Advertisement

ಇಂದ್ರಾಳಿ ಮಂಚಿ ನೂರಾನಿ ಮಸೀದಿಗೆ ನೂತನ ಆಡಳಿತ ಸಮಿತಿ ರಚನೆ

ಉಡುಪಿ ತಾಲೂಕಿನ ಇಂದ್ರಾಳಿ ಮಂಚಿ ನೂರಾನಿ ಮಸೀದಿಯ ಆಡಳಿತ ಸಮಿತಿಗೆ ನೂತನ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.

ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಆದೇಶದಂತೆ ಮಂಚಿ ನೂರಾನಿ ಮಸೀದಿಯ ಮುಂದಿನ ಮೂರು ವರ್ಷಗಳ ಆಡಳಿತಕ್ಕಾಗಿ 11 ಸದಸ್ಯರನ್ನೊಳಗೊಂಡ ಆಡಳಿತ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ.

ಸೆಪ್ಟೆಂಬರ್‌ 27ರಂದು ಚುನಾವಣಾಧಿಕಾರಿಯಾಗಿ ಕಮಲ್‌ ಶಾ ಅಲ್ತಾಫ್‌ ಹುಸೈನ್‌ ರವರ ಮೇಲ್ನೋಟದಲ್ಲಿ ಹಾಗೂ ಮಂಚಿ ನೂರಾನಿ ಮಸೀದಿಯ ಆಡಳಿತಾಧಿಕಾರಿ ಮೊಹಮ್ಮದ್ ಹುಸೇನ್ ಚುನಾವಣಾ ಪ್ರಕ್ರಿಯೆ ನಡೆಸಿದರು.

ನೂತನ ಆಡಳಿತ ಸಮಿತಿಗೆ ಅನಸ್‌ ಮೊಹಮ್ಮದ್‌, ಅನ್ಸಾರ್‌ ಶೇಖ್‌ ಮೊಹಮ್ಮದ್‌, ಅಸ್ವಾದ್ ಅಹ್ಮದ್‌ ಶೇಖ್‌, ಬುಡ್ನಾರ್‌ ಗಫೂರ್‌ ಸಾಹೇಬ್‌, ಕೆ. ಅಶ್ರಫ್‌ ಅಲಿ, ಮೊಹಮ್ಮದ್‌ ಆದಿಲ್‌, ಬಿ. ಶುಕೂರ್‌ ಸಾಹೇಬ್‌, ಫರ್ಹಾಜ್‌ ಫಿರೋಜ್‌ ನಾಹೀದ್‌, ಮೆಹರಾಜ್‌, ಪಿ. ಫಾರೂಕ್‌ ಸಾಹೇಬ್‌ ಹಾಗೂ ಶಬ್ಬೀರ್‌ ಅಹ್ಮದ್‌ ಕಾರ್ಕಳ ಸೇರಿದಂತೆ ಸದಸ್ಯರು ಆಯ್ಕೆಯಾಗಿದ್ದಾರೆ.

ನೂತನ ಸಮಿತಿಯು ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಮಸೀದಿಯ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions