ಧರ್ಮಸ್ಥಳದಲ್ಲಿ ಅನಾಮಿಕ ವ್ಯಕ್ತಿ SIT ಯೊಂದಿಗೆ ನಡೆಸುತ್ತಿರುವ ಅವಶೇಷಗಳ ಪತ್ತೆ ಕಾರ್ಯದಲ್ಲಿ ಇಂದು ಮಹತ್ವದ ಬೆಳವಣಿಗೆ ಆಗಿದ್ದು ಒಂದೇ ಜಾಗದಲ್ಲಿ ಹಲವಾರು ಶವಗಳ ತಲೆಬುರುಡೆ, ಮೂಳೆಗಳು ಪತ್ತೆಯಾಗಿವೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಇಂದು ಬೆಳಿಗ್ಗೆಯಿಂದ SIT 11 ನೇ ಪಾಯಿಂಟ್ ನಲ್ಲಿ ಶೋಧನೆ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ಅನಾಮಿಕ ವ್ಯಕ್ತಿ ಮತ್ತೊಂದು ಸ್ಥಳಕ್ಕೆ ಇಡೀ ತಂಡವನ್ನು ಕರೆದೊಯ್ದು ಅಗೆತ ನಡೆಸಿದಾಗ ಒಂದಕ್ಕಿಂತ ಹೆಚ್ಚು ಕಳೆಬರಹಗಳ ಅವಶೇಷಗಳು ಪತ್ತೆಯಾಗಿವೆ. ಕೂಡಲೇ SIT ಆ ಅವಶೇಷಗಳನ್ನು FSL ತಂಡಕ್ಕೆ ವರ್ಗಾಯಿಸಿದೆ ಎಂದು SIT ಮೂಲಗಳು ತಿಳಿಸಿವೆ.
ಈವರೆಗೆ ತಾನು ಗುರುತಿಸಿದ್ದ 13 ಪಾಯಿಂಟ್ ಗಳಲ್ಲಿ 6 ನೇ ಪಾಯಿಂಟ್ ನಲ್ಲಿ ಮಾತ್ರ ಅವಶೇಷಗಳು ದೊರೆತಿದ್ದವು. ಇಂದು ಒಂದೇ ಜಾಗದಲ್ಲಿ ಹಲವು ದೇಹಗಳ ಅವಶೇಷಗಳು ಸಿಕ್ಕಿರುವುದು ಅನಾಮಿಕ ವ್ಯಕ್ತಿಯ ಮಾತುಗಳಿಗೆ ಹೆಚ್ಚಿನ ಬಲ ತಂದಿದೆ. SITಗೂ ಸಹ ಈ ವ್ಯಕ್ತಿಯ ಮೇಲೆ ನಂಬಿಕೆ ಬಂದಿದೆ ಎನ್ನಲಾಗಿದೆ.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions