Advertisement

ಜಾತಿಗಣತಿ - ಮುಸ್ಲಿಂ ಬಾಂಧವ್ಯ ವೇದಿಕೆ ಸಲಹೆ

ದೇಶದಲ್ಲಿ ಮುಸ್ಲಿಮರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯು ದಲಿತರಿಗಿಂತಲೂ ಕೆಳಮಟ್ಟದಲ್ಲಿದೆ ಎನ್ನುವುದನ್ನು 2006ರಲ್ಲಿ ಮಂಡಿಸಲ್ಪಟ್ಟ ಜಸ್ಟಿಸ್ ರಾಜೀoದ್ರ ಸಚ್ಚಾರ್ ವರದಿಯು ದೃಢಪಡಿಸಿದೆ.

ಹೀಗಿದ್ದರೂ, ಮುಸ್ಲಿಮರಲ್ಲಿರುವ ಬಹುಸಂಖ್ಯಾತ ಬಡವರ್ಗದ ಆರ್ಥಿಕ ಮಟ್ಟವನ್ನು ಸೂಚಿಸುವ ಮತ್ತು ಅರಿಯುವ ವರ್ಗೀಕರಣ ಸರಿಯಾಗಿ ಮಾಡದ ಕಾರಣಕ್ಕೆ, ವಂಶ, ವೃತ್ತಿ ಮತ್ತು ಭಾಷೆಯ ಮೂಲಕ ಗುರುತಿಸಿ ಮೀಸಲಾತಿ ಹಾಗೂ ಇತರ ಸೌಲಭ್ಯಗಳ ಫಲಾನುಭವಿ ವರ್ಗವನ್ನು ಎಲ್ಲ ಸರ್ಕಾರಗಳು ನಿರ್ಣಯಿಸಿವೆ.

ಅದರಂತೆಯೇ ಈ ಬಾರಿಯ ಸಮೀಕ್ಷೆಯಲ್ಲೂ ಸಮುದಾಯದಲ್ಲಿರುವ ಈ ವರ್ಗಗಳನ್ನು ಗುರುತಿಸಲು ಉಪಜಾತಿಯ ಕಾಲಂನಲ್ಲಿ, ಹಿಂದೆ ಗುರುತಿಸಿದಂತೆ ವಂಶ, ವೃತ್ತಿ ಮತ್ತು ಭಾಷೆಯ ಮೂಲಕವೇ ಗುರುತಿಸಿಕೊಳ್ಳಬೇಕೆಂದು ಮುಸ್ಲಿಂ ಬಾಂಧವ್ಯ ವೇದಿಕೆ ಮುಸ್ಲಿಮರಲ್ಲಿ ಮನವಿ ಮಾಡಿದೆ.

ಮುಸ್ಲಿಮರಲ್ಲಿ ಸೈಯದ್, ಶೇಖ್, ಪಠಾಣ್, ಬುಖಾರಿ ಅನ್ಸಾರಿ, ಖುರೈಷಿ, ಮೊಮಿನ್ ಮುಂತಾದವುಗಳು ವಂಶಗಳಿಂದ ಗುರುತಿಸಲ್ಪಡುವ ವರ್ಗಗಳು. ಪಿಂಜಾರ, ನದಾಫ್, ಭಂಡಾರಿ, ದರ್ವೇಶ್, ಹಮಾಲಿ, ಕಸಾಯಿ, ಕಾಸಾಬ್, ಫಕೀರ್, ಬಾವಾ, ಜಾತಗಾರ, ಮನಿಯಾರ, ಪೂಲಮಾಲಿ, ಫನಿಬಂದ, ಚಪ್ಪರಬಂದ, ಜೋಲ್ಹ, ಬಾಗ್ಬಾನ್, ನಾಲ್ಬಾನ್, ಚತರ್ಬಂದ್, ರೈತ ಹೀಗೆ, ಹಲವಾರು ವೃತ್ತಿ ವರ್ಗಗಳಿವೆ. ದಖ್ಖನಿ, ಬ್ಯಾರಿ, ನವಾಯಿತಿ, ದಾಲ್ದಿ ಮುಂತಾದವುಗಳು ಮುಸ್ಲಿಮರಲ್ಲಿರುವ ಭಾಷಾ ಸಮುದಾಯಗಳು.

ಉಪಜಾತಿಯ ಕಾಲಂನಲ್ಲಿ ತಾವು ಗುರುತಿಸಿಕೊಳ್ಳುವ ಈ ಮೇಲಿನ ಕ್ರಮದಂತೆ ನಮೂದಿಸಬೇಕು ಎಂದು ಮುಸ್ಲಿಮರಿಗೆ ಮನವಿ ಮಾಡಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ಝಾಕೀರ್ ಹುಸೇನ್ ಉಚ್ಚಿಲ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions