ಸುನ್ನೀ ಕೋ-ಆರ್ಡಿನೇಶನ್ ಸಮಿತಿ ಬೆಳ್ತಂಗಡಿ ತಾಲೂಕು ಸಮಿತಿಯ ವತಿಯಿಂದ ಪ್ರವಾದಿ ಪೈಗಂಬರ್ ಅವರ 1500ನೇ ಜನ್ಮ ದಿನಾಚರಣೆಯ ಪ್ರಯುಕ್ತ 'ಗ್ರ್ಯಾಂಡ್ ಹುಬ್ಬುರ್ರಸೂಲ್ ಮಜ್ಲಿಸ್' ಎನ್ನುವ ವಿಶೇಷ ಮೌಲಿದ್ ಪಾರಾಯಣ ಹಾಗೂ ಬುರ್ದಾ ಕಾರ್ಯಕ್ರಮ ಗುರುವಾಯನಕೆರೆ ಮಂಜುಬೆಟ್ಟು ಎಫ್.ಎಂ. ಗಾರ್ಡನ್ ನಲ್ಲಿ ಸೆ.23ರಂದು ಬೆಳಗ್ಗೆ 10ಕ್ಕೆ ಆಯೋಜಿಸಲಾಗಿದೆ ಎಂದು ಸುನ್ನೀ ಕೋ ಆರ್ಡಿನೇಷನ್ ಕಮಿಟಿಯ ಉಪಾಧ್ಯಕ್ಷ ಸಿಟಿಎಂ ಉಮರ್ ಅಸ್ಸಖಾಫ್ ತಂಙಳ್ ತಿಳಿಸಿದ್ದಾರೆ.
ನಗರದ ವಾರ್ತಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಉಲಮಾ ಒಕ್ಕೂಟದ ಅಧ್ಯಕ್ಷ, ಉಡುಪಿ, ಚಿಕ್ಕಮಗಳೂರು ಸಂಯುಕ್ತ ಖಾಝಿ ಶೈಖುನಾ ಮಾಣಿ ಉಸ್ತಾದ್, ಸೈಯದ್ ಸಾದಾತ್ ತಂಙಳ್, ಸೈಯದ್ ಇಸ್ಮಾಯೀಲ್ ತಂಙಳ್, ಸೈಯದ್ ಕಾಜೂರು ತಂಙಳ್, ಸೈಯದ್ ಮಲ್ಜಅ ತಂಙಳ್, ಸೈಯದ್ ಮನ್ಶರ್ ತಂಙಳ್, ಸೈಯದ್ ವಾದಿ ಇರ್ಫಾನ್ ತಂಙಳ್, ಸೈಯದ್ ಅಬ್ದುಸ್ಸಲಾಂ ತಂಙಳ್, ಸೈಯದ್ ಎಸ್.ಎಂ ತಂಙಳ್, ಸೈಯದ್ ಕರ್ಪಾಡಿ ತಂಙಳ್, ಸೈಯದ್ ಪೊಮ್ಮಾಜೆ ತಂಙಳ್, ಸೈಯದ್ ವೇಣೂರು ತಂಙಳ್, ಡಾ.ಕಾವಳಕಟ್ಟೆ ಹಝ್ರತ್, ಕಾಸಿಂ ಮದನಿ ಕರಾಯ, ಹೈದರ್ ಮದನಿ ಕರಾಯ, ಅಬೂ ಸ್ವಾಲಿಹ್ ಉಸ್ತಾದ್ ಕಿಲ್ಲೂರು, ಕೃಷ್ಣಾಪುರ ಇಬ್ರಾಹೀಂ ಮುಸ್ಲಿಯಾರ್, ಪಿ.ಪಿ. ಉಸ್ತಾದ್ ಕಾಶಿಪಟ್ಣ, ಪೆರ್ನೆ ಉಸ್ತಾದ್, ಯಾಕೂಬ್ ಉಸ್ತಾದ್ ಮದ್ದಡ್ಕ ಒಳಗೊಂಡಂತೆ ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ. ಆರಿಫ್ ಸಅದಿ ಬಳಗದವರು ಮದ್ಹ್ ಆಲಾಪನೆ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.
ತಾಲೂಕಿನ ವಿವಿಧ ಮೊಹಲ್ಲಾಗಳ ಆಡಳಿತ ಮಂಡಳಿ ಪ್ರತಿನಿಧಿಗಳು ಮತ್ತು ಜಮಾಅತ್ ಬಾಂಧವರು, ಮುತಅಲ್ಲಿಮ್ ಗಳು, ಎಸ್ಸೆಸ್ಸೆಫ್, ಎಸ್ವೈಎಸ್, ಕರ್ನಾಟಕ ಮುಸ್ಲಿಮ್ ಜಮಾಅತ್, ಸುನ್ನೀ ಮ್ಯಾನೇಜ್ ಮೆಂಟ್ ಅಸೋಸಿಯೇಶನ್, ಸುನ್ನೀ ಜಂ ಇಯ್ಯತುಲ್ ಉಲಮಾ, ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್, ಕರ್ನಾಟಕ ಕಲ್ಚರಲ್ ಫೌಂಡೇಶನ್ ಮತ್ತಿತರರು ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸುನ್ನೀ ಕೋ ಆರ್ಡಿನೇಶನ್ ಕಮಿಟಿಯ ಅಧ್ಯಕ್ಷ ಸೈಯದ್ ಸಾದಾತ್ ತಂಙಳ್, ಕಾರ್ಯಾಧ್ಯಕ್ಷ ಜಿ.ಕೆ.ಉಮರ್ ಗುರುವಾಯನಕೆರೆ, ಕಾರ್ಯದರ್ಶಿ ಸಲೀಂ ಕನ್ಯಾಡಿ, ಕೋಶಾಧಿಕಾರಿ ಮುಹಮ್ಮದ್ ರಫಿ ಬೆಳ್ತಂಗಡಿ ಉಪಸ್ಥಿತರಿದ್ದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions