Advertisement

ಪರಶುರಾಮನ ಪ್ರತಿಮೆಯಲ್ಲಿ ಕಾರ್ಕಳದ ಜನತೆಗೆ ಮತ್ತು ಸರ್ಕಾರಕ್ಕೆ ಮೋಸವೆಸಗಿದ್ದಾರೆ

ಕಾರ್ಕಳದ ಪ್ರಸಿದ್ದಿಗೆ ಕಲಶಪ್ರಾಯ ಆಗಬೇಕಿದ್ದ ಪರಶುರಾಮ ಥೀಮ್ ಪಾರ್ಕ್ ಶಾಸಕ ಸುನೀಲ್ ಕುಮಾ‌ರ್ ರಾಜಕೀಯದ ಹಿತಾಸಕ್ತಿಗೆ ಬಲಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಉದಯ್ ಕುಮಾರ್ ಶೆಟ್ಟಿ ಹೇಳಿದರು.

ಅವರು ಇಂದು ಉಡುಪಿಯ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಂಚಿನ ಪರಶುರಾಮ ಪ್ರತಿಮೆ ನಿರ್ಮಾಣ ಮಾಡುತ್ತೇನೆಂದು ಕಾರ್ಕಳದ ಜನತೆಗೆ ಮತ್ತು ರಾಜ್ಯ ಸರ್ಕಾರಕ್ಕೆ ಮಾತು ನೀಡಿದ ಶಾಸಕ ಸುನೀಲ್ ಕುಮಾರ್ ಕಂಚಿನಿಂದ ಪ್ರತಿಮೆ ನಿರ್ಮಿಸದೆ ಪೈಬರ್ ಮತ್ತು ಇನ್ನಿತರ ವಸ್ತುಗಳಿಂದ ನಿರ್ಮಾಣ ಮಾಡಿರುವುದು ಇದು ಕಾರ್ಕಳದ ಜನತೆಗೆ ಮಾಡಿದ ದ್ರೋಹವಾಗಿದೆ.

ಪ್ರತಿಮೆ ನಿರ್ಮಾಣದಲ್ಲಿ ಮೋಸವಾಗಿದೆ ಎನ್ನುವ ವಿಚಾರದಲ್ಲಿ ಪ್ರಕರಣ ದಾಖಲಾಗಿ ಪೋಲಿಸ್ ತನಿಖೆ ನಡೆಯುವಾಗಲೂ ಸುನೀಲ್ ಕುಮಾರ್ ಇದನ್ನು ಕಂಚಿನಿಂದಲೇ ಮಾಡಲಾಗಿದೆ ಎಂದು ಸಮರ್ಥನೆ ಮಾಡುತ್ತಾ ಬಂದಿದ್ದಾರೆ. ಆದರೆ ಪೋಲಿಸರು ತನಿಖೆ ನಡೆಸಿ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದು ಪರಶುರಾಮ ಪ್ರತಿಮೆಯನ್ನು ಕಂಚಿನಿಂದ ತಯಾರಿಸಲಾಗಿಲ್ಲ ಎನ್ನುವ ಸತ್ಯವನ್ನು ಬಹಿರಂಗಗೊಳಿಸಿದ್ದಾರೆ.

ಚುನಾವಣೆಯಲ್ಲಿ ತಾನು ಗೆಲ್ಲಬೇಕು ಎನ್ನುವ ದುರಾಲೋಚನೆಯಿಂದ ಕಾರ್ಕಳ ಶಾಸಕ ಸುನೀಲ್ ಕುಮಾ‌ರ್ ಪರಶುರಾಮ ಪ್ರತಿಮೆಯಲ್ಲಿ ಕಾರ್ಕಳದ ಜನತೆಗೆ ಮತ್ತು ಸರ್ಕಾರಕ್ಕೆ ಮೋಸವೆಸಗಿದ್ದಾರೆ.

ಕಂಚಿನಿಂದ ಪ್ರತಿಮೆ ನಿರ್ಮಿಸುತ್ತೇನೆಂದು ಸುಳ್ಳು ಹೇಳಿ ಹೈಬರ್ ಮತ್ತಿತರ ವಸ್ತುಗಳಿಂದ ಪ್ರತಿಮೆ ನಿರ್ಮಿಸಿ ಕಾರ್ಕಳದ ಜನತೆಯ ಧಾರ್ಮಿಕ ಭಾವನೆಗಳಿಗೆ ದಕ್ಕೆಯುಂಟು ಮಾಡಿದ್ದಾರೆ. ಮೂರ್ತಿ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ನಕಲಿ ಪ್ರತಿಮೆಯ ಮುಂದೆ ಕಾರ್ಕಳದ ಎಲ್ಲಾ ಭಜನಾ ಮಂಡಳಿಗಳಿಂದ ಭಜನೆಯನ್ನು ಮಾಡಿಸಿ, ಶಂಖ ನಾದಗೈದು ಜನರಲ್ಲಿ ಧಾರ್ಮಿಕ ಭಾವನೆಯ ಶ್ರದ್ದಾ ಭಕ್ತಿಯೊಂದಿಗೆ ಸುನೀಲ್ ಕುಮಾರ್ ಚೆಲ್ಲಾಟವಾಡಿದ್ದಾರೆ. ಬಹುಶಃ ಸುನೀಲ್ ಕುಮಾರ್ ಅವರಂತೆ ಧರ್ಮಕ್ಕೆ ದ್ರೋಹ ಎಸಗಿದ, ಜನರ ಭಾವನೆಗಳಿಗೆ ಮಸಿ ಬಳಿದ ವ್ಯಕ್ತಿ ಭಾರತದಲ್ಲಿಯೇ ಬೇರೆ ಯಾರೂ ಇರಲಿಕ್ಕಿಲ್ಲ.

ಭಾರತ ದೇಶ ಋಷಿ ಮುನಿಗಳಿಂದ ನಿರ್ಮಿತವಾಗಿದೆ ಎನ್ನುವ ಪ್ರತೀತಿಯನ್ನು ನಾವು ಪುರಾಣಗಳಲ್ಲಿ ಕೇಳಿ ತಿಳಿದಿದ್ದು ಇದು ನಮ್ಮ ನಂಬಿಕೆಯಾಗಿದೆ. ಭಾರತದ ತಳಹದಿ ನಿಂತಿರುವುದೇ ಧರ್ಮದ ನಂಬಿಕೆಯ ಮೇಲೆ. ಭಾರತದ ಆತ್ಮವೇ ನಂಬಿಕೆ.

ಈ ನಂಬಿಕೆಯ ಮೇಲೆ ಸುನೀಲ್ ಕುಮಾರ್ ಆಟವಾಡುವ ಮೂಲಕ ದೇಶಕ್ಕೆ ವಂಚಿಸಿದಂತಾಗಿದೆ. ಕಂಚಿನ ಪ್ರತಿಮೆ ನಿರ್ಮಾಣ ಮಾಡುತ್ತೇವೆಯೆಂದು ನಕಲಿ ಪ್ರತಿಮೆ ನಿರ್ಮಿಸಿ ಜನರ ನಂಬಿಕೆಗೆ ಸುನೀಲ್ ಕುಮಾರ್ ದ್ರೋಹ ಎಸಗಿದ್ದಾರೆ. ಭಾರತದ ಆತ್ಮವೇ ನಂಬಿಕೆಯಾಗಿದ್ದು ನಂಬಿಕೆಗೆ ದ್ರೋಹ ಎಸಗಿದ ಸುನೀಲ್ ಕುಮಾರ್ ದೇಶಕ್ಕೆ ವಂಚನೆ ಮಾಡಿದಂತೆ.

ಕಂಚಿನ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ನಕಲಿ ಪ್ರತಿಮೆ ನಿರ್ಮಾಣ ಮಾಡಿದ ಪರಿಣಾಮ ಜನರ ನಂಬಿಕೆಗೆ ಧಕ್ಕೆಯಾಗಿದ್ದು ಮತ್ತೆ ಈ ಎಲ್ಲಾ ಅಪವಾದಗಳನ್ನು ಕಳೆಯಲು ಬೈಲೂರಿನಲ್ಲಿ ಅಸಲಿ ಕಂಚಿನ ಪರಶುರಾಮ ಪ್ರತಿಮೆ ನಿರ್ಮಾಣ ಮಾಡುವುದು ನಮ್ಮ ಕರ್ತವ್ಯ. ಜನರ ನಂಬಿಜೆಯನ್ನು, ಧರ್ಮವನ್ನು, ಸತ್ಯವನ್ನು, ನ್ಯಾಯವನ್ನು ಉಳಿಸಬೇಕಾದರೆ ಮತ್ತೆ ಅಲ್ಲಿ ಪರಶುರಾಮ ಪ್ರತಿಮೆ ನಿರ್ಮಾಣ ಮಾಡುವುದು ಅನಿವಾರ್ಯ.

ಈ ಬಗ್ಗೆ ಈ ಹಿಂದೆಯೂ ನಾನು ನನ್ನ ಅಭಿಪ್ರಾಯವನ್ನು ನಿಮ್ಮ ಮುಂದೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದೆ. ಧಾರ್ಮಿಕ ಪಂಡಿತರ, ಪ್ರಾಜ್ಞರ ಅಭಿಪ್ರಾಯ ಪಡೆದು ಅಷ್ಟಮಂಗಲ ಪ್ರಶ್ನೆಯ ಮೂಲಕ ಇಲ್ಲಿ ಮತ್ತೆ ಪರಶುರಾಮ ಪ್ರತಿಮೆ ನಿರ್ಮಾಣ ಆಗಬೇಕು ಎನ್ನುವ ಅಭಿಪ್ರಾಯವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.

ಪೋಲಿಸರ ತನಿಖೆಯಿಂದ ಬೈಲೂರಿನಲ್ಲಿ ಕಂಚಿನದ್ದಲ್ಲದ ನಕಲಿ ಪ್ರತಿಮೆ ನಿರ್ಮಾಣವಾಗಿದ್ದು ಸಾಬೀತಾಗಿದ್ದು ಮತ್ತೆ ಅಲ್ಲಿ ಅಸಲಿ ಕಂಚಿನ ಪ್ರತಿಮೆ ನಿರ್ಮಿಸುವ ಅಲುವಾಗಿ ನಾನು ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದೇನೆ.

ಪರಶುರಾಮ ಪ್ರತಿಮೆ ನಿರ್ಮಾಣ ಆಗಲೇಬೇಕು ಎನ್ನುವ ನನ್ನ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಿಂದ ಸುನೀಲ್ ಕುಮಾರ್ ಆತಂಕಿತರಾಗಿದ್ದಾರೆ. ಈಗಾಗಲೇ ಜನರನ್ನು ಮೋಸಗೊಳಿಸಿದ ಪಾಪ ಪ್ರಜ್ಞೆ ಅವರನ್ನು ಕಾಡುತ್ತಿದ್ದು ನನ್ನ ಅರ್ಜಿಗೆ ಅವರು ವಿನಾಕಾರಣ ವಿರೋಧಿಸುತ್ತಿದ್ದಾರೆ. ಸುನೀಲ್ ಕುಮಾರ್ ಮತ್ತು ಅವರ ಗ್ಯಾಂಗ್ ಎಪ್ಪೆಡ ವಿರೋದಿಸಿದರೂ ಬೈಲೂರಿನಲ್ಲಿ ಮತ್ತೆ ಪರಶುರಾಮ ಪ್ರತಿಮೆ ನಿರ್ಮಾಣ ಮಾಡಿಯೇ ಮಾಡುತ್ತೇವೆ ಎಂದು ಸ್ಪಷ್ಟಪಡಿಸುತ್ತಿದ್ದಾರೆ‌.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions