Advertisement

ಮಹಾತ್ಮಾ ಗಾಂಧಿ ಸ್ಮಾರಕ ಸಂಜೆ ಕಾಲೇಜಿನಲ್ಲಿ ಎನ್.ಎಸ್.ಎಸ್, ಯೂತ್ ರೆಡ್ ಕ್ರಾಸ್ ಹಾಗೂ ರೋವರ್ಸ್-ರೇಂಜರ್ಸ್ ಘಟಕ ಉದ್ಘಾಟನೆ

ಉಡುಪಿ: ಮಹಾತ್ಮಾ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ (NSS),

ಯೂತ್ ರೆಡ್ ಕ್ರಾಸ್ (YRC) ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ಉದ್ಘಾಟನಾ

ಕಾರ್ಯಕ್ರಮವು ಶುಕ್ರವಾರ 26 ಸೆಪ್ಟೆಂಬರ್ 2025 ರಂದು ಕಾಲೇಜಿನ ಟಿ. ಮೋಹಂದಾಸ್ ಪೈ ಪ್ಲಾಟಿನಂ

ಜುಬಿಲಿ ಬ್ಲಾಕ್ ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉಡುಪಿ ತಾಲ್ಲೂಕು ಕೃಷಿ ಉತ್ಪನ್ನ ಸಹಕಾರಿ ಮಾರ್ಕೆಟಿಂಗ್ ಸೊಸೈಟಿಯ ಲೆಕ್ಕಾಧಿಕಾರಿ

ಶ್ರೀ ವಿಶಾಖ್ ಜಿ. ಶೆಟ್ಟಿ ಉದ್ಘಾಟಿಸಿದರು. ಅವರು ಮಾತನಾಡಿ, ವಿದ್ಯಾರ್ಥಿಗಳು ಸಮಾಜ ಸೇವಾ

ಮನೋಭಾವದೊಂದಿಗೆ ಮುಂದೆ ಬರಬೇಕು ಎಂದು ಹಾರೈಸಿದರು. ಸಮಾಜಮುಖಿ ಚಟುವಟಿಕೆಗಳಲ್ಲಿ

ಪಾಲ್ಗೊಳ್ಳುವ ಮೂಲಕ ವ್ಯಕ್ತಿತ್ವ ವಿಕಸನಕ್ಕೂ, ರಾಷ್ಟ್ರ ನಿರ್ಮಾಣಕ್ಕೂ ನೆರವಾಗಬಹುದು

ಎಂದರು.ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್. ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ

ವಹಿಸಿದರು.

NSS ಅಧಿಕಾರಿ ಶ್ರೀ ಸನತ್ ಕೋಟ್ಯಾನ್, YRC ಸಂಯೋಜಕಿ ಕು. ದೀಪಿಕಾ ಕೋಟ್ಯಾನ್ ಹಾಗೂ ರೋವರ್ಸ್

ಮತ್ತು ರೇಂಜರ್ಸ್ ಸಂಯೋಜಕರು ಕು. ಅಕ್ಷತಾ ನಾಯಕ್ ಮತ್ತು ಶ್ರೀ ಸ್ಟಾಲಿನ್ ಡಾನ್ಸನ್ ಡಿ’ಸೋಜಾ

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು .

ಕಾರ್ಯಕ್ರಮವನ್ನು ಪ್ರಜ್ಞಾ ದ್ವಿತೀಯ ಬಿಸಿಎ ನಿರೂಪಿಸಿ, ಮಧುರಾ ದ್ವಿತೀಯ ಬಿಸಿಎ ಸ್ವಾಗತಿಸಿದರು.

ಅತಿಥಿಗಳ ಪರಿಚಯವನ್ನು ರಾಮಚಂದ್ರ ಮಾಡಿ ,ದ್ವಿತೀಯ ಬಿಸಿಎ, ಕಾರ್ತಿಕ್ ದ್ವಿತೀಯ ಬಿಸಿಎ ಧನ್ಯವಾದ

ಸಮರ್ಪಿಸಿದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions