ಹಿರಿಯಡ್ಕ: ಇಲ್ಲಿನ ಹಿರೇಬೆಟ್ಟು ಭಟ್ರಕೋಡಿಯಲ್ಲಿನ ಗ್ರಾಮದ ದೇವರಾದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಿರ್ಣೋದ್ದಾರದ ಕಾರ್ಯದ ಅಂಗವಾಗಿ ಶಿಲಾಮಯ ಗರ್ಭಗೃಹದ ನಿರ್ಮಾಣಕ್ಕೆ ಬಳಸುವ ನೂತನ ಶಿಲೆಗಳಿಗೆ ಪ್ರಥಮ ಪೂಜೆ ಸಲ್ಲಿಸುವ ಮೂಲಕ ಉಡುಪಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗು ಸಿಜೆಎಮ್ ಎಮ್.ಪುರುಷೋತ್ತಮ್ ಬುಧವಾರ ಚಾಲನೆ ನೀಡಿದರು.
ಶ್ರೀ ಕ್ಷೇತ್ರದ ತಂತ್ರಿಗಳಾದ ವಿದ್ವಾನ್ ಡಾ| ಸತ್ಯ ಕೃಷ್ಣ ಭಟ್ ಮಂಗಳೂರು ಇವರ ನೇತೃತ್ವದಲ್ಲಿ ಬೆಳಗ್ಗೆ 10 ಗಂಟೆಗೆ ಶಿಲಾನ್ಯಾಸದ ಶಿಲೆಗಳಿಗೆ ಅರಶಿನ, ಕುಂಕುಮ, ಹಾಲು, ಹೂಗಳನ್ನು ಸಮರ್ಪಿಸಿ, ಸ್ವತಃ ನ್ಯಾಯಾಧೀಶರೇ ಆರತಿಯನ್ನು ಬೆಳಗುವುದರ ಮೂಲಕ ಶುಭ ಕಾರ್ಯವನ್ನು ಆರಂಭಿಸಿದರು.
ಜಿರ್ಣೋದ್ದಾರ ಸಮಿತಿಯ ಅಧ್ಯಕ್ಷ ಶ್ರೀನಿಧಿ ಹೆಗ್ಡೆ, ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್ ನಾಯಕ್,
ಸೀತಾರಾಮ್ ಭಟ್, ಜಯಪ್ರಕಾಶ್ ನಾಯಕ್, ಶಂಕರ ನಾಯಕ್, ಚಂದ್ರಶೇಖರ ನಾಯಕ್, ಸುಂದರ ಮೂಲ್ಯ, ನಾರಾಯಣ ಪೂಜಾರಿ, ಚಂದ್ರಯ್ಯ ಆಚಾರ್ಯ, ಪುರಂದರ ಆಚಾರ್ಯ, ರಮೇಶ್ ನಾಯಕ್, ಗುರುನಂದನ್ ನಾಯಕ್, ಗುರುದಾಸ್ ಭಂಡಾರಿ, ಸುಧೀರ್ ಶೆಟ್ಟಿ, ಶ್ಯಾಮ್ ನಾಯ್ಕ್, ಸುರೇಶ್ ನಾಯ್ಕ್, ಶೈಲೇಶ್ ಪೂಜಾರಿ, ಗುರುರಾಜ್ ಆಚಾರ್ಯ, ಶಶೀಂದ್ರ ಪೂಜಾರಿ, ದಿನೇಶ್ ಪ್ರಭು, ಡಾ.ಕೃಷ್ಣ ಮೂರ್ತಿ, ಕೇಶವ್ ಭಂಡಾರಿ, ಗೋಪಾಲ್ ನಾಯಕ್, ಕೇಶವ್ ನಾಯಕ್, ನಂದಕುಮಾರ್, ಮಹದೇವ್ ಭಟ್, ಮುರುಳೀಧರ್ ಲಾಗ್ವಂಕರ್
ಮೊದಲಾದವರು ಉಪಸ್ಥಿತರಿದ್ದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions