋಚಕ ಸುದ್ದಿಗಳನ್ನು ಜನರಿಗೆ ತಲುಪಿಸುವ ನೂತನ ಕನ್ನಡ ಎಕ್ಸ್‌ ಪ್ರೆಸ್‌ ಡಿಜಿಟಲ್‌ ಮಾಧ್ಯಮ ಮತ್ತು ಯೂಟ್ಯೂಬ್‌ ಚಾನಲ್‌ ಬಿಡುಗಡೆ ಸಮಾರಂಭವು ಇಂದು ಉಡುಪಿಯ ಮಣಿಪಾಲ್‌ ಇನ್‌ ನಲ್ಲಿ ನಡೆಯಿತು

ನೂತನ ಕನ್ನಡ ಎಕ್ಸ್‌ ಪ್ರೆಸ್‌ ಸುದ್ದಿ ಮಾಧ್ಯಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಹಾಗೂ ತುಳು ಸಾಹಿತ್ಯ ಅಕಾಡಮಿಯ ಸದಸ್ಯ ನಾಗೇಶ್‌ ಉದ್ಯಾವರ್‌ ಇತ್ತೀಚನ ದಿನಗಳಲ್ಲಿ ಮಾಧ್ಯಮಗಳು ಕೋಮು ಸಾಮರಸ್ಯ ಸೌಹಾರ್ದತೆಯನ್ನು ಹಾಳು ಮಾಡುವಂತಹ ಕೆಲಸಗಳು ಮಾಡುತ್ತಿವೆ. ಅದರಲ್ಲಿ ಕೆಲವೊಂದು ಬೆರಳಣಿಗೆಯ ಮಾಧ್ಯಮಗಳು ಮಾತ್ರ ಸಮಾಜದ ಧ್ವನಿಯಾಗಿ ಕೆಲಸಮಾಡುತ್ತಿವೆ. ಈ ಕನ್ನಡ ಎಕ್ಸ್‌ ಪ್ರೆಸ್‌ ಸಮಾಜದ ಶೋಷಿತರ, ದಮನಿತರ ಪರ ಧ್ವನಿಯನ್ನು ಎತ್ತಿ ಕರಾವಳಿ ಭಾಗದಲ್ಲಿ ಕೋಮು ಸೌಹಾರ್ದತೆಯನ್ನು ಮರುಕಳಿಸಲು ಒತ್ತನ್ನು ನೀಡಿ ಉನ್ನತ ಮಟ್ಟದಲ್ಲಿ ಬೆಳೆಯಲಿ ನಮ್ಮ ಎಲ್ಲಾ ರೀತಿಯ ಸಹಕಾರ ಇದೆ ಎಂದು ಶುಭ ಹಾರೈಸಿದರು.

ಕನ್ನಡ ಎಕ್ಸ್‌ ಪ್ರೆಸ್‌ ಡಿಜಿಟಲ್‌ ಮಾಧ್ಯಮದ ಪ್ರಧಾನ ಸಂಪಾದಕರಾದ ಮುಶ್ತಾಕ್‌ ಹೆನ್ನಾಬೈಲ್‌ ಮಾತನಾಡಿ, ಕರಾವಳಿ ಜಿಲ್ಲೆಗಳಲ್ಲಿ ಸೌಹಾರ್ದತೆಗೆ ತನ್ನದೆ ಆದ ಕೊಡುಗೆಳನ್ನು ನೀಡಿದೆ. ಕಳೆದ ಹಲವಾರು ವರ್ಷಗಳಿಂದಲೂ ಸದಾ ಸಹೋದರರಂತೆ ಜೀವನ ಸಾಗಿಸುತ್ತಾ ಬಂದವಂತಹ ನಮ್ಮ ಹಿರಿಯರು, ಕೋಮು ಸಾಮರಸ್ಯ ಎನ್ನುವಂತಹದ ಈ ಮಣ್ಣಿನಲ್ಲಿ ಬೆರೆತು ಹೋಗಿದ್ದು ನಾವುಗಳು ಅದನ್ನು ಜನರಿಗೆ ಪುನ ಪುನ ಮನವರಿಕೆ ಮಾಡಿ ಕೊಡಬೇಕಾಗಿದೆ ಇಂತಹ ಕಾಲಘಟ್ಟದಲ್ಲಿ ಡಿಜಿಟಲ್‌ ಮಾಧ್ಯಮ ಅದಕ್ಕೆ ಒಂದು ಸೂತ್ರದಾರಿ. ಕರಾವಳಿ ಭಾಗದ ನೈಜ, ಜನಪರ, ಪಕ್ಷಪಾತವಿಲ್ಲದೆ ಜನರಿಗೆ ತಲುಪಿಸುವ ಕೆಲಸ ನಾವು ಮಾಡುತ್ತೇವೆ ನಿಮ್ಮ ಸಹಕಾರ ನಮಗೆ ಅವಶ್ಯಕತೆ ಇದೆ ಎಂದು ಹೇಳಿದರು.

ಕೆಪಿಸಿಸಿ ರಾಜ್ಯ ವಕ್ತಾರ ಮುನೀರ್‌ ಜನ್ಸಾಲೆ ಮಾತನಾಡಿ ಈ ದೇಶದಲ್ಲಿ 450ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿದೆ ಅದಕ್ಕೆಲ್ಲ ತನ್ನದೆ ಆದ ಚೌಕಟ್ಟುಗಳಿವೆ ಅದರಾಚೆಗೆ ಏನನ್ನು ಸಹ ಮತನಾಡುವುದಲ್ಲಿ. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಅಂತ ಸಹ ಕರಿಯುತ್ತೇವೆ ಆದರೆ ಪ್ರಭುತ್ವವನ್ನು ಪ್ರಶ್ನಿಸುವ ಕೆಲಸ ಮಾಡದೇ ಇರುವಾಗ ಇಂತಹ ಡಿಜಿಟಲ್‌ ಮಾಧ್ಯಮಗಳು ಯೂಟ್ಯೂಬ್‌ ಜಾನಲ್‌ ಗಳು ಹುಟ್ಟಿಕೊಳ್ಳುತ್ತವೆ. ಪ್ರಸ್ತುತ ಸಮಾಜದಲ್ಲಿ ಡಿಜಿಟಲ್‌ ಮಾಧ್ಯಮಗಳೇ ಸಮಾಜವನ್ನು ತಿದ್ದುವ ಮತ್ತು ಸಮಾಜಕ್ಕೆ ಸತ್ಯ ಸುದ್ದಿಯನ್ನು ತಲುಪಿಸು ಕೆಲಸ ಮಾಡುತ್ತಿವೆ ಆ ಒಂದು ಗುಂಪಿಗೆ ಕನ್ನಡ ಎಕ್ಸ್‌ ಪ್ರೆಸ್‌ ಡಿಜಿಟಲ್‌ ಮಾಧ್ಯಮ ಸೇರಿಕೊಂಡಿರುವುದು ನಿಜಕ್ಕೂ ಇನ್ನಷ್ಟು ಮಹತ್ವನ್ನು ಪಡೆದುಕೊಂಡಿದೆ ಎಂದು ಹೇಳಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶೇಕ್‌ ಶರ್ಫೂದ್ದೀನ್‌, ಉಡುಪಿ ವಕ್ಫ್‌ ಬೋರ್ಡ್‌ ಮಾಜಿ ಅಧ್ಯಕ್ಷ ನಕ್ವ ಯಹ್ಯ, ಸಮಾಜ ಸೇವಕ ಡಾ ಎಂ ಫಾರೂಕ್‌ ಚಂದ್ರನಗರ, ಫೀರು ಸಾಹೇಬ್‌, ಹಮ್ಮದ್‌ ನೂತನ ಮಾಧ್ಯಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪದುಬಿದ್ದರಿ ಗ್ರಾಮ ಪಂಚಾಯತ್‌ ಸದಸ್ಯ ರಮೀಝ್‌ ಪಡುಬಿದ್ರಿ, ಸಾಮಾಜಿಕ ಕಾರ್ಯಕರ್ತ ರಿಯಾಜ್‌ ಮುದ್ರಂಗಡಿ, ಅಬ್ದುಲ್ ಇಲ್ಯಾಸ್‌,‌ ರಾಜೇಶ್‌ ಆಚರ್ಯ ಉಪಸ್ಥಿತರಿದ್ದರು. ಕನ್ನಡ ಎಕ್ಸ್‌ ಪ್ರೆಸ್‌ ವರದಿಗಾರ ನೌಫಾಲ್‌ ಅಲ್ತಾಫ್‌ ಧನ್ಯವಾದವಿತ್ತರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions