Advertisement

ಸಾಯಿ ಈಶ್ವರ್ ಗುರೂಜಿಯ ಪಂಚಾಶತ್ ಜನ್ಮ ವೈಭವಕ್ಕೆ ಅ.4ರಂದು ಚಾಲನೆ

ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠ ಏಕ ಜಾತಿ ಧರ್ಮಪೀಠದ ಆತ್ಮಜ್ಞಾನಿ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಪಂಚಾಶತ್ ಜನ್ಮ ವೈಭವಕ್ಕೆ ಅ.4ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಚಾಲನೆ ದೊರೆಯಲಿದೆ.

ಅ.3ರಂದು ಗಣಹೋಮ, ಪವಮಾನ ಹೋಮ, ಮಧ್ಯಾಹ್ನದ ಆರತಿ, ಅನ್ನಪ್ರಸಾದ, ರಾಮತಾರಕ ಮಂತ್ರ ಹಾಗೂ ಮಹಾಪೂಜೆ ನಡೆಯಲಿವೆ. ಅ.4ರಂದು ಬೆಳಗ್ಗೆ ವೈಷ್ಣವೀ ಹವನ್ ಪಂಚಾಶದ್ವರ್ಷೀಯ, ಕಲಶಾಭಿಷೇಕ, ಗುರುವಂದನೆ ಹಾಗೂ ಮಹಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಅ.4ರಂದು ಬೆಳಗ್ಗೆ 10.30ಕ್ಕೆ ನಡೆಯುವ ಪಂಚಾಶತ್ ಜನ್ಮ ವೈಭವದ ಚಾಲನಾ ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು ಹಾಗೂ ಧಾರ್ಮಿಕ ಗುರುಗಳು ಭಾಗವಹಿಸಲಿದ್ದಾರೆ. ಜೋಗಿಮಠ ಕದ್ರಿ ಮಂಗಳೂರಿನ ಶ್ರೀ 1008 ರಾಜ ಯೋಗಿ ನಿರ್ಮಲಾನಾಥ್ ಮಹಾರಾಜ್, ಶ್ರೀ ಆದಿಶಕ್ತಿ ಭುವನೇಶ್ವರಿ ಆದಿನಾಥ ಸಿದ್ಧಿಪೀಠದ ಶ್ರೀ ಪ್ರವೀಣ್ ರಾಜ್ ಮಚ್ಚೇಂದ್ರನಾಥ್ ಬಾಬಾ, ಬೆಂಗಳೂರು ಸಿದ್ಧಿವಿನಾಯಕ ಶರಭೇಶ್ವರ ಪೀಠದ ಪೀಠಾಧಿಪತಿ ಶ್ರೀ ಮಹರ್ಷಿ ಜಯ ಶ್ರೀನಿವಾಸನ್ ಗುರೂಜಿ ಸೇರಿದಂತೆ ಹಲವು ಗುರುವರ್ಯರು ದಿವ್ಯ ಉಪಸ್ಥಿತರಿರುವರು.

ಪಂಚಾಶತ್ ಜನ್ಮ ವೈಭವದ ಅಂಗವಾಗಿ 2026ರ ಅ.10ರಿಂದ 2027ರ ಅ.10ರವರೆಗೆ ಒಂದು ವರ್ಷದ ಕಾಲ ವಿವಿಧ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದಾನಿಗಳು, ಶಿಷ್ಯರು ಹಾಗೂ ಭಕ್ತರ ಸಹಕಾರದೊಂದಿಗೆ ನಿರಂತರ ಗೋಸೇವೆ, ಅನ್ನದಾನ, ಶಿಕ್ಷಣ ಹಾಗೂ ಆರೋಗ್ಯ ಸೇವೆ, ವಸ್ತ್ರ ಮತ್ತು ಅಗತ್ಯ ವಸ್ತುಗಳ ವಿತರಣೆ, ಮಹಿಳೆಯರು, ಮಕ್ಕಳು ಹಾಗೂ ವೃದ್ಧರ ಸೇವೆ, ಪರಿಸರ ಸಂರಕ್ಷಣೆ ಮತ್ತು ತುರ್ತು ನೆರವು ಸೇರಿದಂತೆ ಹಲವು ಸೇವಾ ಕಾರ್ಯಗಳನ್ನು ನಡೆಸಲಾಗುವುದು.

ಇದರೊಂದಿಗೆ ಯೋಗ ಮತ್ತು ಧ್ಯಾನ ಶಿಬಿರಗಳನ್ನು ಆಯೋಜಿಸುವ ಮೂಲಕ ಧರ್ಮ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುವುದು ಎಂದು ಗೀತಾಂಜಲಿ ಎಂ. ಸುವರ್ಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿಗಳಾದ ರಾಘವೇಂದ್ರ ಪ್ರಭು ಕರ್ವಾಲು, ಗಜೇಂದ್ರ ಎಸ್. ಬೇಲೆಮನೆ, ವಾರಿಜಾ ಆರ್. ಕಲ್ಮಾಡಿ, ವಿಜಯ್ ಕುಂದರ್ ಹಾಗೂ ನಾಗರಾಜ್ ಬೈಂದೂರು ಉಪಸ್ಥಿತರಿದ್ದರು.

ಈ ಪುಣ್ಯ ಸೇವಾ ಕಾರ್ಯಗಳಿಗೆ ಪತ್ರಿಕಾ ಹಾಗೂ ದೃಶ್ಯ ಮಾಧ್ಯಮಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಶಿಷ್ಯವೃಂದ ಕೋರಿದೆ.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions