Advertisement

ಅಮೆರಿಕದ ಜೊತೆಗಿನ ಎಲ್ಲಾ ಸಂವಹನಗಳನ್ನು ಸ್ಥಗಿತಗೊಳಿಸಿದ ಇರಾನ್: ವರದಿ

ಅಮೆರಿಕದೊಂದಿಗಿನ ಎಲ್ಲಾ ರಾಜತಾಂತ್ರಿಕ ಮತ್ತು ಪರೋಕ್ಷ ಸಂವಹನ ಮಾರ್ಗಗಳನ್ನು ಇರಾನ್ ಸ್ಥಗಿತಗೊಳಿಸಿದೆ ಎಂದು ಇರಾನ್‍ನ ಮಾಧ್ಯಮ ಸಂಸ್ಥೆ `ಟೆಹ್ರಾನ್ ಟೈಮ್ಸ್' ಮಂಗಳವಾರ ವರದಿ ಮಾಡಿದೆ.

ಅಮೆರಿಕಾದೊಂದಿಗಿನ ಎಲ್ಲಾ ರಾಜತಾಂತ್ರಿಕ ಮತ್ತು ಪರೋಕ್ಷ ಸಂವಹನ ವ್ಯವಸ್ಥೆಯನ್ನು ಇರಾನ್ ಮುಚ್ಚಿದೆ. ಯಾವುದೇ ಮತ್ತು ಎಲ್ಲಾ ಸಂದೇಶ ವಿನಿಮಯಗಳನ್ನೂ ಸ್ಥಗಿತಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.

ಹಾರ್ಮುಝ್‌ ಜಲಸಂಧಿಯನ್ನು ಮತ್ತೆ ತೆರೆಯಲು ಇರಾನ್‍ಗೆ ಟ್ರಂಪ್ ಗಡುವು ನೀಡುವುದಕ್ಕೆ ಸ್ವಲ್ಪ ಮೊದಲು ಇರಾನ್ ಈ ಕ್ರಮ ಕೈಗೊಂಡಿದೆ ಎಂದು ವರದಿಯಾಗಿದೆ. ಇದಕ್ಕೂ ಮುನ್ನ ವಾಶಿಂಗ್ಟನ್‍ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ್ದ ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ `ಮಾತುಕತೆ ಈಗಲೂ ನಡೆಯುತ್ತಿದೆ. ಉತ್ತಮ ಫಲಿತಾಂಶ ಬರಬಹುದು ಎಂಬ ವಿಶ್ವಾಸವಿದೆ ಎಂದು ಹೇಳಿದ್ದರು.

ಈ ಮಧ್ಯೆ, ಇರಾನ್‍ನ ಜನರು ಸ್ವಾತಂತ್ರ್ಯಕ್ಕಾಗಿ ಎಷ್ಟೇ ಕಷ್ಟ ಅನುಭವಿಸಲೂ ಸಿದ್ಧರಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರತಿಪಾದಿಸಿದ್ದಾರೆ. ಇರಾನ್‍ನ ಮೇಲೆ ಬಾಂಬ್ ಅಭಿಯಾನವನ್ನು ಮುಂದುವರಿಸಬೇಕು ಎಂದು ಅಲ್ಲಿನ ಜನರೇ ಬಯಸುತ್ತಿದ್ದಾರೆ. ಯಾಕೆಂದರೆ ಸ್ವಾತಂತ್ರ್ಯ ಪಡೆಯಬೇಕಿದ್ದರೆ ಕೆಲವು ಕಷ್ಟನಷ್ಟಗಳನ್ನು ಅನುಭವಿಸಬೇಕು ಎಂಬುದು ಅವರಿಗೆ ತಿಳಿದಿದೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಇರಾನ್ ಯುದ್ಧಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಬೆಳವಣಿಗೆಗಳು:

ಮಂಗಳವಾರ ಬೆಳಿಗ್ಗೆ ಸೌದಿ ಅರೆಬಿಯಾದತ್ತ ಡ್ರೋನ್‍ಗಳು ಹಾಗೂ ಕ್ಷಿಪಣಿಗಳನ್ನು ಇರಾನ್ ಪ್ರಯೋಗಿಸಿದ್ದು ದೇಶದ ಅತೀ ದೊಡ್ಡ ಕೈಗಾರಿಕಾ ಕೇಂದ್ರ ಅಲ್ ಜುಬೈಲ್‍ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು ಸ್ಫೋಟವೂ ಸಂಭವಿಸಿದೆ ಎಂದು ವರದಿಯಾಗಿದೆ.

ಸೋಮವಾರ ತಡರಾತ್ರಿ ಕುವೈತ್‌ನಲ್ಲಿ ಅಲಿ ಅಲ್‍ಸಲೆಮ್ ವಾಯುನೆಲೆಯ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಕನಿಷ್ಠ 15 ಅಮೆರಿಕನ್ ಸೈನಿಕರು ಗಾಯಗೊಂಡಿರುವುದಾಗಿ ಅಮೆರಿಕದ ಮೂಲಗಳು ಹೇಳಿವೆ.

ಮಂಗಳವಾರ ಬೆಳಿಗ್ಗೆ ಟೆಹ್ರಾನ್ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಯಹೂದಿಗಳ ಪ್ರಾರ್ಥನಾ ಮಂದಿರ ಸಂಪೂರ್ಣ ನೆಲಸಮಗೊಂಡಿರುವುದಾಗಿ ವರದಿಯಾಗಿದೆ. ಯಹೂದಿ ಧರ್ಮವು ಇರಾನ್‍ನಲ್ಲಿ ಕಾನೂನುಬದ್ಧವಾಗಿ ಗುರುತಿಸಲ್ಪಟ್ಟ ಅಲ್ಪಸಂಖ್ಯಾತ ಧರ್ಮಗಳಲ್ಲಿ ಒಂದಾಗಿದೆ ಮತ್ತು ಇರಾನ್ ಸಣ್ಣ ಯಹೂದಿ ಸಮುದಾಯವನ್ನು ಹೊಂದಿದೆ.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions