ಧರ್ಮಸ್ಥಳ ಪ್ರಕರಣದಲ್ಲಿ ಚಿನ್ನಯ್ಯ ಈಗ ಡಬಲ್ ಗೇಮ್ ಆಡುತ್ತಿದ್ದಾನೆ, ತನಿಖೆಯ ದಾರಿ ತಪ್ಪಿಸುತ್ತಿದ್ದಾನೆ ಎಂದು ಜಯಂತ್ ಟಿ ಹೇಳಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಅವರು, ನಮ್ಮ ಸೌಜನ್ಯ ಹೋರಾಟದ ದಾರಿ ತಪ್ಪಿಲ್ಲ. ಚಿನ್ನಯ್ಯ ಈಗ ಸುಳ್ಳು ಹೇಳಿ ಬಚಾವಾಗಲು ಪ್ರಯತ್ನ ಮಾಡುತ್ತಿದ್ದಾನೆ ಎಂದು ಆರೋಪಿಸಿದರು.
ಈ ಪ್ರಕರಣದಲ್ಲಿ ಆತ ಪಾರಾಗುವುದಿಲ್ಲ. ಎಲ್ಲೋ ಯಾರೋ ಕರೆ ಮಾಡಿ ದಾರಿ ತಪ್ಪಿಸಿದ್ದಾರೆ. ಬುರುಡೆ ಹೊರಗೆ ಬಂದರೆ ನಿನಗೆ ಜೈಲೇ ಗತಿ ಎಂದು ಯಾರೋ ಭಯಪಡಿಸಿದ್ದಾರೆ. ನಿಜವಾದ ಜಾಗವನ್ನು ತೋರಿಸದೇ ಸುಳ್ಳು ಜಾಗವನ್ನು ತೋರಿಸುತ್ತಿದ್ದಾನೆ. ಎಷ್ಟು ದಿನಗಳ ಕಾಲ ನಡೆದ ಘಟನೆ ಎಲ್ಲವೂ ಹಾಗಾದರೆ ಸುಳ್ಳಾ ಎಂದು ಪ್ರಶ್ನಿಸಿದರು.
ಇಬ್ಬರು ಸ್ವಾಮೀಜಿಯ ಬಳಿ ತೆರಳಿ ಮಾತುಕತೆ ಮಾಡಲಾಗಿತ್ತು. ಸ್ವಾಮೀಜಿ ಯಾರು ಎಂದು ಕೆಲವರಿಗೆ ಗೊತ್ತಾಗಿರಬಹುದು ನಾನು ಹೇಳುವುದಿಲ್ಲ. ಸ್ವಾಮೀಜಿ ಮುಂದೆ ಚಿನ್ನಯ್ಯ ಒಂದೂವರೆ ಗಂಟೆ ಮಾತಾಡಿದ್ದಾನೆ. ಮಟ್ಟಣ್ಣನವರು, ಮಹೇಶ್ ಶೆಟ್ಟಿ ಸ್ವಾಮೀಜಿ ಬಳಿ ತೆರಳಿದ್ದಾರೆ. ನನಗೆ ಮೊದಲೇ ಕಮ್ಯುನಿಸ್ಟ್ ಎಂಬ ಹಣೆಪಟ್ಟೆ ಇದೆ. ಹಾಗಾಗಿ ನಾನು ದೂರ ಉಳಿದೆ ಎಂದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions