ಪ್ರವಾದಿ ಪೈಂಗಬರ್ ಮಹಮ್ಮದ್ ಮುಸ್ತಫಾ ರವರ ಜನ್ಮದಿನಾಚರಣೆಯನ್ನು ಕರಾವಳಿ ಜಿಲ್ಲೆಯಾದ್ಯಂತ ಇಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ಕಾಪು ತಾಲೂಕಿನಲ್ಲಿ ಪ್ರತಿ ವರ್ಷಯೂ ನಡೆಯುವಂತೆ ಈ ಬಾರಿಯೂ ಎಲ್ಲಾ ಮಸೀದಿಯ ಜಮಾತಿನ ಸದಸ್ಯರು ಮತ್ತು ಮದ್ರಸಗಳ ವಿದ್ಯಾರ್ಥಿಗಳಿಂದ ಪೈಗಂಬರವರ ಸ್ವಲಾತ್ ಗಳನ್ನು ಹೇಳುವ ಮೂಲಕ ಹಾಗೂ ಸುಂದರವಾದ ಧಫ್ ಗಳ ಗಳಿಂದ ಸಾವರಾರು ಮಂದಿ ಕಾಪುವಿನ ಕೊಪ್ಪಲಂಗಡಿ ಮಸೀದಿ ಯಿಂದ ಕಾಪು ಪೇಟೆಯ ಮೂಲಕ ಪೊಲಿಪು ಮಸೀದಿ ತನಕ ಭವ್ಯ ಮೆರವಣೆಗೆ ಬರಲಾಯಿತು. ಮೆರವಞೆಗೆಯ ಉದ್ದಕ್ಕೂ ಸಾರ್ವಜನಿಕರು ಅಲ್ಲಲ್ಲಿ ಮದ್ರಸಾದ ಮಕ್ಕಳಿಗೆ ತಂಪು ಪಾನೀಯ ಮತ್ತು ಸಿಹಿತಿಂಡಿಗಳನ್ನು ಹಂಚಿದರು.
ಈ ಸಂಧರ್ಭದಲ್ಲಿ ಮಸೀದಿಗಳ ಧರ್ಮಗುರುಗಳು,ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಶರ್ಫುದ್ದೀನ್ ಶೇಖ್ ಕರಾವಳಿ ಪ್ರಾದೀಕಾರದ ಮಂಡಳಿಯ ಅಧ್ಯಕ್ಷರಾದ ಎಂ ಎ ಗಫೂರ್,ಮುಖಂಡರಾದ ಇಮ್ರಾನ್ ಮಜೂರ್,ನಝೀರ್ ಕೊಂಬಗುಡ್ಡೆ ನಝೀರ್ ಕಾಪು, ಸಾದಿಕ್ ಕೆ ಪಿ,ಐಡಿಯಲ್ ಇಬ್ರಾಹಿಂ,ಎಂ ಚ್ ಹಮೀದ್,ಸಾಬಾನ್ ಕರಂದಾಡಿ,ಹಾಜಬ್ಬ ಮಜೂರು,,ಆಸೀಫ್ ಕೊಂಬಗುಡ್ಡೆ,,ಸಇನ್ನಿತರ ಅನೇಕ ಸಮಾಜದ ಮುಖಂಡರು ಉಪಸ್ಥಿತರಿದ್ದರು.


ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions