ಗುಡಿ ಕೈಗಾರಿಕೆ ಮತ್ತು ಗೃಹ ಉತ್ಪನ್ನದ ಮಾರಾಟಗಾರರಿಗೆ ಉತ್ತೇಜನ ನೀಡುವ ಸಲುವಾಗಿ ಉಡುಪಿಯ ಅಜ್ಜರಕಾಡು ಮೈದಾನ ಬಳಿ ಟೌನ್ ಹಾಲ್‌ನಲ್ಲಿ ದಿನಾಂಕ: ಅಕ್ಟೋಬರ್ 9 ಶುಕ್ರವಾರದಿಂದ ಅಕ್ಟೋಬರ್ 11 ಆದಿತ್ಯವಾರದವರೆಗೆ ಬೆಳಿಗ್ಗೆ 10 ರಿಂದ ರಾತ್ರಿ 9.30ರ ವರೆಗೆ ಬೃಹತ್ ಆಹಾರ ಮತ್ತು ಸ್ವದೇಶಿ ಉತ್ಪನ್ನಗಳ ಮೇಳ ಆಯೋಜಿಸಲಾಗಿದೆ ಎಂದು ವಸುದೈವ ಕುಟುಂಬಕಂ ನ ಪೂರ್ಣಿಮಾ ಶೆಟ್ಟಿಯವರು ತಿಳಿಸಿದರು. ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ಈ ಹಿಂದೆ ರಾಜ್ಯಾದ್ಯಂತ ಹಲಸು ಮತ್ತು ಸ್ವದೇಶಿ ಮೇಳಗಳ ಆಯೋಜಕರಾದ ಬೆನಕ ಇವೆಂಟ್ಸ್ ರವರು ನಮ್ಮ ಜೊತೆ ಸಹಕಾರ ನೀಡುತ್ತಿದ್ದಾರೆ.
ಈ ಮೇಳದಲ್ಲಿ ಸಂಪೂರ್ಣ ನೈಸರ್ಗಿಕ ಆಹಾರ ಪದಾರ್ಥಗಳನ್ನು ಸ್ಥಳದಲ್ಲಿ ಕೂಡಲೇ ಮಾಡಿಕೊಡುತ್ತಾರೆ. ಇದಲ್ಲದೆ ಕರಾವಳಿಯ ಹೆಮ್ಮೆಯ ಭಟ್ & ಭಟ್ ಉತ್ಪನ್ನಗಳು, ಕೊಕೊಗುರು ಉತ್ಪನ್ನಗಳು, ಆರ್‌ಕೆ ಪಿಕಲ್ಸ್ ಉತ್ಪನ್ನಗಳು, ಕಲ್ಪರಸ, ಚೆನ್ನಪಟ್ಟ ಬೊಂಬೆ, ಇಲ್‌ಲ್ ಸೀರೆ, ಮಕ್ಕಳ ಮತ್ತು ಹಿರಿಯರ ಸಿದ್ಧ ಉಡುಪುಗಳು, ನಿತ್ಯ ಬಳಕೆಯ ಆಯುರ್ವೇದ ಉತ್ಪನ್ನಗಳ ನೂರಾರು ಮಳಿಗೆಗಳು ಆಗಮಿಸಲಿದ್ದು ಒಂದೇ ಸೂರಿನಲ್ಲಿ ಎಲ್ಲಾ ಉತ್ಪನ್ನಗಳ ಖರೀದಿ ಮಾಡಬಹುದು. ಪ್ರವೇಶ ಸಂಪೂರ್ಣ ಉಚಿತವಾಗಿದ್ದು ಗ್ರಾಹಕರು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದರು. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions