ಕರ್ನಾಟಕ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿ ಕುಂದಾಪುರ ತಾಲೂಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘ ಸಿಐಟಿಯು ವತಿಯಿಂದ ಮುಖ್ಯಮಂತ್ರಿಯವರಿಗೆ ಸಾಮೂಹಿಕವಾಗಿ ಪೋಸ್ಟ್ ಕಾರ್ಡ್ ಪೋಸ್ಟ್ ಮಾಡಲಾಯಿತು. ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿ ಇರುವ ಪೋಸ್ಟ್ ಆಫೀಸ್ ಕಾರ್ಡ್ ಪೋಸ್ಟ್ ಮಾಡಿ ನಡೆದ ಆಟೋ ಚಾಲಕರ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ವಿ ರಾಜ್ಯದಾದ್ಯಂತ ಇರುವ 8 ಲಕ್ಷ ಆಟೋ ಚಾಲಕರ ಹಾಗೂ ಅವರ ಕುಟುಂಬಕ್ಕೆ ಬೈಕ್ ಟ್ಯಾಕ್ಸಿ ಮಾರಕವಾಗಲಿದೆ ಎಂದು ಅಭಿಪ್ರಾಯ ಪಟ್ಟರು.
ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ ಸ್ವಾಗತಿಸಿ, ಅಧ್ಯಕ್ಷರಾದ ರಮೇಶ್ ಅವರು ವಿ ಪ್ರಸ್ತಾವನೆ ಮಾತಾಡಿದರು. ಸಿಐಟಿಯು ಮುಖಂಡರಾದ H ನರಸಿಂಹ , ಸಂಘದ ಗೌರವ ಅಧ್ಯಕ್ಷರಾದ ಕರುಣಾಕರ, ಹಾಗು ಮುಖಂಡರಾದ ಮಲ್ಲಿಕಾರ್ಜುನ, ಶೇಖರ್ ಪೂಜಾರಿ, ಕೃಷ್ಣ, ನರಸಿಂಹ ಕೇಶವ ಗೋವಿಂದ ಗುಡಾರಹಕ್ಲು, ರವಿ ವಿ ಎಂ, ಸಂತೋಷ್ ಕಲ್ಲಗರ ಉಪಸ್ಥಿತರಿದ್ದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions