ಕಾಪುವಿನ ಸ್ಮಾಲ್ ವರ್ಲ್ಡ್ ಬೇಸ್‌ಮೆಂಟ್‌ನಲ್ಲಿ ನೂತನ ‘ಶಿಫಾನ್ ಕಲೆಕ್ಷನ್’ ಅಬಾಯಾ ಬೂಟಿಕ್ ಶುಭಾರಂಭಗೊಂಡಿತು.

ಅಕ್ಟೋಬರ್ 2ರಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಜೂರು–ಮಲ್ಲಾರ್‌ನ ತಂಗಳ್ ಸಯ್ಯಿದ್ ಮುಹಮ್ಮದ್ ಶಹೀರ್ ಅಲ್ಹಿಕಾಮಿ ಅಲ್ಹಾಶಿಮಿ ಅವರು ‘ಶಿಫಾನ್ ಕಲೆಕ್ಷನ್’ ಅಬಾಯಾ ಬೂಟಿಕ್‌ನ್ನು ಉದ್ಘಾಟಿಸಿ ದುಅ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಖತೀಬ್ ಯಾಕೂಬ್ ಸಾದಿ ಹಾಗೂ ಕಾಜಿ ಪಿ.ಬಿ. ಅಹ್ಮದ್ ಮುಸ್ಲಿಯಾರ್ ಕಾಪು ಉಪಸ್ಥಿತರಿದ್ದು, ನೂತನ ಸಂಸ್ಥೆಗೆ ಶುಭ ಹಾರೈಸಿ ದುಅ ಆಶಿರ್ವಾದ ನೀಡಿದರು.
ಮಹಿಳೆಯರಿಗಾಗಿ ವೈವಿಧ್ಯಮಯ ವಿನ್ಯಾಸ ಹಾಗೂ ಗುಣಮಟ್ಟದ ಅಬಾಯಾ ಉಡುಪುಗಳ ಆಯ್ಕೆಯನ್ನು ಒದಗಿಸುವ ಉದ್ದೇಶದಿಂದ ‘ಶಿಫಾನ್ ಕಲೆಕ್ಷನ್’ ಆರಂಭಿಸಲಾಗಿದೆ. ಗ್ರಾಹಕರ ಅಭಿರುಚಿ ಹಾಗೂ ಇತ್ತೀಚಿನ ಫ್ಯಾಷನ್‌ಗೆ ಅನುಗುಣವಾಗಿ ವಿವಿಧ ಮಾದರಿಯ ಅಬಾಯಾಗಳನ್ನು ಒಂದೇ ಸೂರಿನಡಿ ಒದಗಿಸುವ ಮೂಲಕ ಕಾಪು ಹಾಗೂ ಸುತ್ತಮುತ್ತಲಿನ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಗುರಿಯನ್ನು ಸಂಸ್ಥೆ ಹೊಂದಿದೆ ಎಂದು ಸಂಸ್ಥೆಯ ಮಾಲಿಕರಾದ ಇಬ್ರಾಹಿಂ ಹೇಳಿದರು.
ಉದ್ಘಾಟನಾ ಸಂದರ್ಭದಲ್ಲಿ ಕುಟುಂಬಸ್ಥರು, ಸ್ನೇಹಿತರು, ಬಂಧುಗಳು ಹಾಗೂ ಹಿತೈಷಿಗಳು ಭಾಗವಹಿಸಿ ನೂತನ ಉದ್ಯಮಕ್ಕೆ ಶುಭಾಶಯಗಳನ್ನು ಕೋರಿದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions