ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿರುವ ಗುರು ಸಂದೇಶ ಸಾಮರಸ್ಯ ಜಾಥಾ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಮತ್ತು ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯದವರು ಜಾಥಾ ಕಟಪಾಡಿ ಪೇಟೆ ಪ್ರವೇಶಿಸಿದಾಗ ಆತ್ಮೀಯವಾಗಿ ಸ್ವಾಗತಿಸಿದರು. ಜಾಥಾದಲ್ಲಿ ಸಾಗಿ ಬಂದವರಿಗೆಲ್ಲಾ ತಂಪು ಪಾನೀಯ ಹಾಗೂ ಸಿಹಿ ತಿಂಡಿಗಳನ್ನು ನೀಡಿ ಸೌಹಾರ್ದತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಸ್ಲೀಂ ಸಮುದಾಯದ ನಾಯಕರುಗಳಾದ ಎಂ ಎ ಗಫೂರ್ ಮತ್ತು ಶರ್ಫುದ್ದೀನ್ ಶೇಖ್ ರವರು ಬ್ರಹ್ಮಶ್ರೀ ನಾರಾಯಣ ಗುರುಗಳ ಒಂದೇ ಜಾತಿ ಒಂದೇ ಮತ ಒಂದೇ ಧರ್ಮ ಸಂದೇಶ ಎಲ್ಲಾ ಜನರಿಗೂ ಮಾರ್ಗದರ್ಶನವಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಸಮಾಜದಲ್ಲಿ ಎಲ್ಲಾ ಸಮುದಾಯದವರು ಭಾಗವಹಿಸಬೇಕೆಂದು ಹೇಳಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಬಿಲ್ಲವ ಯುವ ವೇದಿಕೆ ಅಧ್ಯಕ್ಷರಾದ ಪ್ರವೀಣ್ ಪೂಜಾರಿ, ನಾಯಕರಾದ ಪ್ರಶಾಂತ್ ಜತ್ತನ್ನ, ಪ್ರಮೀಳಾ ಜತ್ತನ್ನ, ದೀಪಕ್ ಕುಮಾರ್ ಎರ್ಮಾಳ್, ಸರಸು ಬಂಗೇರ, ಉದಯ್ ಕಾಪು, ಹಸನ್ ಮುನಿಪುರ ರಮೀಝ್ ಹುಸೈನ್, ರಿಯಾಜ್ ಮುದರಂಗಡಿ, ಅನ್ವರ್ ಕಟಪಾಡಿ, ನಯೀಮ್ ಕಟಪಾಡಿ, ನಿಯಾಜ್ ಪಡುಬಿದ್ರಿ, ರಶೀದ್, ಯೂಸುಫ್, ಉಸ್ಮಾನ್ ಮುಲ್ಲಾರ್, ಫಾರೂಕ್ ಮಜೂರು, ಮುಂತಾದ ಅನೇಕ ನಾಯಕರು ಉಪಸ್ಥಿತರಿದ್ದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions