ಉಡುಪಿ ಜಿಲ್ಲಾ ಕಾಂಗ್ರೆಸ್ ಹಾಗೂ ಜಿಲ್ಲಾ ಕಿಸಾನ್ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಭವನದಲ್ಲಿ ಜಿಲ್ಲಾಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರವರ ಅಧ್ಯಕ್ಷತೆಯಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಕಿಸಾನ್ ಕಾಂಗ್ರೆಸ್ ವತಿಯಿಂದ ಸಾಧಕ ಶಿಕ್ಷಕರುಗಳಾದ ಭಾಸ್ಕರ್ ಶೆಟ್ಟಿ ತೆಕ್ಕಟ್ಟೆ ಹಾಗೂ ಶ್ರೀಮತಿ ದೇವಿಕಾ ಟೀಚರ್ ಅದಮಾರು ಇವರನ್ನು ಸನ್ಮಾನಿಸಲಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಎಲ್ಲೂರು ಶಶಿಧರ್ ಶೆಟ್ಟಿ ಅವರು ಕಿಸಾನ್ ಕಾಂಗ್ರೆಸ್ ನ ಸಾಧನೆಯ ಬಗ್ಗೆ ವಿವರ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಗಣನಾಥ ಎಕ್ಕಾರ್ ಹಾಗೂ ಜ್ಯೋತಿ ಹೆಬ್ಬಾರ್ ಇವರು ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಜಯಪ್ರಕಾಶ್ ಹೆಗ್ಡೆ, ವಿನಯಕುಮಾರ್ ಸೊರಕೆ, ಎಂ ಎ ಗಫುರ್, ಮಂಜುನಾಥ್ ಪೂಜಾರಿ, ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್, ಕಿಶನ್ ಹೆಗ್ಡೆ, ಹಬೀದ್ ಹಾಲಿ, ಧರ್ಮ ಗುರುಗಳಾದ ವಿಲಿಯಂ ಪಿಂಟೊ, ಕಿಸಾನ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ಶೇಖರ್ ಕೋಟ್ಯಾನ್ ಉದ್ಯಾವರ, ಅಬ್ದುಲ್ ಹಮೀದ್ ಉದ್ಯಾವರ ಪ್ರಧಾನ ಕಾರ್ಯದರ್ಶಿ ಉದಯ ಹೇರೂರು, ಕಾರ್ಯಾಧ್ಯಕ್ಷರಾದ ಪ್ರಕಾಶ್ ಪೂಜಾರಿ ಕೇರ್ವಸೆ, ಕಿಸಾನ್ ರಾಜ್ಯ ಕಾರ್ಯದರ್ಶಿಗಳಾದ ರೋಯ್ಸ್ ಫರ್ನಾಂಡಿಸ್, ನಾಗಪ್ಪ ಕೊಟ್ಟಾರಿ, ಹರೀಶ್ ಶೆಟ್ಟಿ ಕೀಲಿಂಜೆ, ಕಿಸಾನ್ ಕಾಂಗ್ರೆಸ್ ಗ್ರಾಮ ಅಧ್ಯಕ್ಷರುಗಳಾದ ಸೋಮಯ್ಯ ಕಾಂಚನ್ ಕುರ್ಕಾಲ್, ಕೀರ್ತನ ಪಲಿಮಾರು, ಮ್ಯಾಕ್ಸಿ ಡಿಸೋಜ ಪಲಿಮಾರು, ರಮೇಶ್ ದೇವಾಡಿಗ ಪಾದೆಬೆಟ್ಟ, ಸುಬ್ಬಯ್ಯ ಮೂಲ್ಯ ಪಾದೆಬೆಟ್ಟು, ಪ್ರಕಾಶ್ ಪೂಜಾರಿ ಎಲ್ಲೂರು, ಪಾಂಡು ಶೆಟ್ಟಿ ಎಲ್ಲೂರು, ಗೀತಾ ವಾಗ್ಲೆ, ಚಂದ್ರಿಕಾ ಶೆಟ್ಟಿ, ಶೋಭಾ ಬಂಗೇರ, ಪರ್ಜನಾ ಕಾಪು, ದೀಪಕ್ ಕೋಟ್ಯಾನ್ ಹೆಜಮಾಡಿ, ಗ್ಯಾಬ್ರಿಯಲ್ ಮಾಥಾಯಿಸ್ ಮುದರಂಗಡಿ, ರಾಜು ಪೂಜಾರಿ ಕೋಟ, ಸಿಬಿ ಕೆ ಎಸ್ ವಂಡ್ಸೆ, ಮುಂತಾದ ಕಿಸಾನ್ ಕಾಂಗ್ರೆಸ್ ಪದಾಧಿಕಾರಿಗಳು ಹಾಜರಿದ್ದ ಈ ಕಾರ್ಯಕ್ರಮವನ್ನು ಅಣ್ಣಯ್ಯ ಸೇರಿಗಾರ್ ಹಾಗೂ ಗೋವರ್ಧನ್ ಜೋಗಿ ನಿರ್ವಹಿಸಿ ವಂದಿಸಿದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions