ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವತಿಯಿಂದ ಸಮುದಾಯದ ಮುಖಂಡರ, ಪಕ್ಷದ ನಾಯಕರ ಮತ್ತು ಕಾರ್ಯಕರ್ತರ ಸಭೆ ಬಾಸೆಲ್ ಮಿಶೆನರೀಸ್ ಮೆಮೋರಿಲ್ ಆಡಿಟೋರಿಯಮ್ ನಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಶರ್ಫುದ್ದೀನ್ ಶೇಖ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಘಟಕದ ರಾಜ್ಯದಕ್ಷರು, ವಿಧಾನ ಪರಿಷತ್ತ್ ನ ಸದಸ್ಯರಾದ ಕೆ ಅಬ್ದುಲ್ ಜಬ್ಬಾರ್ ರವರು ಅಲ್ಪಸಂಖ್ಯಾತ ಸಮುದಾಯದ ನಾಯಕರೊಂದಿಗೆ ಚರ್ಚೆ ನಡೆಸಿ ಸಮುದಾಯದ ಸಮಸ್ಯೆಗಳನ್ನು ಆಲಿಸಿ ಅವಹಾಲುಗಳನ್ನು ಸ್ವೀಕರಿಸಿದರು.
ಮಾಜಿ ಸಚಿವರಾದ ಶ್ರೀ ವಿನಯ್ ಕುಮಾರ್ ಸೊರಕೆಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಸರಕಾರ ಎಲ್ಲಾ ಸಮುದಾಯದ ಪರ ಇದೆ ಹಾಗೂ ಕಾಂಗ್ರೆಸ್ ಪಕ್ಷ ಬಡವರ ಪರ ಎಂದು ಮಾತನಾಡಿದರು.
ನಾಯಕರಾದ ಎಂ ಎ ಗಫೂರ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಸಿರಾಜ್ ಆಹಮ್ಮದ್, ಅಬ್ದುಲ್ ಮುನೀರ್ ಜನ್ಸಾಲೆ, ರಮೇಶ್ ಕಾಂಚನ್, ಡಾ ಶೇಖ್ ವಹೀದ್, ಸದಾನಂದ ಕಾಂಚನ್, ಹಸನ್ ಶೇಖ್, ನಕ್ವಾ ಯಹ್ಯ, ಪ್ರಶಾಂತ್ ಜತ್ತನ್ನ, ಎಂ ಪಿ ಮೈದಿನಬ್ಬ, ಮುಸ್ತಾಕ್ ಹೆನ್ನಾಬೈಲ್, ಮಹಮ್ಮದ್ ಮೌಲಾ ಹಮ್ಮದ್ ಉಡುಪಿ, ಶೇಖ್ ಶಬ್ಬೀರ್ ಕಾರ್ಕಳ, ಫಾದರ್ ಮಿಲಿಯಂ ಮಾರ್ಟಿಸ್, ನಜೀರ್ ಆಹಮ್ಮದ್, ಶಬ್ಬೀರ್ ಬೈಂದೂರ್, ಫಝಲ್ ಎಸ್ ನೇರಳಕಟ್ಟೆ, ಉಸ್ತಾದ್ ಸಾದಿಕ್ ಹೂಡೆ, ರಿಯಾಜ್ ಮುದರಂಗಡಿ, ಹಮೀದ್ ಯೂಸುಪ್ ಮೂಳೂರು, ರಮೀಝ್ ಹುಸೈನ್, ರೋಶನ್ ರೋಡ್ರಗೀಸ್, ಅಲ್ತಾಫ್ ಆಹಮ್ಮದ್, ನಿಯಾಝ್ ಅಹಮದ್ ಪಡುಬಿದ್ರಿ ಮುಂತಾದ ಅನೇಕ ನಾಯಕರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions