Advertisement

ಧರ್ಮಸ್ಥಳ ಪ್ರಕರಣ | "ಬಿಜೆಪಿ ಧರ್ಮದ ವಿಚಾರದಲ್ಲಿ ರಾಜಕೀಯ ಮಾಡುವ ಚಾಳಿಗೆ ಬಿದ್ದಿದೆ" - ಮುಖ್ಯಮಂತ್ರಿ ಸಿದ್ದರಾಮಯ್ಯ

ಬಿಜೆಪಿಯವರು ಧರ್ಮಸ್ಥಳಕ್ಕೆ ಧರ್ಮಯಾತ್ರೆಯ ಹೊಸ ತಂತ್ರ ಹೆಣೆಯುತ್ತಿದ್ದಾರೆ. ಅವರು ಎಲ್ಲದರಲ್ಲಿಯೂ ರಾಜಕೀಯ ಮಾಡುತ್ತಾರೆ. ಯಾತ್ರೆ ಹೋದರೆ ಹೋಗಲಿ. ಎಸ್.ಐ.ಟಿ ರಚನೆಯನ್ನು ಶ್ರೀ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೇ ಸ್ವಾಗತಿಸಿದ್ದಾರೆ. ಸತ್ಯ ಹೊರ ಬರಬೇಕೆಂಬ ಕಾರಣದಿಂದ ಎಸ್ಐಟಿ ರಚನೆ ಮಾಡಲಾಗಿದೆ. ಇಲ್ಲದಿದ್ದರೆ ಧರ್ಮಸ್ಥಳದ ಬಗ್ಗೆ ಯಾವಾಗಲೂ ತೂಗುಗತ್ತಿ ಇರುತಿತ್ತು. ಈ ಸಂದೇಹವನ್ನು ಹೋಗಲಾಡಿಸಲು ಎಸ್.ಐ.ಟಿ ರಚನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅವರು ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಜೊತೆ ಮಾತನಾಡಿ, ಫೀರ್ಯಾದುದಾರ ನ್ಯಾಯಾಲಯದ ಮುಂದೆ ಹೋಗಿ 164 ಹೇಳಿಕೆಯನ್ನು ನೀಡಿದ್ದಾರೆ. ಅನೇಕ ಸಂಘ ಸಂಸ್ಥೆಗಳು ಎಸ್‌ಐಟಿ ರಚಿಸಬೇಕೆಂದು ಒತ್ತಾಯವನ್ನು ಮಾಡಿದ್ದವು. ಬಿಜೆಪಿಯವರು ಕೂಡ ಇದನ್ನು ಸ್ವಾಗತಿಸಿದ್ದರು. ಈಗ ಮಾತ್ರ ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ಧರ್ಮದ ವ್ಯಾಖ್ಯಾನವೇ ಗೊತ್ತಿಲ್ಲ. ಧರ್ಮಸ್ಥಳದ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕಾದ ಅಗತ್ಯ ಎಲ್ಲಿದೆ? ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವ ಪ್ರಕರಣವನ್ನು ಸಿಬಿಐ ಗೆ ಕೊಟ್ಟಿದ್ದಾರೆ? ಎಸ್.ಐ.ಟಿ ಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು, ತನಿಖೆ ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ. ಸದ್ಯ ಬೇರೆ ತನಿಖೆ ಅಗತ್ಯವಿಲ್ಲ ಎಂದು ನಾನು ಭಾವಿಸಿದ್ದೇನೆ ಎಂದು ಹೇಳಿದರು.

"ಸಿನ್ ಗೂಡ್ಸ್ ಮೇಲೆ ಸೆಸ್ ಹಾಕಿ‌ ಜಿಎಸ್‌ಟಿ ನಷ್ಟ ಪರಿಹಾರ ಒದಗಿಸುವಂತೆ ಕೋರಿದ್ದೇವೆ"

ಕೇಂದ್ರ ಸರ್ಕಾರ ಜಿ.ಎಸ್.ಟಿ ಎರಡು ಸ್ಲ್ಯಾಬ್ ಮಾಡುವುದರಿಂದ ಪ್ರತಿ ವರ್ಷ 15 ಸಾವಿರ ಕೋಟಿ ನಷ್ಟವಾಗಬಹುದೆಂದು ಅಂದಾಜಿಸಲಾಗಿದೆ. ತರ್ಕಬದ್ಧಗೊಳಿಸುವುದನ್ನು ಸ್ವಾಗತಿಸುತ್ತೇವೆ, ಆದರೆ ಹಣಕಾಸಿನ(Revenue Protection) ರಕ್ಷಣೆಯಾಗಬೇಕೆನ್ನುವುದು ನಮ್ಮ ಉದ್ದೇಶ. ಅದಕ್ಕಾಗಿ ಎಂಟು ರಾಜ್ಯಗಳು ದೆಹಲಿಯಲ್ಲಿ ಚರ್ಚೆ ಮಾಡಿದ್ದು, 2.50 ಲಕ್ಷ ಕೋಟಿ ರೂ. ಇಡೀ ರಾಜ್ಯದಲ್ಲಿ ಸಂಗ್ರಹವಾಗುತ್ತದೆ. 15 ಸಾವಿರ ಕೋಟಿ ನಷ್ಟವಾಗಲಿದ್ದು, ಇದು ದೊಡ್ಡ ಮೊತ್ತ.

2017 ರಲ್ಲಿ ಜಿಎಸ್‌ಟಿ ಜಾರಿಯಾದಾಗ 5 ವರ್ಷ ಮಾತ್ರ ಪರಿಹಾರ ನೀಡುವುದಾಗಿ ಹೇಳಿದ್ದರು. ಈಗ ಸುಮಾರು 12% ತೆರಿಗೆ ಬೆಳವಣಿಗೆಯಾಗಿದೆ. ಲಕ್ಷುರಿ(ಸಿನ್ ಗೂಡ್ಸ್ ) ವಸ್ತುಗಳಾದ ಸಿಗರೇಟ್, ಗುಟ್ಕಾ, ಪಾನ್ ಮಸಾಲಾ ಬೆಂಜ್ ಕಾರುಗಳಲ್ಲಿ ಓಡಾಡುವವ ಮೇಲೆ ಸೆಸ್ ಹಾಕಿ ನಮಗೆ ಪರಿಹಾರ ಕೊಡಿ ಎಂದು ಸಲಹೆ ನೀಡಿದ್ದೇವೆ. ಸಚಿವ ಕೃಷ್ಣಭೈರೇಗೌಡ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅವರೇ ಈಗ ಎಂಟು ರಾಜ್ಯಗಳ ಆರ್ಥಿಕ ಸಚಿವರೊಂದಿಗೆ ಸಭೆ ನಡೆಸಿದ್ದಾರೆ. ಸೆಪ್ಟೆಂಬರ್ 3 ಮತ್ತು 4 ರಂದು ನಡೆಯಲಿರುವ ಸಭೆಯಲ್ಲಿ ಇದನ್ನು ಪ್ರಸ್ತಾಪ ಮಾಡಲಿದ್ದಾರೆ. ಜಿಎಸ್‌ಟಿ ವಿಚಾರವಾಗಿ ರಾಜ್ಯದ ಬಿಜೆಪಿಯ ಸಂಸದರು ಎಂದಿಗೂ ಕೇಂದ್ರವನ್ನು ಒತ್ತಾಯಿಸುವುದಿಲ್ಲ. ಕರ್ನಾಟಕಕ್ಕೆ ₹11,950 ಕೋಟಿಗಳು ನಷ್ಟವಾಯಿತು. ಬಿಜೆಪಿ ಸಂಸದರು ಈ ಬಗ್ಗೆ ಮಾತನಾಡಿಯೇ ಇಲ್ಲ. ಧರ್ಮಸ್ಥಳಕ್ಕೆ ಧರ್ಮಯಾತ್ರೆ ಕೈಗೊಂಡಿದ್ದಾರೆ. ರಾಜ್ಯಕ್ಕೆ ಅನ್ಯಾಯವಾಗಿರುವ ಬಗ್ಗೆ ಯಾವಾಗ ಮಾತನಾಡಿದ್ದಾರೆ? ಧರ್ಮಸ್ಥಳದ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ.ಆಸ್ತಿ ನೋಂದಣಿ ಶುಲ್ಕ ಹೆಚ್ಚಳವಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ದಕ್ಷಿಣ ಭಾರತದ ಇತರೆ ರಾಜ್ಯಗಳಿಗೆ ಸಮಾನವಾಗಿ ಶೇಕಡಾ ಒಂದರಷ್ಟನ್ನು ಹೆಚ್ಚಿಸಲಾಗಿದೆ ಎಂದು ಹೇಳಿದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions